ನೆಲಮಹಡಿಯಲ್ಲಿ ನೆಲೆಸಿರುವ ಹುಡುಗಿಯೊಬ್ಬಳು ಮೂರು ಮಹಡಿಗಳುಲ್ಲ ಕಟ್ಟಡದ ಮೇಲ ಬಟ್ಟೆಗಳನ್ನ ಒಣಗಲು ಹಾಕಿ ತನ್ನ ಮನೆಯೊಳಗೆ ಇರುತ್ತಾಳೆ. ಈ ವೇಳೆ ಮಳೆ ಸುರಿಯಲು ಆರಂಭವಾದ ಹಿನ್ನೆಲೆ ಆಕೆ ಬಿಸಿಲಿಗೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆಯಲು ಮೇಲಕ್ಕೆ ಹೊರಟಿದ್ದಾಳೆ. ಇದನ್ನೇ ಮುಂದಿಟ್ಟುಕೊಂಡು ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವ ಚಿತ್ರವೊಂದನ್ನು ಸಿದ್ಧಪಡಿಸಲಾಗಿದೆ. ಅದೇನೆಂದು ಹೇಳುತ್ತೇವೆ. ಮುಂದಕ್ಕೆ ಓದಿ.
ಮೋಜಿನ ಆಟಗಳು ಮತ್ತು ಒಗಟುಗಳನ್ನು ಆಡುವುದನ್ನು ಆನಂದಿಸುವವರಿಗೆ ಇಲ್ಲಿದೆ ಒಂದು ಚಿತ್ರ. ಮೆದುಳಿನ ಕಸರತ್ತುಗಳು ಹೆಚ್ಚು ಆಸಕ್ತಿದಾಯಕವಾಗಿಸುತ್ತದೆ. ಏಕೆಂದರೆ ಈ ಮೆದುಳಿನ ಆಟಗಳನ್ನು ಸೃಜನಶೀಲ ಚಿಂತನೆಯೊಂದಿಗೆ ಪರಿಹರಿಸಲಾಗುತ್ತದೆ. ಆದ್ದರಿಂದ, ನಾವು ಆಸಕ್ತಿದಾಯಕ ಮೆದುಳಿನ ಕಸರತ್ತಿನೊಂದಿಗೆ ಬಂದಿದ್ದೇವೆ. ಚಿತ್ರದಲ್ಲಿ ಇರುವಂತೆ ಹುಡುಗಿ ಮೂರ್ನಾಲ್ಕು ಮಹಡಿಗಳನ್ನು ಹತ್ತಲು ಎಷ್ಟು ಏಣಿಗಳನ್ನು ಮತ್ತು ಯಾವ ಏಣಿಗಳನ್ನು ಬಳಸಬೇಕು ಎಂಬುದನ್ನು ನೀವು ಗುರುತಿಸಬೇಕು. ಈ ಸವಾಲನ್ನು ಕೇಲವ 20 ಸೆಕೆಂಡುಗಳಲ್ಲಿ ಪರಿಹರಿಸಬಹುದು. ಪ್ರಶ್ನೆಗೆ ಉತ್ತರಿಸುವ ಮೊದಲು ನೀವು ಚಿತ್ರವನ್ನು ಎಚ್ಚರಿಕೆಯಿಂದ ನೋಡಬೇಕು. ಏಕೆಂದರೆ ಉತ್ತರವು ನೀವು ಯೋಚಿಸುವಷ್ಟು ಸರಳವಾಗಿಲ್ಲ. ಒಂದು ಎಚ್ಚರಿಕೆಯಂತೆ ಈ ಮೋಜಿನ ಪ್ರಶ್ನೆಗೆ ಉತ್ತರ ನೀಡಬೇಕು. ಚಿತ್ರ ಈ ಕೆಳಗಿನಂತಿದೆ:
ಇದನ್ನೂ ಓದಿ: Optical Illusion: ಅಂಕುಡೊಂಕಾದ ರೇಖೆಗಳ ನಡುವೆ ಅಡಗಿರುವ ಮುದ್ದಾದ ಪ್ರಾಣಿಯನ್ನು ಪತ್ತೆಹಚ್ಚಿ, ಬುದ್ಧಿವಂತಿಕೆಗೊಂದು ಸವಾಲು
ಚಿತ್ರವನ್ನು ಸರಿಯಾಗಿ ಗಮನಿಸಿದ್ದೀರಾ? ಈಗ ನಿಮಗೆ ಸುಲಭವಾಗುವಂತೆ ಮಾಡಲು ಸುಳಿವು ಒಂದನ್ನು ನೀಡುತ್ತೇವೆ. ಮೆದುಳಿಕೆ ಕೊಂಚ ಕೆಲಸ ನೀಡುವ ಈ ಚಿತ್ರದಲ್ಲಿ ಕಾಣಿಸುವ ಏಣಿಗಳಿರುವ ಪ್ರತಿಯೊಂದು ಕೋಣೆಗಳಿಗೆ ತೆರೆದ ಬಾಗಿಲುಗಳಿವೆ. ಕೆಲವೊಂದು ಕೋಣೆಗಳ ಮೂಲಕ ಮಾತ್ರ ಮೇಲಕ್ಕೆ ಹೋಗಲು ಸಾಧ್ಯ. ಒಗಟಿಗೆ ಉತ್ತರ ಕಂಡುಹಿಡಿಯುವ ನಿಮ್ಮ ಸಮಯ ಈಗ ಆರಂಭವಾಗಿದೆ.
ನೀವು ಒಗಟಿಗೆ ಸರಿಯಾದ ಉತ್ತರವವನ್ನು ಪತ್ತೆಹಚ್ಚಿದ್ದರೆ ನಿಮ್ಮ ಬುದ್ಧಿವಂತಿಕೆ ಹಾಗೂ ಮೆದುಳಿನ ಚುರುಕುತನಕ್ಕೆ ಒಂದು ಸಲಾಮ್. ನಿಮ್ಮ ಕೈಯಲ್ಲಿ ಉತ್ತರ ಕಂಡುಹಿಡಿಯಲು ಸಾಧ್ಯವಾಗದಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಒಗಟಿಗೆ ಉತ್ತರ 6. ಆ ಹುಡುಗಿ ಆರು ಏಣಿಗಳನ್ನು ಬಳಸಿ ಮೇಲಕ್ಕೆ ಹೋಗಬೇಕು. ಯಾವುದೆಲ್ಲ ಎಂದು ಈ ಕೆಳಗಿನ ಚಿತ್ರದ ಮೂಲಕ ತೋರಿಸುತ್ತೇವೆ ನೋಡಿ:
ಇದನ್ನೂ ಓದಿ: Viral Video: ನೀರು ತುಂಬಿದ ರಸ್ತೆಯಲ್ಲಿ ಹಾಯಾಗಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್