ಮಹೀಂದ್ರಾ ಕಂಪನಿ ವಾಹನವನ್ನು ಕಚ್ಚಿ ಎಳೆದ ಹುಲಿ: ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ
ವಾಹನವನ್ನು ಹುಲಿ ಕಚ್ಚಿ ಎಳೆಯುತ್ತಿದ್ದ ವೇಳೆ ವೀಡಿಯೋ ಚಿತ್ರೀಕರಿಸುತ್ತಿದ್ದ ಇತರ ವಾಹನದಲ್ಲಿದ್ದ ಜನರು ಹುಲಿಯನ್ನು ಓಡಿಸಲು ಯತ್ನಿಸಿದ್ದಾರೆ. ಆದರೂ ಹುಲಿ ಮಹೀಂದ್ರಾ xylo ವಾಹನವನ್ನು ಎಳೆದಿದೆ.
ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನವೊಂದರ ಹಿಂಭಾಗವನ್ನು ಹುಲಿ ಕಚ್ಚಿ ಎಳೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಅದರ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ಪ್ರವಾಸಿಗರು ತೆರಳುತ್ತಿದ್ದ ಮಹೀಂದ್ರಾ ಎಸ್ಯುವಿ ವಾಹನವನ್ನು ದಾರಿ ಮಧ್ಯೆ ನಿಲ್ಲಿಸಲಾಗಿತ್ತು. ಈ ವೇಳೆ ಎಸ್ಯುವಿ ವಾಹನದ ಹಿಂದೆ ಓಡಾಡುತ್ತಿದ್ದ ಹುಲಿಯೊಂದು ಗಾಡಿಯ ಬಳಿ ಬಂದು ಹಿಂಭಾಗವನ್ನು ಕಚ್ಚಿ ಎಳೆದಿದೆ. ನಂತರ ಅದನ್ನು ಬಿಟ್ಟು ಮುಂದೆ ಹೋಗಿದೆ. ಆದರೆ ಮತ್ತೆ ಪುನಃ ಬಂದು ಎಸ್ಯುವಿ ವಾಹನವನ್ನು ಬಾಯಿಯಿಂದ ಕಚ್ಚಿ ಹಿಂದಕ್ಕೆ ಎಳೆದಿದೆ.
ಈ ವೇಳೆ ವಾಹನದಲ್ಲಿದ್ದ ಮಹಿಳೆ ಓ ದೇವರೇ ಎಂದು ಕಿರುಚಿದ್ದಾರೆ. ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು ಇದು ಊಟಿ ಮೈಸೂರಿಗೆ ಹೋಗುವ ದಾರಿಯ ಮಧ್ಯೆ ಕಂಡುಬಂದ ವಿಡಿಯೋವಾಗಿದೆ. ವಾಹನವು ಮಹೀಂದ್ರಾ xylo ಆಗಿದೆ. ಹೀಗಾಗಿ ಅದನ್ನು ಕಚ್ಚಿದ್ದರಲ್ಲಿ ಆಶ್ಚರ್ಯವಿಲ್ಲ. ಮಹೀಂದ್ರಾ ಸಂಸ್ಥೆಯ ವಾಹನವು ರುಚಿಕರವಾಗಿದೆ ಎಂದು ನಂಬುತ್ತೇನೆ ಎಂದಿದ್ದಾರೆ.
ವಾಹನವನ್ನು ಹುಲಿ ಕಚ್ಚಿ ಎಳೆಯುತ್ತಿದ್ದ ವೇಳೆ ವಿಡಿಯೋ ಚಿತ್ರೀಕರಿಸುತ್ತಿದ್ದ ಇತರ ವಾಹನದಲ್ಲಿದ್ದ ಜನರು ಹುಲಿಯನ್ನು ಓಡಿಸಲು ಯತ್ನಿಸಿದ್ದಾರೆ. ಆದರೂ ಹುಲಿ ಮಹೀಂದ್ರಾ xylo ವಾಹನವನ್ನು ಎಳೆದಿದೆ. ಇದನ್ನು ನೋಡಿ ಜನರು ಒಂದು ಕ್ಷಣ ಗಾಬರಿಗೊಂಡಿದ್ದರು. ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋ 24 ಸಾವಿರಕ್ಕೂ ಅಧಿಕ ಲೈಕ್ಸ್ ಗಳಿಸಿದ್ದು ನಟ್ಟಿಗರು ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
Going around #Signal like wildfire. Apparently on the Ooty to Mysore Road near Theppakadu. Well, that car is a Xylo, so I guess I’m not surprised he’s chewing on it. He probably shares my view that Mahindra cars are Deeeliciousss. ? pic.twitter.com/A2w7162oVU
— anand mahindra (@anandmahindra) December 30, 2021
ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ. ಟ್ವಿಟರ್ನಲ್ಲಿ 8 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿರುವ ಅವರು ಅಪೂರೂಪದ ಘಟನೆಗಳ ವೀಡಿಯೋಗಳನ್ನು, ವಿಷಯಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ:
ಈ ದೇಶಗಳಲ್ಲಿ ಈಗಾಗಲೇ ಹೊಸ ವರ್ಷ ಬಂದಾಯ್ತು! ಕೊನೆಯದಾಗಿ 2022ನ್ನು ಸ್ವಾಗತಿಸೋದು ಯಾವ ರಾಷ್ಟ್ರ ಗೊತ್ತಾ?
Published On - 4:29 pm, Fri, 31 December 21