ಹೀಗೊಂದು ಒಂದು ಮುತ್ತಿನ ಕಥೆ: ಮಂಟಪದಲ್ಲೇ ಚುಂಬಿಸಿಕೊಂಡ ನವದಂಪತಿ ; ವೀಡಿಯೋ ವೈರಲ್​

ಮದುವೆ ಮಂಟಪದಲ್ಲಿ ಫೋಟೋಗಾಗಿ ಚುಂಬಿಸಿಕೊಳ್ಳಿ ಎಂದರೆ ನವದಂಪತಿ ಚುಂಬಿಸಿಕೊಳ್ಳುವುದನ್ನು ನಿಲ್ಲಿಸಲೇ ಇಲ್ಲ.

ಹೀಗೊಂದು ಒಂದು ಮುತ್ತಿನ ಕಥೆ: ಮಂಟಪದಲ್ಲೇ ಚುಂಬಿಸಿಕೊಂಡ ನವದಂಪತಿ ; ವೀಡಿಯೋ ವೈರಲ್​
Edited By:

Updated on: Dec 18, 2021 | 8:02 PM

ಸಾಮಾನ್ಯವಾಗಿ ವಿದೇಶಗಳಲ್ಲಿ ಮದುವೆಯಾದ ನಂತರ ಸಂಬಂಧಿಕರ ಎದುರು ನವದಂಪತಿ ಚುಂಬಿಸಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಇಂತಹ ಸಂದರ್ಭಗಳು ಎದುರಾಗುವುದು ಬೆರಳಣಿಕೆಯಷ್ಟು ಮಾತ್ರ. ಆದರೆ ಇಲ್ಲೊಂದು ವೀಡಿಯೋ ನೆಟ್ಟಗರನ್ನು ಆಶ್ಚರ್ಯಗೊಳಿಸಿದೆ. ಮದುವೆ ಮಂಟಪದಲ್ಲಿ ಫೋಟೋಗಾಗಿ ಚುಂಬಿಸಿಕೊಳ್ಳಿ ಎಂದರೆ ನವದಂಪತಿ ಮುತ್ತು ಕೊಡುವುದನ್ನು ನಿಲ್ಲಿಸಲೇ ಇಲ್ಲ. ಇದರಿಂದ ನೆರೆದಿದ್ದ ಸಂಬಂಧಿಕರು ಮುಜುಗರಕ್ಕೊಳಗಾದ ಘಟನೆ ನಡೆಯಿತು. ಎಷ್ಟು ಹೊತ್ತಾದರೂ ಚುಂಬನದಿಂದ ವಿಮುಖರಾಗದೇ ಇರುವ ನವ ಜೋಡಿಯಿಂದ ಮದುವೆ ಮನೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.

ನೆರೆದಿರುವವರಿಗೂ ಒಂದು ಮುತ್ತು ಈ ರೀತಿ ಸಂದರ್ಭ ಎದುರಿಡಬಹುದು ಎಂದು ಊಹಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಹೇ ರಬ್ಬಾ ಎಂದು ಕಾಮೆಂಟ್​ ಮಾಡಿದ್ದಾರೆ.ನಮದುವೆಯಲ್ಲಿ ಫೆರಾಸ್​ ಶಾಸ್ತ್ರದ ಬಳಿಕ ಈ ಘಟನೆ ನಡೆದಿದೆಭಾರತದಲ್ಲಿ ಈ ರೀತಿಯ ಘಟನೆ ನಡೆಯಲು ಅಸಾಧ್ಯ ಎನ್ನುವವರಿಗೆ ಚಂಡೀಗಢದಲ್ಲಿ ನಡೆದ ಈ ಒಂದು ಮುತ್ತಿನ ಕಥೆ ಆಶ್ಚರ್ಯ ಮತ್ತು ಮುಜುಗರಕ್ಕೆ ಒಳಪಡಿಸಿದೆ. ನವ ಜೋಡಿಯ ದೀರ್ಘ ಚುಂಬನದ ವೀಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಇದನ್ನೂ ಓದಿ:

viral video: ಕುದುರೆ ಏರಿ ಮಂಟಪಕ್ಕೆ ಬಂದ ವಧು: ವೀಡಿಯೋ ವೈರಲ್

Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ​