ಗಯಾ: ಭಾರತೀಯ ಮದುವೆ ಸಮಾರಂಭಗಳಲ್ಲಿ ವಿಭಿನ್ನ ರೀತಿಯ ವಧುವರರ ಆಗಮನ ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ವಧು ವರರನ್ನು ಉಯ್ಯಾಲೆಯಲ್ಲಿ ಕರೆತರುವುದು, ಜೆಸಿಬಿಯಲ್ಲಿ ಕರೆದುಕೊಂಡು ಬರುವುದು ಸೇರಿದಂತೆ ಈ ರೀತಿಯ ಸಾಕಷ್ಟು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಹುಟ್ಟಿಕೊಂಡ ಬಳಿಕ ವಧುವರರ ವೆಲ್ಕಮ್ ಮಾಡಲು ಹೊಸ ಹೊಸ ಐಡಿಯಾಗಳನ್ನು ಕಾಣಬಹುದು. ಹೀಗೆ ವಿಭಿನ್ನ ಐಡಿಯಾಗಳಿಗೆ ಕೆಲವೊಮ್ಮೆ ಅಪರೂಪದ ಘಟನೆಗಳೂ ಸಾಕ್ಷಿಯಾಗುತ್ತವೆ.
ಅದನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಮದುವೆಯ ವರ ಕುದುರೆ ಏರಿ ಮಂಟಪಕ್ಕೆ ಬರುತ್ತಾನೆ. ಆದರೆ ಇಲ್ಲೊಬ್ಬಳು ವಧು, ನಾನು ನನ್ನ ಗಂಡನನ್ನು ಪಡೆಯಲು ಹೊರಟಿದ್ದೇನೆ ಎಂದು ಕುದುರೆ ಏರಿಕೊಂಡು ಮದುವೆ ಮನೆಗೆ ಮೆರವಣಿಗೆ ಮೂಲಕ ಹೋದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುದ್ದಿ ಸಂಸ್ಥೆ ಎಎನ್ಐ ಇದರ ವಿಡಿಯೋವನ್ನು ಹಂಚಿಕೊಂಡಿದೆ.
#WATCH बिहार: गया में एक दुल्हन ने घोड़ी पर चढ़कर अपनी बारात निकाली। (13.12) pic.twitter.com/7MmW7klciq
— ANI_HindiNews (@AHindinews) December 14, 2021
ಗಯಾ ಮೂಲದ ಅನುಷ್ಕಾ ಗುಹಾ ಎನ್ನುವವರು ಈ ರೀತಿ ಮದುವೆಗೆ ಕುದುರೆ ಏರಿ ಮೆರವಣಿಗೆ ಮೂಲಕ ಸಾಗಿದ್ದಾರೆ. ಫ್ಲೈಟ್ ಅಟೆಂಡೆಂಟ್ ಆಗಿರುವ ಅನುಷ್ಕಾ ಅವರು ಕೋಲ್ಕತ್ತಾ ಮೂಲದ ಉದ್ಯಮಿ ಜೀತ್ ಮುಖರ್ಜಿ ಎನ್ನುವವರನ್ನು ವಿವಾಹವಾಗಿದ್ದಾರೆ. ಈ ವೇಳೆ ಲೆಹೆಂಗಾ ಧರಿಸಿ ಕುದುರೆ ಏರಿ ಬಂದಿದ್ದಾರೆ. ಈ ಬಗ್ಗೆ ಅನುಷ್ಕಾ ಹುಡುಗರು ಮಾತ್ರ ಏಕೆ ಕುದುರೆ ಏರಿ ಬರಬೇಕು. ನಾನು ಹುಡುಗಿ ಆದರೂ ಕುದುರೆ ಹತ್ತಿಕೊಂಡು ಬಂದಿದ್ದೇನೆ. ಇದನ್ನು ಪ್ರಶ್ನೆ ಮಾಡದ್ದಿದ್ದಕ್ಕೆ ನನ್ನ ಪತಿಗೆ ಧನ್ಯವಾದಗಳೆ ಎಂದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಧು ಅನುಷ್ಕಾ ಕುದುರೆ ಏರಿ ಬಂದ ವೀಡಿಯೋ ವೈರಲ್ ಅಗಿದೆ. ಮದುವೆಯಲ್ಲಿ ಧರಿಸುವ ಭಾರವಾದ ಲೆಹೆಂಗಾ ಧರಿಸಿ ಕುದುರೆ ಸವಾರಿ ಮಾಡಿಕೊಂಡು ಬಂದ ಅನುಷ್ಕಾ ಅವರನ್ನು ನೋಡಿ ನೆಟ್ಟಿಗರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ
Published On - 3:36 pm, Sat, 18 December 21