Viral Video : ಸಾಕುಪ್ರಾಣಿಗಳು ತನ್ನ ಪೋಷಕರೊಂದಿಗೆ ಬೆಳೆಸಿಕೊಂಡ ನಂಟು ಮನುಷ್ಯರಿಗಿಂತ ತುಸು ಹೆಚ್ಚಾಗಿಯೇ ಇರುತ್ತದೆ. ತನ್ನ ಸುತ್ತಮುತ್ತಲಿನದೆಲ್ಲವನ್ನೂ ಅರ್ಥ ಮಾಡಿಕೊಳ್ಳುವುದರೊಂದಿಗೆ ಮನುಷ್ಯರ ಅಂತರಂಗವನ್ನೂ ಅರ್ಥ ಮಾಡಿಕೊಳ್ಳುವಲ್ಲಿ ಅವುಗಳಿಗೆ ವಿಶೇಷ ಪ್ರಜ್ಞೆ, ಸಾಮರ್ಥ್ಯವಿರುತ್ತದೆ. ಇಲ್ಲಿರುವ ಈ ವಿಡಿಯೋ ನೋಡಿ, ತೀರಿಹೋದ ತನ್ನ ಪೋಷಕನನ್ನು ಹುಡುಕಿಕೊಂಡು ಸ್ಮಶಾನಕ್ಕೆ ಓಡಿಬಂದಿದೆ ಆಕಳಕರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಜನರು, ಇದು ಹೀಗೆ ಕೂಗುತ್ತ ಓಡಿಬಂದಿದ್ದನ್ನು ನೋಡಿ ಭಾವುಕರಾಗಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ನೋಡಿ ಅನೇಕ ನೆಟ್ಟಿಗರ ಹೃದಯ ಆರ್ದ್ರವಾಗಿದೆ.
झारखंड के हजारीबाग में मालिक की मौत पर श्मशान पहुंचा पालतू बछड़ा; चेहरा देखने के लिए मुंह से हटाता रहा कफन, गांववालों ने बछड़े से करवाया अंतिम संस्कार#Jharkhand #BreakingNews pic.twitter.com/zYLZPGJSjI
— shakti ojha?? (@imShaktiojha) September 15, 2022
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಸಾವನ್ನಪ್ಪಿದ ಕರುವಿನ ಈ ಪೋಷಕರ ಅಂತ್ಯಸಂಸ್ಕರಕ್ಕಾಗಿ ಮನೆಯವರು, ಬಂಧು ಬಳಗದವರು ಸ್ಮಶಾನಕ್ಕೆ ಹೋಗಿದ್ದಾರೆ. ಇದನ್ನು ಗ್ರಹಿಸಿದ ಈ ಕರು ಓಡೋಡಿ ಆ ಸ್ಥಳವನ್ನು ತಲುಪಿದೆ. ಅಲ್ಲಿದ್ದವರೆಲ್ಲ ಮೃತದೇಹದ ದರ್ಶನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಪೋಷಕನ ಮೃತದೇಹ ನೋಡಿದ ಅದು ಅಳಲು ಪ್ರಾರಂಭಿಸಿದೆ. ಒಬ್ಬ ವ್ಯಕ್ತಿ ಅದರ ಕಣ್ಣೀರನ್ನು ಒರೆಸಿದ್ದಾರೆ. ಸಂಕಟದಿಂದ ಕರು ಕೂಗುತ್ತಿರುವುದನ್ನು ನೋಡಿ ಅಲ್ಲಿದ್ದವರೆಲ್ಲರಿಗೂ ದುಃಖ ಉಮ್ಮಳಿಸಿ ಬಂದಿದೆ.
ಕೊನೆಗೆ ಕರುವಿನ ಉಪಸ್ಥಿತಿಯಲ್ಲಿಯೇ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಪೂರೈಸಲಾಗಿದೆ. ಇದೇ ಅಲ್ಲವೇ ಬಂಧವೆಂದರೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:01 pm, Sat, 17 September 22