ಚಲಿಸುತ್ತಿರುವ ಟ್ರಕ್‌ನ ಹಿಂದೆ ಇಬ್ಬರು ಹುಡುಗರು ಸ್ಕೇಟಿಂಗ್ ಸಾಹಸ ಪ್ರದರ್ಶಿಸುತ್ತಿರುವ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಕೇಟ್‌ಬೋರ್ಡ್‌ಗಳನ್ನು ಧರಿಸಿರುವ ಇಬ್ಬರು ಹುಡುಗರು ವೇಗವಾಗಿ ಬರುತ್ತಿರುವ ಟ್ರಕ್‌ನ ಹಿಂಭಾಗವನ್ನು ಹಿಡಿದು ನೇತಾಡುತ್ತಾ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ಹುಡುಗ ಸ್ಕೇಟಿಂಗ್ ಮಾಡುತ್ತಾ ಬಂದು ಟ್ರಕ್‌ನ ಹಿಂಭಾಗವನ್ನು ಹಿಡಿದು ಚಲಿಸುತ್ತಿದ್ದರೆ, ಇನ್ನೊಬ್ಬ ಈತನ ಸಾಹಸವನ್ನು ವಿಡಿಯೋ ಮಾಡುತ್ತಿದ್ದಾನೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
इस तरह के स्टंट करके अपनी जान को खतरे में डालना बिल्कुल गैर-जिम्मेदाराना है।
अगर कुछ हो जाता, तो घर वाले बेगुनाह ट्रक वाले पर FIR दर्ज करवा देते, जबकि असल गलती खुद की होती।
हमारे देश में लोगों की सोच कब बदलेगी ?#viralvideo pic.twitter.com/2f24LpeBwu
— Ruksar Khan (@Ruksar_Khan7) August 12, 2024
ಇದನ್ನೂ ಓದಿ: ಇಬ್ಬರು ಯುವತಿಯರ ಜೊತೆ ಕಾರಿನಲ್ಲಿ ಯುವಕನ ಸರಸ ಸಲ್ಲಾಪ; ವಿಡಿಯೋ ವೈರಲ್
@Ruksar_Khan7 ಎಂಬ ಟ್ವಿಟರ್ ಖಾತೆಯಲ್ಲಿ ಆಗಸ್ಟ್ 12ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಇದು ಸಂಪೂರ್ಣ ಬೇಜವಾಬ್ದಾರಿಯುತ ಕೃತ್ಯ” ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಈ ಬಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ