ಈ ದೇಶಗಳಲ್ಲಿ ಈಗಾಗಲೇ ಹೊಸ ವರ್ಷ ಬಂದಾಯ್ತು! ಕೊನೆಯದಾಗಿ 2022ನ್ನು ಸ್ವಾಗತಿಸೋದು ಯಾವ ರಾಷ್ಟ್ರ ಗೊತ್ತಾ?

New Year 2022: ಭಾರತದಲ್ಲಿ ಡಿಸೆಂಬರ್ 31ರ ಮಧ್ಯಾಹ್ನ 3.30 ದಾಟುತ್ತಿದ್ದಂತೆ ಪ್ರಪಂಚದ ಒಂದು ಮೂಲೆಯಲ್ಲಿ ಹೊಸ ವರ್ಷವನ್ನು ಜನರು ಸ್ವಾಗತಿಸಿರುತ್ತಾರೆ. ಇಲ್ಲಿ ಜನವರಿ 1ರ ಸಂಜೆ 5.30 ಆದಾಗ ಪ್ರಪಂಚದ ಮತ್ತೊಂದು ಮೂಲೆಯಲ್ಲಿ ಹೊಸ ವರ್ಷವನ್ನು ಆಗತಾನೇ ಬರಮಾಡಿಕೊಳ್ಳುತ್ತಿರುತ್ತಾರೆ!

ಈ ದೇಶಗಳಲ್ಲಿ ಈಗಾಗಲೇ ಹೊಸ ವರ್ಷ ಬಂದಾಯ್ತು! ಕೊನೆಯದಾಗಿ 2022ನ್ನು ಸ್ವಾಗತಿಸೋದು ಯಾವ ರಾಷ್ಟ್ರ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Dec 31, 2021 | 3:55 PM

ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲೆಡೆ ಸಿದ್ಧತೆಗಳು ಜೋರಾಗಿದ್ದು, ಸಂಭ್ರಮ ಮುಗಿಲುಮುಟ್ಟಿದೆ. ಕೊರೊನಾ ನಿಯಮಾವಳಿಗಳು ವಿಶ್ವಾದ್ಯಂತ ಸಂಭ್ರಮಾಚರಣೆಗೆ ತೊಡಕಾಗಿದ್ದರೂ, ಹೊಸ ವರ್ಷವನ್ನು ಸ್ವಾಗತಿಸುವ ಜನರ ಉತ್ಸಾಹ ಮರೆಯಾಗಿಲ್ಲ. 2021ರ ಕಹಿ-ಸಿಹಿ ನೆನಪುಗಳಿಗೆ ವಿದಾಯ ಹೇಳುತ್ತಾ ಹೊಸ ಭರವಸೆಯೊಂದಿಗೆ ಹೊಸ ವರ್ಷ ಸ್ವಾಗತಿಸಲಾಗುತ್ತದೆ. ಆದರೆ ನಿಮಗೆ ಗೊತ್ತೇ? ಭಾರತದಲ್ಲಿ ಸಿದ್ಧತೆ ನಡೆಯುತ್ತಿರುವಾಗಲೇ ಪ್ರಪಂಚದ ಒಂದು ಮೂಲೆಯಲ್ಲಿ ಹೊಸ ವರ್ಷ ಬಂದಾಗಿರುತ್ತದೆ. ನಮ್ಮ ಸಂಭ್ರಮಗಳು ಮುಗಿಯುವ ವೇಳೆಗೆ ಪ್ರಪಂಚದ ಮಗದೊಂದು ಮೂಲೆಯಲ್ಲಿ ಜನರು ಹೊಸ ವರ್ಷಕ್ಕೆ ಕಾತರದಿಂದ ಕಾಯುತ್ತಿರುತ್ತಾರೆ. ಹೌದು. ಈ ಕುರಿತ ಕುತೂಹಲಕರ ಮಾಹಿತಿ ನಿಮ್ಮ ಓದಿಗಿದೆ.

ಯಾವ ದೇಶದಲ್ಲಿ ಹೊಸ ವರ್ಷ ಮೊದಲು ಬರುತ್ತದೆ? ಸಾಮಾನ್ಯವಾಗಿ ಹೊಸ ವರ್ಷ ಎಂದಾಗ ಆಸ್ಟ್ರೇಲಿಯಾ, ಅಮೇರಿಕಾಗಳಲ್ಲಿ ಸಿಡಿಮದ್ದು ಸಿಡಿಸುವುದನ್ನು ನಾವು ಕಾಣುತ್ತೇವೆ. ಆದರೆ ವಾಸ್ತವವಾಗಿ ಇದು ಕೇವಲ ಪ್ರಾತಿನಿಧಿಕವಷ್ಟೇ. ವಿಶ್ವದಲ್ಲಿ ಮೊದಲು ಹೊಸ ವರ್ಷವನ್ನು ಎದುರುಗೊಳ್ಳುವುದು ಒಸಿಯಾನಿಯಾದ ಜನರು. ಹೌದು. ಟೊಂಗಾ, ಸಮೊವಾ, ಕಿರಬಾಸ್ ದೇಶಗಳು ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತಾರೆ. ಈ ಸಮಯದಲ್ಲಿ ಭಾರತದಲ್ಲಿ ಡಿಸೆಂಬರ್ 31ರ ಮಧ್ಯಾಹ್ನ 3.30 ಆಗಿರುತ್ತದೆ. ಬ್ರಿಟನ್​ನಲ್ಲಿ ಇನ್ನೂ ಡಿಸೆಂಬರ್ 31ರ ಮುಂಜಾವಿನ 10 ಗಂಟೆಯಾಗಿರುತ್ತದೆ. ದ್ವೀಪ ರಾಷ್ಟ್ರಗಳಲ್ಲಿ ಹೊಸ ವರ್ಷ ಆಗಮಿಸಿದ ಐದೇ ನಿಮಿಷಕ್ಕೆ ನ್ಯೂಜಿಲೆಂಡ್ ದೇಶ ಹೊಸ ವರ್ಷವನ್ನು ಎದುರುಗೊಳ್ಳುತ್ತದೆ (ಭಾರತೀಯ ಕಾಲಮಾನ ಡಿ.31ರ ಮಧ್ಯಾಹ್ನ 3.35). ಮೂರು ಗಂಟೆಗಳ ನಂತರ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಪ್ರಾರಂಭವಾಗುತ್ತದೆ (ಭಾರತೀಯ ಕಾಲಮಾನ ಡಿ.31ರ ಸಂಜೆ 6.30).

New Year

ಆಸ್ಟ್ರೇಲಿಯಾದಲ್ಲಿ ಹೊಸ ವರ್ಷ (ಸಂಗ್ರಹ ಚಿತ್ರ)

ಹೊಸ ವರ್ಷವನ್ನು ಕೊನೆಗೆ ಸ್ವಾಗತಿಸುವ ರಾಷ್ಟ್ರಗಳು ಯಾವುವು? ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮೀಪವಿರುವ ದ್ವೀಪ ರಾಷ್ಟ್ರಗಳಾದ ಹೋಲ್ಯಾಂಡ್ ಮತ್ತು ಬೇಕಲ್​ ಐಲ್ಯಾಂಡ್ ಹೊಸ ವರ್ಷಾಚರಣೆಯನ್ನು ಕೊನೆಯದಾಗಿ ಆಚರಿಸುತ್ತವೆ. ಅವು ಹೊಸ ವರ್ಷ ಸ್ವಾಗತಿಸುವಾಗ ಭಾರತದಲ್ಲಿ ಜನವರಿ 1ರ ಸಂಜೆ 5.30 ಆಗಿರುತ್ತದೆ. ಅಚ್ಚರಿಯ ಸಂಗತಿಯೆಂದರೆ ಕಡೆಯದಾಗಿ ಹೊಸ ವರ್ಷ ಸ್ವಾಗತಿಸುವ ಎರಡನೇ ರಾಷ್ಟ್ರ ‘ಅಮೇರಿಕನ್ ಸಮೋವಾ’. ಇದಕ್ಕೂ ಮೊದಲು ಹೊಸ  ವರ್ಷ ಸ್ವಾಗತಿಸುವ ಟೊಂಗಕ್ಕೂ ಕೇವಲ 558 ಮೈಲುಗಳ ದೂರ!

ಅರ್ಥಾತ್ ಟೊಂಗಾ ಮೊದಲಾದ ಒಸಿಯಾನಿಯಾದ ದ್ವೀಪ ರಾಷ್ಟ್ರಗಳು ಹೊಸ ವರ್ಷ ಸ್ವಾಗತಿಸಿದ ಬರೋಬ್ಬರಿ ಒಂದು ದಿನದ ನಂತರ ಅಮೇರಿಕಾದ ಸಮೀಪದ ಹೋಲ್ಯಾಂಡ್ ದ್ವೀಪಗಳು ಹೊಸ ವರ್ಷವನ್ನು ಎದುರುಗೊಳ್ಳುತ್ತವೆ!

ಇದನ್ನೂ ಓದಿ:

ಬೆಂಗಳೂರಿನಲ್ಲಿ ಸಂಜೆ 6 ಗಂಟೆಯಿಂದ ನಿರ್ಬಂಧ; ಹೊಸವರ್ಷಾಚರಣೆ ಹೆಸರಲ್ಲಿ ಹೆಚ್ಚು ಜನ ಸೇರದಂತೆ ಕ್ರಮ

Viral Pic: ಈ ಚಿತ್ರದಲ್ಲಿ ನೀವು ಚಿರತೆಯನ್ನು ಕಾಣಬಲ್ಲಿರಾ? ಬುದ್ದಿಗೆ ಗುದ್ದು ನೀಡುವ ಚಿತ್ರ ನೋಡಿ ತಲೆಕೆಡಿಸಿಕೊಂಡ ನೆಟ್ಟಿಗರು

Published On - 3:51 pm, Fri, 31 December 21

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ