
ಸೋಶಿಯಲ್ ಮೀಡಿಯಾದಲ್ಲಿ ಬ್ರೈನ್ ಟೇಸರ್ (brain teaser) ಸೇರಿದಂತೆ ಇನ್ನಿತ್ತರ ಒಗಟಿನ ಪ್ರಶ್ನೆಗಳು ವೈರಲ್ ಆಗುತ್ತಿರುತ್ತವೆ. ಈ ಒಗಟುಗಳೇ ಹಾಗೆ, ನೋಡಲು ಸುಲಭವಾಗಿ ಕಂಡರೂ ಒಗಟನ್ನು ಬಿಡಿಸಿ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಈ ಗಣಿತದ ಪ್ರಶ್ನೆಗಳಾಗಿ ಬಿಟ್ಟರೆ ಹೆಚ್ಚಿನ ಸಮಯ ತೆಗೆದು ಕೊಳ್ತಾರೆ. ಆದರೆ ಕೆಲವರು ನೀರು ಕುಡಿದಷ್ಟೇ ಸಲೀಸಾಗಿ ಉತ್ತರ ಹೇಳ್ತಾರೆ. ಸ್ಪಲ್ಪ ತಲೆಕೆಡಿಸಿಕೊಂಡ್ರೆ ಉತ್ತರ ಖಂಡಿತ ಸಿಗುತ್ತದೆ. ಇದೀಗ ಸರಳ ಹಾಗೂ ಕುತೂಹಲಕಾರಿ ಗಣಿತದ ಪ್ರಶ್ನೆಯೊಂದು ವೈರಲ್ ಆಗಿದೆ. ಈ ಟ್ರಿಕ್ಕಿಯಾಗಿರುವ ಲೆಕ್ಕ ಬಿಡಿಸಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.
2+3 = 10, 8+4 = 96, 7+2 = 63, 6+5 = 66 ಮತ್ತು 9+5 = ?. ಇದು ಗಣಿತದ ಟ್ರಿಕ್ಕಿ ಪ್ರಶ್ನೆಯಾಗಿದೆ. ಈ ಪ್ರಶ್ನೆ ನೋಡೋಕೆ ಸರಳವಾಗಿ ಕಂಡರೂ ಕಠಿಣವಾಗಿದೆ. ಈ ಗಣಿತದ ಒಗಟನ್ನು 5 ಸೆಕೆಂಡುಗಳಲ್ಲಿ ಪರಿಹರಿಸಿ ಉತ್ತರ ಹೇಳಿ.
ಇದನ್ನೂ ಓದಿ: ನೀವು ಜಾಣರೇ, ಈ ಒಗಟಿನ ಪ್ರಶ್ನೆ ಬಿಡಿಸಿ ಉತ್ತರ ಹೇಳಿ ನೋಡೋಣ
ತಲೆಗೆ ಹುಳ ಬಿಡುವ ಈ ಗಣಿತದ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವಲ್ಲಿ ಸೋತಿದ್ದೀರಾ. ಬಹುತೇಕ ಬಳಕೆದಾರರಿಗೆ ಒಗಟು ಪರಿಹರಿಸುವುದು ಕಠಿಣವಾಗಿದೆ. ಈ ಗಣಿತದ ಪಝಲ್‌ನ ಉತ್ತರ 126. ನೀವು ಈ ಲೆಕ್ಕವನ್ನು ಕೆಳಗಿನಂತೆ ಬಿಡಿಸಬೇಕು. 2+2=10 ( 2*2+3*2) , 8+4=96 ( 8*8+4*8) ಹಾಗೂ 9+5= ( 9*9+5*9 ) = 126. ನೀವು ಕಂಡು ಕೊಂಡ ಉತ್ತರ ನಾವು ಹೇಳಿದ ಉತ್ತರ ಎರಡು ಕೂಡ ಒಂದೇ ರೀತಿ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ