Viral Pic: ಈ ಚಿತ್ರದಲ್ಲಿ ನೀವು ಚಿರತೆಯನ್ನು ಕಾಣಬಲ್ಲಿರಾ? ಬುದ್ದಿಗೆ ಗುದ್ದು ನೀಡುವ ಚಿತ್ರ ನೋಡಿ ತಲೆಕೆಡಿಸಿಕೊಂಡ ನೆಟ್ಟಿಗರು

| Updated By: Digi Tech Desk

Updated on: Dec 31, 2021 | 5:30 PM

ಅಮಿತ್​ ಮೆಹ್ರಾ ಎನ್ನುವವರು ಈ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮರದಂತೆ ಕಾಣುವ ಚಿತ್ರದಲ್ಲಿ ಚಿರತೆಯನ್ನು ಹುಡುಕಲು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.  ಹಲವು ಮಂದಿ ಚಿರತೆಯನ್ನು ಹುಡುಕಲು ಪ್ರಯತ್ನಿಸಿ ವಿಫಲವಾಗಿದ್ದಾರೆ.

Viral Pic: ಈ ಚಿತ್ರದಲ್ಲಿ ನೀವು ಚಿರತೆಯನ್ನು ಕಾಣಬಲ್ಲಿರಾ? ಬುದ್ದಿಗೆ ಗುದ್ದು ನೀಡುವ ಚಿತ್ರ ನೋಡಿ ತಲೆಕೆಡಿಸಿಕೊಂಡ ನೆಟ್ಟಿಗರು
Follow us on

ಸಾಮಾಜಿಕ ಜಾಲತಾಣ ಸದಾ ಹೊಸತರೊಂದಿಗೆ ಕೂಡಿರುತ್ತದೆ. ನೆಟ್ಟಿಗರನ್ನು ಸದಾ ಆಕರ್ಷಿಸುವ ಜಾಲತಾಣಗಳು ಬುದ್ದಿಗೂ ಗುದ್ದು ನೀಡುವ ಚಾಲೆಂಜ್​ಗಳನ್ನು ನೀಡುತ್ತವೆ. ಕೆಲವು ಮನರಂಜನೆ ನೀಡುವ ವಿಷಯಗಳಾಗಿದ್ದರೆ ಇನ್ನು ಕೆಲವು ಯೋಚಿಸುವ ವಿಚಾರಗಳಾಗಿರುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ  ಚಿರತೆಯನ್ನು ಹುಡುಕುವ ಚಿತ್ರವೊಂದು ಹರಿದಾಡುತ್ತಿದೆ. ಕಾಡಿನಲ್ಲಿ ಇರುವ ಮರವೊಂದರ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ಅದರಲ್ಲಿ ಚಿರತೆಯಿದೆ ಗುರುತಿಸಿ ಎಂದಿದ್ದಾರೆ.

ಅಮಿತ್​ ಮೆಹ್ರಾ ಎನ್ನುವವರು ಈ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮರದಂತೆ ಕಾಣುವ ಚಿತ್ರದಲ್ಲಿ ಚಿರತೆಯನ್ನು ಹುಡುಕಲು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.  ಹಲವು ಮಂದಿ ಚಿರತೆಯನ್ನು ಹುಡುಕಲು ಪ್ರಯತ್ನಿಸಿ ವಿಫಲವಾಗಿದ್ದಾರೆ.  ಹಲವರು ಇದು ಟ್ರಿಕ್​ ಪ್ರಶ್ನೆಯೇ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ನೆಟ್ಟಿಗರು ಫೋಟೋ ನೋಡಿ ಚಿರತೆಯನ್ನು ಹುಡುಕಲು ಯತ್ನಿಸಿದ್ದಾರೆ.

ಈ ನಡುವೆ ಹಲವರು ಮರದಂತೆ ಕಾಣುವ ಚಿತ್ರದಲ್ಲಿ ಚಿರತೆಯನ್ನು ಹುಡುಕಿ ಕಾಮೆಂಟ್​ ಮಾಡಿದ್ದಾರೆ.  ಕೆಲವರು ಚಿರತೆ ಮರದ ಮಧ್ಯದ ಕೆಳಗೆ ಬಲಭಾಗದಲ್ಲಿ ಒಣ ಮರ ಮತ್ತು ಹುಲ್ಲಿನಿಂದ ಅಂದವಾಗಿ ಮರೆಮಾಚಿಕೊಂಡು ಕುಳಿತಿದೆ ಎಂದು ಕಾಮೆಂಟ್​ ಮಾಡಿದ್ದು. ತಾವು ಚಿತ್ರದಲ್ಲಿ ಚಿರತೆಯನ್ನು ಹುಡುಕಿದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಚಿರತೆಯನ್ನು ಪತ್ತೆಹಚ್ಚಿದ ಜನರು ಚಿತ್ರವನ್ನು ರೀಟ್ವೀಟ್​ ಮಾಡಿ ಶೇರ್​ಮಾಡಿದ್ದಾರೆ, ಇನ್ನು ಹಲವರು ಹಿಂಟ್​ ನೀಡುವ ಮೂಲಕ ಚಿತ್ರವನ್ನು ಹಂಚಿಕೊಂಡಿದ್ದಾರೆ.

ವೈರಲ್​ ಆದ ಚಿತ್ರ 1500ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದ್ದು, ಹಲವರು ಚಿರತೆ ಗುರುತಿಸಿ ಖುಷಿಪಟ್ಟಿದ್ದಾರೆ. ಚಿರತೆ ಕಾಡಿನ ಸುಂದರ ಪ್ರಾಣಿಗಳಲ್ಲಿ ಒಂದಾಗಿದೆ. ಚಿರತೆಗಳು ತಮ್ಮ ವೇಗದ ಓಟದಿಂದ ಹೆಚ್ಚು ಹೆಸರುವಾಸಿಯಾಗಿದೆ.  ಚಿತ್ರದಲ್ಲಿರುವ ಮರವಾಗಲೀ ಕಾಡಲಾಗಲೀ ಯಾವ ಸ್ಥಳದ್ದು ಎಂದು ತಿಳಿದಿಲ್ಲ. ಅದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದ್ದು ನೆಟ್ಟಿಗರ ಬುದ್ದಿಗೆ ಸವಾಲನ್ನು ನೀಡಿದೆ.

ಇದನ್ನೂ ಓದಿ:

Viral Photo: ಈ ಚಿತ್ರದಲ್ಲಿ ನಿಮಗೆ ಎಷ್ಟು ಕುದುರೆ ಕಾಣುತ್ತಿದೆ? ಸರಿಯಾದ ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ ನೆಟ್ಟಿಗರು

Published On - 3:12 pm, Fri, 31 December 21