ಜೀವನದಲ್ಲಿ ಮದುವೆ ಬಗ್ಗೆ ಕನಸು ಕಾಣುವುದು ಸಹಜ. ತನ್ನ ಮದುವೆ ಹಾಗೇ ಆಗಬೇಕು, ಹೀಗೆ ಆಗಬೇಕು ಅಂತ ಆಸೆಗಳು ಇರುತ್ತದೆ. ಆಸೆಗಳಿಗೆ ತಕ್ಕಂತೆ ಮದುವೆ ಕೂಡಾ ಆಗ್ತಾರೆ. ಆದರೆ ಬಹುತೇಕ ಜನರಿಗೆ ಅಂದುಕೊಂಡಂತೆ ಮದುವೆ ಆಗದಿದ್ದರೂ ಮನಸ್ಸಿಗೆ ಸಂತೋಷ ಆಗುವಂತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇದೇನೆಯಿರಲಿ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋ ಕೂಡಾ ಮದುವೆಯದ್ದು.
ಪಂಚಾಬಿ ಸಂಪ್ರದಾಯದಂತೆ ನಡೆದ ಮದುವೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಧು ಮತ್ತು ವರ ತಮ್ಮ ಮದುವೆಯ ದಿನದಂದು ತುಂಬಾ ಖುಷಿ ಖುಷಿಯಲ್ಲಿ ಇದ್ದಾರೆ. ಮದುವೆ ಘಳಿಗೆಯನ್ನು ಇಬ್ಬರೂ ಅನಂದಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಬಂಥನ್ಬನ್ನೊ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. Bridal squad goals ಎಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ. ಇದೀಗ ಪೋಸ್ಟ್ ವೈರಲ್ ಆಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
ವಧು ಮತ್ತು ವರರು ಗೋಲ್ಡನ್ ಬಣ್ಣದ ಬಟ್ಟೆಗಳಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ ವಧು ಮತ್ತು ವರರು ಡ್ಯಾನ್ಸ್ ಮಾಡುತ್ತ ಮದುವೆ ಮಂಟಪಕ್ಕೆ ಹೋಗುತ್ತಾರೆ. ನವದಂಪತಿ ಪಂಜಾಬಿಯೊಂದರ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ವಿಡಿಯೋದಲ್ಲಿ ಮದುವೆ ಸೆಟ್ ಗಮನ ಸೆಳೆಯುತ್ತದೆ. ಅದ್ದೂರಿಯಾಗಿ ಮದುವೆಯಾದ ದಂಪತಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ
Yash: ಯಶ್- ನರ್ತನ್ ಕಾಂಬಿನೇಷನ್ನಲ್ಲಿ ಚಿತ್ರ ಬರೋದು ಯಾವಾಗ? ರಾಕಿಂಗ್ ಸ್ಟಾರ್ ಉತ್ತರಿಸಿದ್ದು ಹೀಗೆ
Suryakumar Yadav: 5 ಸಿಕ್ಸರ್, 37 ಬೌಂಡರಿ! 152 ಎಸೆತಗಳಲ್ಲಿ 249 ರನ್ ಚಚ್ಚಿದ ಸೂರ್ಯಕುಮಾರ್ ಯಾದವ್