Viral Video: ನೃತ್ಯದ ನಡುವೆ ನೆಲಕ್ಕೆ ಬಿದ್ದ ನವಜೋಡಿ; ನೆಟ್ಟಿಗರ ರಿಯಾಕ್ಷನ್​ ಹೇಗಿದೆ ಗೊತ್ತಾ?

ವಧು ಬಾಲ್ ಗೌನ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ ನೃತ್ಯ ಮಾಡುವ ವೇಳೆ ಇದೇ ಗೌನ್​ ಇಬ್ಬರು ನಗೆ ಪಾಟಲಿಗೆ ಗುರಿಯಾಗುವಂತೆ ಮಾಡಿದೆ. ಹೌದು ನವ ಜೋಡಿ ನೃತ್ಯದ ಮಧ್ಯದಲ್ಲಿ ದಪ್ಪನೆ ನೆಲದ ಮೇಲೆ ಜಾರಿ ಬಿದ್ದಿದ್ದಾರೆ.

Viral Video: ನೃತ್ಯದ ನಡುವೆ ನೆಲಕ್ಕೆ ಬಿದ್ದ ನವಜೋಡಿ; ನೆಟ್ಟಿಗರ ರಿಯಾಕ್ಷನ್​ ಹೇಗಿದೆ ಗೊತ್ತಾ?
ನವಜೋಡಿ ನೃತ್ಯ
Updated By: preethi shettigar

Updated on: Jan 14, 2022 | 9:16 AM

ಸಾಮಾನ್ಯವಾಗಿ ಮದುವೆಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿರುತ್ತವೆ. ನೆಟ್ಟಿಗರು ವಧು-ವರರಿಗೆ ಸಂಬಂಧಿಸಿದ ವಿಷಯವನ್ನು ಬಹಳ ಉತ್ಸಾಹದಿಂದ ವೀಕ್ಷಿಸುತ್ತಾರೆ. ಇತ್ತೀಚೆಗೆ ಮದುವೆಗಳನ್ನು ಭರ್ಜರಿಯಾಗಿ, ಅದ್ದೂರಿಯಾಗಿ ಆಚರಿಸುವವರಿದ್ದಾರೆ. ಅದರಲ್ಲೂ ಮದುವೆ (Marriage) ಎಂದರೆ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಕೆಲವು ವಿಚಿತ್ರ ಪದ್ಧತಿಗಳಿರುತ್ತದೆ. ಅದರಲ್ಲೂ ಪಾರ್ಟಿಗೆ ಹೆಚ್ಚು ಒತ್ತುಕೊಡುವ ಜನ ಕೇಕ್ (Cake) ಕತ್ತರಿಸಿ, ನೃತ್ಯ (Dance) ಮಾಡುತ್ತಾರೆ. ಹೀಗೆ ವಧು- ವರ ನೃತ್ಯ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ಈ ವಿಡಿಯೋ ಕಂಡು ಚೇ ಪಾಪ ಹೀಗೆ ಆಗಬಾರದಿತ್ತು ಎಂದು ಕಾಲೇಳೆದಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಧು-ವರ ಪರಸ್ಪರ ತಮ್ಮ ಕೈ ಹಿಡಿದು ನೃತ್ಯ ಮಾಡುತ್ತಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಇವರನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ವಧು ಬಾಲ್ ಗೌನ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ ನೃತ್ಯ ಮಾಡುವ ವೇಳೆ ಇದೇ ಗೌನ್​ ಇಬ್ಬರು ನಗೆ ಪಾಟಲಿಗೆ ಗುರಿಯಾಗುವಂತೆ ಮಾಡಿದೆ. ಹೌದು ನವ ಜೋಡಿ ನೃತ್ಯದ ಮಧ್ಯದಲ್ಲಿ ದಪ್ಪನೆ ನೆಲದ ಮೇಲೆ ಜಾರಿ ಬಿದ್ದಿದ್ದಾರೆ.

ಈ ವೀಡಿಯೊವನ್ನು ನೋಡಿದ ನೆಟ್ಟಿಗರು, ವಧುವಿನ ಗೌನ್ ತುಂಬಾ ಭಾರವಾಗಿತ್ತು ಮತ್ತು ಅದನ್ನು ನಿರ್ವಹಿಸುವ ಪ್ರಕ್ರಿಯೆಯಲ್ಲಿ ಅವಳು ಬಹುಶಃ ಸೋತಿದ್ದಾಳೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಬಟ್ಟೆ ಧರಿಸುವಾಗ ನಿಮಗಿಂತ ತೂಕವಿರುವುದನ್ನು ಆಯ್ಕೆ ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಮತ್ತೆ ಕೆಲವರು ಇದನ್ನು ಇದನ್ನು ಫಾಲ್ ಇನ್ ಲವ್ ಎಂದು ಕರೆಯಲಾಗುತ್ತದೆ ಎಂದು ಕಾಲೇಳೆದಿದ್ದಾರೆ.

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ನಾನು ಪ್ರೀತಿಯಲ್ಲಿ ಬೀಳುವುದನ್ನು ಕೇಳಿದ್ದೇನೆ, ಆದರೆ ಇದು ಹುಡುಗನ ಎತ್ತರ ಅಥವಾ ವಧುವಿನ ಭಾರವಾದ ಉಡುಗೆಯ ಕಾರಣಕ್ಕೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೊವನ್ನು ಜನವರಿ 7 ರಂದು ಅಪ್‌ಲೋಡ್ ಮಾಡಿದ್ದಾರೆ. 3.80 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ:
Viral Video: ಪಾನಿಪುರಿ ತಿನ್ನಲು ಹೋದ ಮದುಮಗಳ ವಿಡಿಯೋ ವೈರಲ್

Viral Video: ಮದುವೆಗೆ ತಂದ ಕೇಕ್​ ಕಣ್ಣ ಮುಂದೆಯೇ ನೆಲದ ಪಾಲಾಯ್ತು; ವಧು-ವರರ ರಿಯಾಕ್ಷನ್​ ಹೇಗಿತ್ತು ಗೊತ್ತಾ?