Suryakumar Yadav: 5 ಸಿಕ್ಸರ್, 37 ಬೌಂಡರಿ! 152 ಎಸೆತಗಳಲ್ಲಿ 249 ರನ್ ಚಚ್ಚಿದ ಸೂರ್ಯಕುಮಾರ್ ಯಾದವ್
Suryakumar Yadav: ಸೂರ್ಯಕುಮಾರ್ ಯಾದವ್ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್ ಗಳಿಸಿ ಔಟಾದರು. ಅವರು 152 ಎಸೆತಗಳನ್ನು ಎದುರಿಸಿ 37 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು.
ಸೂರ್ಯಕುಮಾರ್ ಯಾದವ್ ಅವರ ಪ್ರತಿಭೆ ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ, ಅದನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಈ ಬಾರಿ ಯಾವುದೇ ಅಂತಾರಾಷ್ಟ್ರೀಯ ಸರಣಿ ಅಥವಾ ಟೂರ್ನಿಯಲ್ಲಿ ಅಲ್ಲ. ಬದಲಿಗೆ ಮುಂಬೈನಲ್ಲಿ ನಡೆದ 74ನೇ ಪೊಲೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ. 30 ವರ್ಷದ ಭಾರತೀಯ ಬ್ಯಾಟ್ಸ್‌ಮನ್ ಈ ಟೂರ್ನಿಯಲ್ಲಿ ಪಾರ್ಸಿ ಜಿಮ್ಖಾನಾ ಪರ ಆಡಿ ಬಿರುಸಿನ ದ್ವಿಶತಕ ಗಳಿಸಿದ್ದರು. ಅವರು ಪೇಯ್ಡ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ತಮ್ಮ ದ್ವಿಶತಕದ ಸ್ಕ್ರಿಪ್ಟ್ ಬರೆದರು. 3 ದಿನಗಳ ಕಾಲ ನಡೆದ ಈ ಪಂದ್ಯದ ಮೊದಲ ದಿನವೇ ಭಾರತದ ಬಲಗೈ ಬ್ಯಾಟ್ಸ್‌ಮನ್ ಈ ಅದ್ಭುತವನ್ನು ಮಾಡಿದ್ದಾರೆ. ಪರಿಣಾಮ ತಂಡ ಮೊದಲ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್‌ಗೆ 524 ರನ್ ಗಳಿಸಿದೆ.
ಸೂರ್ಯಕುಮಾರ್ ಯಾದವ್ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್ ಗಳಿಸಿ ಔಟಾದರು. ಅವರು 152 ಎಸೆತಗಳನ್ನು ಎದುರಿಸಿ 37 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಅಂದರೆ, ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 42 ಎಸೆತಗಳಲ್ಲಿನ ಬೌಂಡರಿಗಳಿಂದ 178 ರನ್ ಗಳಿಸಿದರು, ಇದರಲ್ಲಿ 37 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳ ಮೂಲಕ 148 ರನ್ ಬಂದವು.
ದ್ವಿಶತಕಗಳೊಂದಿಗೆ 2 ದೊಡ್ಡ ಪಾಲುದಾರಿಕೆ ಮರೈನ್ ಡ್ರೈವ್ ಬಳಿಯ ಪೊಲೀಸ್ ಜಿಮ್ಖಾನಾ ಮೈದಾನದಲ್ಲಿ ಸೂರ್ಯಕುಮಾರ್ ತಮ್ಮ ದ್ವಿಶತಕದ ಕಥೆ ಬರೆದಿದ್ದಾರೆ. ಪಾರ್ಸಿ ಜಿಮ್ಖಾನಾ ಪರ ಆಡುತ್ತಿರುವ ಭಾರತದ ಬ್ಯಾಟ್ಸ್‌ಮನ್ ಮೈದಾನದ ಮೂಲೆ ಮೂಲೆಯಲ್ಲಿ ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೂಡ ಈ ಅವಧಿಯಲ್ಲಿ 2 ಪಾಲುದಾರಿಕೆಗಳನ್ನು ಮಾಡಿದರು. 73 ರನ್‌ಗಳ ಇನಿಂಗ್ಸ್ ಆಡಿದ ಆದಿತ್ಯ ತಾರೆ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 124 ರನ್ ಸೇರಿಸಿದರು. ಇದಾದ ನಂತರ 63 ರನ್‌ಗಳ ಇನ್ನಿಂಗ್ಸ್ ಆಡಿದ ಸಚಿನ್ ಯಾದವ್ ಜೊತೆಗೂಡಿ 209 ರನ್‌ಗಳ ಜೊತೆಯಾಟ ಆಡಿದರು.
199 ನಿಮಿಷಗಳ ಬಳಿಕ ಔಟ್ ಸೂರ್ಯಕುಮಾರ್ ಯಾದವ್ ಕ್ರೀಸ್‌ನಲ್ಲಿ ಒಟ್ಟು 199 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದರು. ಇದರ ನಂತರ, ಅವರು ಎದುರಾಳಿ ತಂಡದ ಎಡಗೈ ಬೌಲರ್ ಅತಿಫ್ ಅತ್ತರ್ವಾಲಾಗೆ ಬಲಿಯಾದರು.
ಭಾರತೀಯ ಟೆಸ್ಟ್ ತಂಡದಲ್ಲಿ ಸೂರ್ಯ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಅವರು ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿದ್ದರು. ಆದರೆ ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಈ ಹಿಂದೆ ಇಂಗ್ಲೆಂಡ್ ಪ್ರವಾಸದಲ್ಲೂ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಅವರನ್ನು ಶ್ರೀಲಂಕಾದಿಂದ ನೇರವಾಗಿ ಇಂಗ್ಲೆಂಡ್‌ಗೆ ಕಳುಹಿಸಲಾಯಿತು. ಆದರೆ ಅಲ್ಲಿಯೂ ಆಡಲು ಅವಕಾಶವಿರಲಿಲ್ಲ.
ಇದನ್ನೂ ಓದಿ:IND vs SA: ಗುರು ದ್ರಾವಿಡ್ ಜೊತೆ ಟೀಂ ಇಂಡಿಯಾ ಕ್ರಿಕೆಟಿಗರ ಮೋಜು- ಮಸ್ತಿ; ಕೊಹ್ಲಿ ಮಿಸ್ಸಿಂಗ್