Viral Video: ಮದುವೆ ವೇದಿಕೆಯಲ್ಲಿ ವಧು ವರರ ವ್ಯಾಯಾಮ ಸ್ಪರ್ಧೆ; ಪುಶ್​ ಅಪ್ಸ್​ನಲ್ಲಿ ಯಾರು ಗೆಲ್ತಾರೆ? ವಿಡಿಯೋ ನೋಡಿ

| Updated By: shruti hegde

Updated on: Aug 27, 2021 | 2:44 PM

ಸಾಮಾನ್ಯವಾಗಿ ಮದುವೆ ಅಂದಾಕ್ಷಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ವಧು- ವರರಿಗೆ ಒಂದಿಷ್ಟು ಆಟಗಳನ್ನು ಆಡಿಸುತ್ತಾ ಯಾರು ಗೆಲ್ಲುತ್ತಾರೆ ಎಂಬ ಸ್ಪರ್ಧೆಯನ್ನು ಏರ್ಪಡಿಸುವುದುಂಟು.

Viral Video: ಮದುವೆ ವೇದಿಕೆಯಲ್ಲಿ ವಧು ವರರ ವ್ಯಾಯಾಮ ಸ್ಪರ್ಧೆ; ಪುಶ್​ ಅಪ್ಸ್​ನಲ್ಲಿ ಯಾರು ಗೆಲ್ತಾರೆ? ವಿಡಿಯೋ ನೋಡಿ
ಮದುವೆ ವೇದಿಕೆಯಲ್ಲಿ ವಧು ವರರ ವ್ಯಾಯಾಮ ಸ್ಪರ್ಧೆ
Follow us on

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಹಾಗೆಯೇ ಮದುವೆಗೆ ಸಬಂಧಿಸಿದ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತದೆ. ಕೆಲವೊಂದಿಷ್ಟು ವಿಡಿಯೋಗಳು ಹೆಚ್ಚು ಮನಸೆಳೆಯುತ್ತವೆ. ಅಂಥಹುದೇ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಮದುವೆ ವೇದಿಕೆಯ ಮೇಲೆ ವಧು ಮತ್ತು ವರ ಪುಶ್ ಅಪ್ಸ್ ಮಾಡುತ್ತಿದ್ದಾರೆ. ಏಕಿರಬಹುದು? ಎಂಬ ಕುತೂಹಲ ಕೆರಳಿರಬೇಕಲ್ವೇ? ವಿಡಿಯೋ ನೋಡಿ.

ಸಾಮಾನ್ಯವಾಗಿ ಮದುವೆ ಅಂದಾಕ್ಷಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ವಧು- ವರರಿಗೆ ಒಂದಿಷ್ಟು ಆಟಗಳನ್ನು ಆಡಿಸುತ್ತಾ ಯಾರು ಗೆಲ್ಲುತ್ತಾರೆ ಎಂಬ ಸ್ಪರ್ಧೆಯನ್ನು ಏರ್ಪಡಿಸುವುದುಂಟು. ಹಾಗೆಯೇ ಇಲ್ಲಿ ಕೂಡಾ ಪುಶ್ ಅಪ್ಸ್​ ಮಾಡುವುದರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಸ್ಪರ್ಧೆ ಇರಬಹುದು. ಹಾಗಾಗಿಯೇ ವಧು- ವರರು ವೇದಿಕೆಯ ಮೇಲೆ ಪುಶ್ ಅಪ್ಸ್ ಮಾಡುತ್ತಿದ್ದಾರೆ.

ಇಬ್ಬರ ಮುಖದಲ್ಲಿಯೂ ನಗುವಿದೆ. ಮದುವೆ ಉಡುಗೆಯಲ್ಲಿಯೇ ನವ ಜೋಡಿ ಪುಶ್ ಅಪ್ಸ್ ಮಾಡುತ್ತಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ಫುಲ್ ವೈರಲ್ ಆಗಿದೆ. ಈ ಹಿಂದೆ ವಧು ಮಾತ್ರ ಪುಶ್ ಅಪ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅವಳೂ ಸಹ ಮದುವೆ ಉಡುಗೆಯಲ್ಲಿಯೇ ಪುಶ್ ಅಪ್ಸ್ ಮಾಡಿದ್ದಳು.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದ್ದಂತೆಯೇ ನೆಟ್ಟಿಗರ ಮನಗೆದ್ದಿದೆ. ಮದುವೆ ಸಮಾರಂಭದ ಸಂತೋಷದ ದಿನಗಳಲ್ಲಿ ನಡೆಯುವ ಘಟನೆಗಳು ಹೆಚ್ಚು ಮನಸ್ಸು ಗೆಲ್ಲುತ್ತವೆ. ಎಲ್ಲರಿಗೂ ಇಷ್ಟವಾಗುತ್ತವೆ. ಅಂಥಹುದೇ ಒಂದು ವಿಡಿಯೊ ಇದಾಗಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Viral Video: ದೈತ್ಯಾಕಾರದ ಹುಲಿಗಳಿಗೆ ಬಾಟಲಿಯಿಂದ ಹಾಲು ಕುಡಿಸಿದ ವ್ಯಕ್ತಿ; ಶಾಕಿಂಗ್ ವಿಡಿಯೋ ವೈರಲ್​

Viral Video: ವಿಡಿಯೋ ಮಾಡ್ತಾ ಮಾಡ್ತಾ ಈಜುಕೊಳಕ್ಕೆ ಬಿದ್ದ ಕ್ಯಾಮರಾ ಮ್ಯಾನ್​​; ವಧು – ವರ ಕಂಗಾಲು! ವಿಡಿಯೋ ವೈರಲ್​

(Bride and groom doing push ups in wedding stage video goes viral in social media)

Published On - 2:43 pm, Fri, 27 August 21