ಆಮೆಯೊಂದು ಹಕ್ಕಿಯನ್ನು ಹಿಡಿದು ಕೊಂದ ದೃಶ್ಯ ಮೊಟ್ಟ ಮೊದಲ ಬಾರಿಗೆ ಸೆರೆ; ಅಪರೂಪದ ವಿಡಿಯೋ ವೈರಲ್

ಈ ರೀತಿಯ ಘಟನೆಗಳು ಹಿಂದೆ ನಡೆದಿರುವ ಸಾಧ್ಯತೆ ಇದೆಯಾದರೂ ಇದು ಮೊಟ್ಟಮೊದಲು ದಾಖಲಾದ ದೃಶ್ಯ. ಅಂದರೆ, ಆಮೆ ಹಕ್ಕಿಯನ್ನು ಕೊಂದ ದೃಶ್ಯ ಈ ಹಿಂದೆ ಎಂದೂ ಸೆರೆಯಾಗಿರಲಿಲ್ಲ. ಹಾಗಾಗಿ, ಇದು ಪ್ರಾಣಿ ಪ್ರಪಂಚದ ಹೊಸದೊಂದು ಘಟನೆಯಂತೆಯೇ ಚರ್ಚೆ ಆಗುತ್ತಿದೆ.

ಆಮೆಯೊಂದು ಹಕ್ಕಿಯನ್ನು ಹಿಡಿದು ಕೊಂದ ದೃಶ್ಯ ಮೊಟ್ಟ ಮೊದಲ ಬಾರಿಗೆ ಸೆರೆ; ಅಪರೂಪದ ವಿಡಿಯೋ ವೈರಲ್
ಹಕ್ಕಿಯನ್ನು ಕೊಂದ ಆಮೆ
Follow us
TV9 Web
| Updated By: Skanda

Updated on: Aug 24, 2021 | 8:44 AM

ಪ್ರಾಣಿ ಪ್ರಪಂಚದ ಕೆಲವು ಘಟನೆಗಳು ಕೆಲವೊಮ್ಮೆ ನಮ್ಮ ಲೆಕ್ಕಾಚಾರವನ್ನೂ ಮೀರಿಸಿರುತ್ತವೆ. ಸಾಧು ಪ್ರಾಣಿ, ಕ್ರೂರ ಪ್ರಾಣಿ ಎಂದೆಲ್ಲಾ ನಾವು ವರ್ಗೀಕರಿಸಿದರೂ ಅದು ಅಂತಿಮ ಸತ್ಯವಲ್ಲ ಎನ್ನುವುದನ್ನು ಪ್ರಕೃತಿ ಸಾಬೀತುಪಡಿಸುತ್ತಲೇ ಇರುತ್ತದೆ. ಹುಲಿ, ಸಿಂಹ, ಚಿರತೆಗಳಿಗೆ ಜಿಂಕೆ ಆಹಾರವೆನಿಸಿಕೊಂಡಿದ್ದರೂ ಕೆಲವೊಮ್ಮೆ ಅವು ಕೊಲ್ಲದೇ ಬಿಟ್ಟ ದೃಶ್ಯಗಳೂ ಸೆರೆಯಾಗಿವೆ. ಅದೇ ರೀತಿ, ಬಲಿಯಾಗಬೇಕಾದ ಪ್ರಾಣಿಗಳೇ ತಿರುಗಿಬಿದ್ದು ಬೇಟೆಯಾಡಲು ಬಂದವುಗಳನ್ನು ಕೊಂದ ಉದಾಹರಣೆಗಳೂ ಇವೆ. ಇಂದು ನಾವು ಇಲ್ಲಿ ತೋರಿಸುವ ವಿಡಿಯೋ ಕೂಡಾ ಈ ಅಚ್ಚರಿಗಳ ಸಾಲಿಗೆ ಹೊಸ ಸೇರ್ಪಡೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ, ಇಲ್ಲಿ ಆಮೆಯೊಂದು ಹಕ್ಕಿಯನ್ನು ಕೊಂದು ಹಾಕಿದ ದೃಶ್ಯ ಸೆರೆಯಾಗಿದೆ.

ಆಮೆ ಹಕ್ಕಿಯನ್ನು ಸಾಯಿಸಿದೆ ಎಂಬ ಸುದ್ದಿಯೇ ಕೊಂಚ ವಿಚಿತ್ರವೆನಿಸುತ್ತದೆ. ಕಾರಣ ರೆಕ್ಕೆ ಬಡಿದು ಮುಗಿಲೆತ್ತರಕ್ಕೆ ಹಾರುವ ಹಕ್ಕಿಯೊಂದು ತೆವಳಿಕೊಂಡು ಸಾಗುವ ಆಮೆಯ ಬಾಯಿಗೆ ಸಿಗುವುದೆಂದರೆ ಅದು ನಂಬಲು ತುಸು ಕಷ್ಟದ ವಿಷಯ. ಅಂದಹಾಗೆ, ಈ ರೀತಿಯ ಘಟನೆಗಳು ಹಿಂದೆ ನಡೆದಿರುವ ಸಾಧ್ಯತೆ ಇದೆಯಾದರೂ ಇದು ಮೊಟ್ಟಮೊದಲು ದಾಖಲಾದ ದೃಶ್ಯ. ಅಂದರೆ, ಆಮೆ ಹಕ್ಕಿಯನ್ನು ಕೊಂದ ದೃಶ್ಯ ಈ ಹಿಂದೆ ಎಂದೂ ಸೆರೆಯಾಗಿರಲಿಲ್ಲ. ಹಾಗಾಗಿ, ಇದು ಪ್ರಾಣಿ ಪ್ರಪಂಚದ ಹೊಸದೊಂದು ಘಟನೆಯಂತೆಯೇ ಚರ್ಚೆ ಆಗುತ್ತಿದೆ.

ದೃಶ್ಯದಲ್ಲಿ ದೈತ್ಯ ಆಮೆ ಪುಟಾಣಿ ಹಕ್ಕಿಯ ಕತ್ತು ಹೊಸಕಿ ಹಾಕುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ನೆಲದ ಮೇಲೆ ಕುಳಿತ ಚಿಕ್ಕ ಹಕ್ಕಿಯೊಂದು ಆಮೆ ತನ್ನೆದುರಿಗೆ ಬಂದಾಗಲೂ ಯಾವುದೇ ಭಯ ಭೀತಿ ಇಲ್ಲದೇ ರೆಕ್ಕೆ ಬಡಿದಿದೆ. ಬಹುಶಃ ಆ ಹಕ್ಕಿಯೂ ಆಮೆಯನ್ನು ಅಪಾಯಕಾರಿ ಎಂದು ಭಾವಿಸಿದಂತಿಲ್ಲ. ಕೆಲವು ಸೆಕೆಂಡುಗಳ ತನಕ ಆಮೆ ಹತ್ತಿರ ಬರುವುದು, ಪುಟಾಣಿ ಪಕ್ಷಿ ರೆಕ್ಕೆ ಬಡಿದು ಅತ್ತಿತ್ತ ಸರಿಯುವುದು ನಡೆದಿದೆ.

ಆಮೆ ಬಾಯಿ ತೆರೆದು ಹಕ್ಕಿಯನ್ನು ಕಚ್ಚಲು ಯತ್ನಿಸಿದ್ದರೂ ಆ ಹಕ್ಕಿ ಮಾತ್ರ ತಲೆ ಕೆಡಿಸಿಕೊಳ್ಳದೇ ಆಮೆಯನ್ನು ಮತ್ತಷ್ಟು ಸತಾಯಿಸಿದೆ. ಆದರೆ, ಕೊನೆಗೆ ಮೆಲ್ಲಗೆ ಹತ್ತಿರ ಬಂದ ಆಮೆ ಗಬ್ಬಕ್ಕನೆ ಹಕ್ಕಿಯ ಕೊರಳಿಗೆ ಬಾಯಿ ಹಾಕಿ ಕಚ್ಚಿ ಮತ್ತೆ ಅದನ್ನು ಅಲ್ಲಿಯೇ ಬಿಟ್ಟಿದೆ. ಆಮೆಯ ಒಂದೇ ಒಂದು ಕಡಿತಕ್ಕೆ ಹಕ್ಕಿ ಉಸಿರುಕಳೆದುಕೊಂಡಿದೆ. ಈ ಸಂಪೂರ್ಣ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆಗಸ್ಟ್​ 23ರಂದು ಕರೆಂಟ್​ ಬಯಾಲಜಿ ಜರ್ನಲ್​ ಅದನ್ನು ಪ್ರಕಟಿಸಿದೆ.

ವಿಡಿಯೋದಲ್ಲಿ ಹಕ್ಕಿ ಉಸಿರುಕಳೆದುಕೊಂಡು ನೆಲಕ್ಕೆ ಉರುಳುವ ತನಕದ ದೃಶ್ಯ ಮಾತ್ರ ಸೆರೆಯಾಗಿದೆಯಾದರೂ ಅಲ್ಲಿದ್ದವರು ನೀಡಿರುವ ಮಾಹಿತಿ ಪ್ರಕಾರ ಕೆಲ ಕ್ಷಣಗಳ ಬಳಿಕ ಆಮೆ ಆ ಹಕ್ಕಿಯನ್ನು ಸಂಪೂರ್ಣ ತಿಂದು ತೇಗಿದೆಯಂತೆ. ಇದುವರೆಗೆ ಇಂತಹ ದೃಶ್ಯವೊಂದು ಯಾರ ಕಣ್ಣಿಗೂ ಬಿದ್ದಿರಲಿಲ್ಲವಾದ್ದರಿಂದ ಇದು ಅತ್ಯಂತ ಕುತೂಹಲ ಕೆರಳಿಸಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಗರ್ಭಿಣಿ ಆಮೆ; ಮೊಟ್ಟೆಗಳಿಗೆ ಜನ್ಮದಾತನಾದ ವಿಜ್ಞಾನಿ ; ವಿಡಿಯೋ ನೋಡಿ 

Viral Video: ಸಿಂಹಕ್ಕೆ ಕಾಟ ಕೊಡುತ್ತಿದೆ ಪುಟ್ಟ ಆಮೆ! ಸಿಂಹದ ಪಜೀತಿ ಕೇಳುವವರು ಯಾರೂ ಇಲ್ವೇ?

(Giant tortoise hunts and eats small bird first documented video goes viral)

ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ