ಇತ್ತೀಚೆಗೆ ಮದುವೆಯ ಸಂದರ್ಭದಲ್ಲಿ ಜರುಗಿದ ತಮಾಷೆಯ, ಅಚ್ಚರಿಯ ವಿಡಿಯೊಗಳು ಹೆಚ್ಚಾಗಿ ವೈರಲ್ ಆಗುತ್ತವೆ. ಅದರಲ್ಲೂ ಸಾಮಾನ್ಯ ಜನರಿಗಿಂತ ಭಿನ್ನವಾಗಿ ಸಂಭ್ರಮ ಆಚರಿಸುವ ವಧು- ವರರು ನೆಟ್ಟಿಗರಿಂದ ಮೆಚ್ಚುಗೆಗೆ ಒಳಗಾಗುತ್ತಾರೆ. ಇಂಥದ್ದೇ ಮಾದರಿಯ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಲ್ಲಿನ ವಧು- ವರರ ಹೊಸ ಸ್ಟೈಲ್ ಕಂಡು ಸ್ಥಳದಲ್ಲಿ ನೆರೆದಿದ್ದವರಲ್ಲದೇ, ನೆಟ್ಟಿಗರೂ ಭೇಷ್ ಎಂದಿದ್ದಾರೆ. ಹೌದು. ಅಲ್ಲಿನ ಜೋಡಿಯೊಂದು ಮದುವೆಯ ಸಂದರ್ಭದಲ್ಲಿ ಜೆಸಿಬಿಯನ್ನೇರಿ ಮೆರವಣಿಗೆ ಹೊರಟಿದ್ದಾರೆ. ಈ ಕುತೂಹಲಕರ ಸಂದರ್ಭದ ವಿಡಿಯೊ ವೈರಲ್ ಆಗಿದೆ.
ಪಾಕಿಸ್ತಾನದ ಹುಂಜಾ ಕಣಿವೆಯ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. ವಧು- ವರರು ಯಾವುದೇ ಅದ್ದೂರಿ ವಾಹನಗಳ ಮೊರೆ ಹೋಗದೇ, ಜೆಸಿಬಿಯ ಮೊರೆ ಹೋಗಿದ್ದಾರೆ. ಅದಕ್ಕೆ ಸಂಪೂರ್ಣವಾಗಿ ಅಲಂಕಾರ ಮಾಡಲಾಗಿದ್ದು, ವಿವಿಧ ದೀಪಗಳನ್ನೂ ಇಟ್ಟು ಶೃಂಗರಿಸಲಾಗಿದೆ. ಜೆಸಿಬಿ ಸಾಗುವಾಗ ಅಕ್ಕ ಪಕ್ಕದ ಜನ ಅದನ್ನು ನೋಡುತ್ತಿದ್ದು, ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ಆಗಿರುವ ಈ ವಿಡಿಯೊವನ್ನು ಪಾಕಿಸ್ತಾನದ ಪತ್ರಕರ್ತ ಗುಲಾಮ್ ಅಬ್ಬಾಸ್ ಶಾ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ವಿಧವಾಗಿ ಕಾಮೆಂಟ್ ಮಾಡಿದ್ದು, ಮದುಮಕ್ಕಳ ಹೊಸ ಟ್ರೆಂಡನ್ನು ಸ್ವಾಗತಿಸಿದ್ದಾರೆ. ಹಲವರು ‘ಇದು ಸಾಹಸವೆಂದರೆ…’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ‘ವಿಭಿನ್ನವಾಗಿ ಮಾಡಲು ಹೋಗಿ ಹಾಸ್ಯಾಸ್ಪದವಾಗಿದೆ’ ಎಂದಿದ್ದಾರೆ. ಆದರೆ, ಈ ವಿಡಿಯೊಗೆ ಬಹುತೇಕ ಜನರು ಮೆಚ್ಚುಗೆ ಸೂಚಿಸಿದ್ದಾರೆ.
ವೈರಲ್ ಆಗಿರುವ ವಿಡಿಯೊ ಇಲ್ಲಿದೆ:
#VideoViral Adventures wedding in #Hunza Valley #Pakistan pic.twitter.com/ruhMmqwPYI
— Ghulam Abbas Shah (@ghulamabbasshah) October 1, 2021
ಈ ಹಿಂದೆ ಭಾರತದಲ್ಲೂ ಇಂಥದ್ದೇ ಪ್ರಕರಣ ವರದಿಯಾಗಿತ್ತು. ಛತ್ತೀಸ್ಗಡದ ಇಂಜಿನಿಯರ್ ಒಬ್ಬರು ಜೆಸಿಬಿಯಲ್ಲಿ ಸವಾರಿ ಮಾಡುತ್ತಾ ವಧುವಿನ ಮನೆಗೆ ತಲುಪಿದ್ದರು. ಆ ವಿಡಿಯೊ ಕೂಡ ನೆಟ್ಟಿಗರ ಮನಗೆದ್ದಿತ್ತು. ಇಂಥದ್ದೇ ಮತ್ತೊಂದು ಪರಕರಣ ಕರ್ನಾಟಕದಲ್ಲೂ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ:
ಬಿಡದಿ ಟೊಯೊಟ ಕಿರ್ಲೋಸ್ಕರ್ ಘಟಕದ 45 ಕಾರ್ಮಿಕರು ವಜಾ; ಕಾರ್ಮಿಕ ಸಂಘದ ಆಕ್ರೋಶ
KBC: 25 ಲಕ್ಷ ರೂಪಾಯಿ ಪ್ರಶ್ನೆಗೆ ಸ್ಟಾರ್ ನಟರೇ ಹೇಳಿಲ್ಲ ಉತ್ತರ; ನೀವು ಉತ್ತರಿಸಬಲ್ಲಿರಾ?
S M Krishna invited: ದಸರಾ ಉದ್ಘಾಟನೆಗಾಗಿ ಎಸ್.ಎಂ.ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ