ಆಪ್ಟಿಕಲ್ ಇಲ್ಯೂಷನ್ (optical illusion) ಅಥವಾ ಒಗಟನ್ನು ಬಿಡಿಸುವಂತಹ ಕೆಲವು ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತದೆ. ಕೆಲವರು ಇಂತಹ ಒಗಟುಗಳನ್ನು ಬಿಡಿಸಲು ಇಷ್ಟ ಪಡುತ್ತಾರೆ. ಆದರೆ ಈ ಬ್ರೈನ್ ಟೀಸರ್ (brain teaser) ಗಳು ಕೇವಲ ಮೆದುಳಿಗೆ ಮಾತ್ರವಲ್ಲದೇ ಬುದ್ಧಿವಂತಿಕೆಗೂ ಸವಾಲು ಎಸಗುತ್ತದೆ. ಹೌದು, ನೋಡಿದಾಗ ಸುಲಭದಾಯಕ ಎನಿಸಿದರೂ ಎಂತಹ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಆದರೆ ಇದೀಗ ವೈರಲ್ ಆಗಿರುವ ಒಗಟಿನಲ್ಲಿ ಪ್ರಶ್ನೆಗಳು ಸಹಜವಾಗಿ ಕಂಡರೂ ಉತ್ತರವನ್ನು ಹುಡುಕಲು ತಲೆ ಖರ್ಚು ಮಾಡಬೇಕಾಗಿದೆ. ಈ ಒಗಟಿನ ಪ್ರಶ್ನೆಯಲ್ಲಿ ವೃದ್ದರೊಬ್ಬರ ಹೆಸರಿ (old man name) ದ್ದು ಅದನ್ನು ಹುಡುಕುವುದೇ ಟ್ರಿಕ್ಕಿಯಾಗಿದೆ.
reel serious ಹೆಸರಿನ ಖಾತೆಯಲ್ಲಿ ಬ್ರೈನ್ ಟೀಸರ್ ಗೆ ಸಂಬಂಧಿಸಿದ ಒಗಟಿನ ಪ್ರಶ್ನೆಯೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ಇಂದು ಒಬ್ಬ ವೃದ್ಧನು ಬೀದಿ ಬದಿಯಲ್ಲಿ ನಡೆದುಕೊಂಡು ಹೋಗುವುದನ್ನು ನೋಡಿದೆ. ನಾವು ಅದೇ ದಾರಿಯಲ್ಲಿ ಹಾದು ಹೋಗುತ್ತಿರುವಾಗ ಆ ವೃದ್ಧನು ಕೆಳಗೆ ಬಿದ್ದ ಟೋಪಿಯನ್ನು ಹೆಕ್ಕಲು, ತನ್ನ ಕೈಯಲ್ಲಿದ್ದ ಕೋಲಿನಿಂದ ಅದನ್ನು ಎಳೆದನು ಎನ್ನುವ ಪ್ರಶ್ನೆ ಇದಾಗಿದೆ. ನೀವು ಇದನ್ನು ಸೂಕ್ಷ್ಮವಾಗಿ ಓದಿದರೆ ಆ ವೃದ್ಧನ ಹೆಸರು ತಿಳಿಯುತ್ತದೆ. ಹಾಗಾದ್ರೆ ಈ ವೃದ್ಧನ ಹೆಸರೇನು? ಎನ್ನುವ ಪೋಸ್ಟ್ ಇಲ್ಲಿದೆ.
ಈ ಒಗಟಿನ ಉತ್ತರವು ಕಣ್ಣಿಗೆ ಕಾಣದಂತೆ ಅಡಗಿದ್ದು, ಆದರೆ ಮೆದುಳಿಗೆ ಕೆಲಸ ಕೊಡಲೇಬೇಕಾಗುತ್ತದೆ. ಈ ಪ್ರಶ್ನೆಯಲ್ಲೇ ಕೆಲವು ಸುಳಿವು ನೀಡಿದ್ದು ಈ ಪ್ರಶ್ನೆ ಯನ್ನು ಎಚ್ಚರಿಕೆ ಓದಿ. ಈ ಪೋಸ್ಟ್ ವೊಂದು ಇದೀಗ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದಾರೆ. ಬಳಕೆದಾರರೊಬ್ಬರು, ಅಂಬ್ರೆಲಾ ಎಂದು ಬರೆದುಕೊಂಡರೆ, ಮತ್ತೊಬ್ಬರು, ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟ ಆದರೆ ಇದರ ಉತ್ತರ ಆಂಡ್ರ್ಯೂ ಎಂದಿದ್ದಾರೆ. ಇನ್ನೊಬ್ಬರು, ನಾನು ಇದರ ಉತ್ತರ ಕಂಡುಕೊಂಡೆ ಎಂದು ನಗುವ ಸಿಂಬಲ್ ಕಳುಹಿಸಿದ್ದಾರೆ.
ಇದನ್ನೂ ಓದಿ : ಈ ಭಿಕ್ಷುಕ ಭಿಕ್ಷೆ ಬೇಡಲು ಬಳಸಿದ ಐಡಿಯಾ ನೋಡಿದ್ರೆ ತಲೆ ಗ್ರಿರ್ ಎನ್ನುತ್ತೆ
ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ, ಈ ಪ್ರಶ್ನೆಯನ್ನು ಸರಿಯಾಗಿ ಗಮನಿಸಿದರೆ ಅದರಲ್ಲೇ ಉತ್ತರ ಅಡಗಿದೆ. ಈ ಪ್ರಶ್ನೆಗೆ ಉತ್ತರ ಆಂಡ್ರ್ಯೂ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ