ಕೊವಿಡ್ 19 ಪ್ರಕರಣಗಳಿಂದ ಜನರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಹೀಗಿರುವಾಗ ಎಲ್ಲಾಕಡೆ ಕೊವಿಡ್ ವ್ಯಾಕ್ಸಿನೇಶನ್ ಪ್ರಮಾಣಪತ್ರವನ್ನು ಸುರಕ್ಷತೆಗೋಸ್ಕರ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಇಟಲಿಯ 22 ವರ್ಷದ ಯುವಕ ತನ್ನ ಕೊವಿಡ್ ವ್ಯಾಕ್ಸಿನೇಶನ್ ಪಡೆದಿರುವ ಕ್ಯೂಆರ್ ಕೋಡ್ಅನ್ನು ಕೈ ಮೇಲೆಯೇ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಎಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇದ್ದರೂ ಅವರು ತಮ್ಮ ಕೈಗಳನ್ನು ತೋರಿಸುತ್ತಾರೆ.
ಟ್ಯಾಟೂ ಹಾಕಿಸಿಕೊಂಡ ಯುವಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ವಿಡಿಯೋದಲ್ಲಿ ಗಮನಿಸಿವಂತೆ ಇಬ್ಬರು ಯುವಕರು ಮೆಕ್ಡೊನಾಲ್ಡ್ಗೆ ಪ್ರವೇಶಿಸುತ್ತಿದ್ದಾರೆ. ಬಾಗಿಲೆದುರಿಗೇ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಯುವಕ ತನ್ನ ಕೈಗಳ ಮೇಲಿದ್ದ ಕ್ಯೂಆರ್ ಕೋಡ್ ನೀಡಿ ಸ್ಕ್ಯಾನ್ ಮಾಡಿಸಿದ್ದಾನೆ.
ಇದು ವಿಭಿನ್ನವಾಗಿದೆ. ಇದನ್ನು ನಾನು ಇಷ್ಪಡುತ್ತೇನೆ ಎಂದು ಟ್ಯಾಟೂ ಹಾಕಿಸಿಕೊಂಡ ಯುವಕ ಪತ್ರಿಕೆಯೊಂದರ ಜತೆ ಮಾತನಾಡಿ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ನಾನು ಕಿಂಚಿತ್ತೂ ಯೋಚಿಸಿ ತಡ ಮಾಡಲಿಲ್ಲ. ಎಲ್ಲೆಡೆ ಕೊವಿಡ್ ವ್ಯಾಕ್ಸಿನೇಶನ್ ಪ್ರಮಾಣ ಪತ್ರವನ್ನು ತೋರಿಸಲೇಬೇಕು. ಹಾಗಾಗಿ ಇದು ನನ್ನ ಕೈಮೇಲೆ ಯಾವಾಗಲೂ ಇರುತ್ತದೆ ಎಂದು ಹೇಳಿದ್ದಾರೆ.
ನಾನು ಈ ಮೊದಲು ಇನ್ನಿತರ ಬೇರೆ ಟ್ಯೂಟೂಗಳನ್ನೂ ಹಾಕಿಸಿಕೊಂಡಿದ್ದೇನೆ. ಆದರೆ ಈ ರೀತಿಯ ಟ್ಯಾಟೂ ನೋಡಿ ಮನೆಯವೂ ದಿಗ್ಭ್ರಾಂತರಾದರು. ನನ್ನ ತಂದೆಯೂ ಸಹ ಒಮ್ಮೆಲೆ ಆಶ್ಚರ್ಯಗೊಂಡರು ಎಂದು ಯುವಕ ಪ್ರತಿಕ್ರಿಯಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು ಕೆಲವರು ಈ ವಿಚಾರವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ಸಾಂಕ್ರಾಮಿಕ ರೋಗ ನಿಂತು ಹೋದ ನಂತರ ಟ್ಯಾಟೂ ಉಪಯೋಗಕ್ಕೆ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಆಗಸ್ಟ್6 ರಿಂದ ಇಟಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಾಜರಾಗಲು, ಕೊವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರವನ್ನು ತೋರಿಸುವುದು ಚಾಲ್ತಿಯಲ್ಲಿದೆ. ವಸ್ತು ಸಂಗ್ರಹಾಲಯ, ಚಿತ್ರಮಂದಿರ, ಒಳಾಂಗಣ ಕ್ರೀಡಾ ಸ್ಥಳಗಳಿಗೆ ಹೋಗಲು ಡಿಜಿಟಲ್ ಕ್ಯೂಆರ್ ಕೋಡ್ ಅಗತ್ಯವಿದೆ.
ಇದನ್ನೂ ಓದಿ:
Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ
Viral Video: ಅಡುಗೆ ಮನೆ ಪ್ರವೇಶಿಸಿ ಆಹಾರ ಕದಿಯುತ್ತಿರುವ ಬುದ್ಧಿವಂತ ಶ್ವಾನ; ವಿಡಿಯೊ ನೋಡಿ
(Boy get qr code of covid vaccination tattoo on hand viral video)
Published On - 11:35 am, Tue, 24 August 21