Viral: ಕ್ಯಾನ್ಸರ್ ಗೆದ್ದಿತು, ನಾನೇ ಸೋತು ಹೋದೆ; ಕಣ್ಣಂಚಲಿ ನೀರು ತರಿಸುತ್ತೆ ಯುವಕನ ವಿದಾಯದ ಪೋಸ್ಟ್‌

ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಅದರಲ್ಲೂ ಈ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ಬಂದು ಬಿಟ್ಟರೆ ಮುಗಿದೇ ಹೋಯ್ತು. ಇಲ್ಲೊಬ್ಬ ಯುವಕನದ್ದು ಅದೇ ಪರಿಸ್ಥಿತಿ. ಕ್ಯಾನ್ಸರ್ ವಿರುದ್ಧ ನಿತ್ಯ ನಿರಂತರವಾಗಿ ಹೋರಾಟ ನಡೆಸುತ್ತಿರುವ ಯುವಕನು ನಾನು ಸೋತು ಹೋದೆ, ಕ್ಯಾನ್ಸರ್ ಗೆದ್ದಿತು ಎಂದು ಹೇಳಿಕೊಂಡಿದ್ದಾನೆ. ಈ ಯುವಕನ ಪೋಸ್ಟ್ ನೋಡಿದ ನೆಟ್ಟಿಗರು ಆತನಿಗೆ ಧೈರ್ಯ ತುಂಬಿದ್ದಾರೆ.

Viral: ಕ್ಯಾನ್ಸರ್ ಗೆದ್ದಿತು, ನಾನೇ ಸೋತು ಹೋದೆ; ಕಣ್ಣಂಚಲಿ ನೀರು ತರಿಸುತ್ತೆ ಯುವಕನ ವಿದಾಯದ ಪೋಸ್ಟ್‌
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 17, 2025 | 6:43 PM

ಕ್ಯಾನ್ಸರ್ (Cancer) ಎಂಬ ಹೆಸರು ಕೇಳಿದ ತಕ್ಷಣ ಎಷ್ಟೇ ಗಟ್ಟಿ ಮನಸ್ಸಿನಾಗಿದ್ದರೂ ಸರಿಯೇ, ಒಂದು ಕ್ಷಣ ಭಯವಾಗುತ್ತದೆ. ಈ ರೋಗ ಜೀವವನ್ನೇ ಹಿಂಡಿ ಹಿಪ್ಪೆ ಮಾಡಿ ಕೊನೆಗೆ ಉಸಿರನ್ನು ಕಸಿದುಕೊಳ್ಳುತ್ತದೆ. ಹೀಗಾಗಿ ನಮ್ಮ ಶತ್ರುವಿಗೂ ಈ ಕಾಯಿಲೆ ಬರೋದು ಬೇಡ ಎಂದುಕೊಳ್ಳುತ್ತೇವೆ. ಆದರೆ ಅಂತಿಮ ಹಂತದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ 21 ವರ್ಷದ ಯುವಕನೊಬ್ಬ (Young Man) ಈ ರೋಗದ ವಿರುದ್ಧ ತನ್ನ ಹೋರಾಟ ಹೇಗಿತ್ತು ಎಂದು ವಿವರಿಸಿದ್ದಾನೆ. ಆದರೆ ಕ್ಯಾನ್ಸರ್ ವಿರುದ್ಧ ಹೋರಾಡಲು ನನ್ನಿಂದ ಆಗಲಿಲ್ಲ ಎಂದು ಹೇಳಿದ್ದು, ಈ ಪೋಸ್ಟ್ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಯುವಕನ ಭಾವುಕ ಪೋಸ್ಟ್

r/TwentiesIndia ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡ 21 ವರ್ಷ ಯುವಕನು ಮಾರಕ ಕಾಯಿಲೆ ಕ್ಯಾನ್ಸರ್ ವಿರುದ್ಧ ಹೋರಾಟ ಹೇಗಿತ್ತು ಎಂದು ವಿವರಿಸಿದ್ದಾನೆ. “ಕ್ಯಾನ್ಸರ್ ಗೆದ್ದಿತು ಗೆಳೆಯರೇ, ಹೋಗಿ ಬರುತ್ತೇನೆ” ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ಪೋಸ್ಟ್ ನಲ್ಲಿ ​ ತನಗೆ 21 ವರ್ಷ. 2023ರಲ್ಲಿ ತನಗೆ ನಾಲ್ಕನೇ ಹಂತದ ಕರುಳಿನ ಕ್ಯಾನ್ಸರ್) ಇರುವುದು ಪತ್ತೆಯಾಗಿತ್ತು. ಕಿಮೊಥೆರಪಿ ಮತ್ತು ಸತತ ಆಸ್ಪತ್ರೆ ವಾಸದ ಬಳಿಕ, ವೈದ್ಯರು ಇನ್ನು ಯಾವುದೇ ಚಿಕಿತ್ಸಾ ಆಯ್ಕೆಗಳು ಉಳಿದಿಲ್ಲ. ನಾನು ಬಹುಶಃ ಈ ವರ್ಷದ ಅಂತ್ಯದವರೆಗೆ ಬದುಕುವುದು ಅನುಮಾನ ಎಂದಿದ್ದಾನೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

Cancer won guys , see ya !!!
byu/Erectile7dysfunction inTwentiesIndia

ಇದನ್ನೂ ಓದಿ
ಅಗಲಿದ ತಾಯಿಯನ್ನು ನೆನೆದು ಕಣ್ಣೀರಿಟ್ಟ ಮಹಿಳೆ
ರೈಲಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಯುವಕ
ಆರ್ಥಿಕ ಸಂಕಷ್ಟ ಇದ್ರೂ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆದೆ ಎಂದ ಯುವತಿ
ಅಗಲಿದ ಶ್ವಾನದ ಫೋಟೋವನ್ನು ಆಟೋದಲ್ಲಿ ಇರಿಸಿದ ಬೆಂಗಳೂರಿನ ಆಟೋ ಚಾಲಕ

ಆದರೆ ಈ ದೀಪಾವಳಿ ಹಬ್ಬವು ಸಮೀಪಿಸುತ್ತಿದ್ದು, ಇದು ತನ್ನ ಕೊನೆಯ ಬೆಳಕಿನ ಹಬ್ಬವಾಗಿರಬಹುದು. ನನ್ನ ಕುಟುಂಬವನ್ನು ಕೊನೆಯ ಬಾರಿಗೆ ನೋಡುತ್ತಿದ್ದೇನೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತಿದೆ. ಆ ಬೆಳಕು, ನಗು ಹಾಗೂ ಗದ್ದಲವನ್ನು ನಾನು ಶಾಶ್ವತವಾಗಿ ಕಳೆದುಕೊಳ್ಳುತ್ತೇನೆ. ಸುತ್ತಲಿನ ಜೀವನವು ಎಂದಿನಂತೆ ಸಾಗುತ್ತಿದ್ದರೆ, ನನ್ನ ಜೀವನ ಸದ್ದಿಲ್ಲದೆ ಅಂತ್ಯಗೊಳ್ಳುತ್ತಿದೆ ಎಂದು ಇಲ್ಲಿ ಉಲ್ಲೇಖಿಸಿದ್ದಾನೆ.

ನನಗೂ ಸಾಕಷ್ಟು ಕನಸುಗಳಿದ್ದವು, ಗೊತ್ತಾ? ಹೆಚ್ಚು ಪ್ರಯಾಣಿಸಬೇಕೆಂದು, ಹಲವು ಊರುಗಳನ್ನು ಸುತ್ತಬೇಕೆಂದು, ಸ್ವಂತವಾಗಿ ಏನಾದರೂ ಪ್ರಾರಂಭಿಸಬೇಕೆಂದು, ಎಲ್ಲವೂ ಸರಿಹೋದ ಬಳಿಕ ಒಂದು ನಾಯಿಯನ್ನು ದತ್ತು ತೆಗೆದುಕೊಳ್ಳಬೇಕೆಂದು ಬಯಸಿದ್ದೆ. ಆದರೆ, ನನ್ನ ಬಳಿ ಇದ್ದ ಸಮಯ ಮುಗಿದು ಹೋಗುತ್ತಿದೆ. ನನ್ನ ಕನಸುಗಳು ಕನಸಾಗಿಯೇ ಉಳಿಯುತ್ತಿವೆ. ಬಹುಶಃ ಮುಂದೇನಿದೆಯೋ ಅದರಲ್ಲಿ ಸದ್ದಿಲ್ಲದೆ ಮರೆಯಾಗುವ ಮೊದಲು, ನನ್ನದೊಂದು ಸಣ್ಣ ಕುರುಹು ಬಿಟ್ಟುಹೋಗಲು ಇದೆಲ್ಲವನ್ನೂ ಗಟ್ಟಿಯಾಗಿ ಹೇಳುತ್ತಿದ್ದೇನೆ. ಹೋಗಿ ಬರುತ್ತೇನೆ ಎಂದು ಭಾವುಕ ವಿದಾಯ ಹೇಳಿದ್ದಾನೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಯುವಕನಿಗೆ ಧೈರ್ಯ ತುಂಬಿದ್ದಾರೆ. ಒಬ್ಬ ಬಳಕೆದಾರ, ದೇವರೇ, ಪವಾಡಗಳು ಸಂಭವಿಸುವುದಾದರೆ, ದಯವಿಟ್ಟು ಈ ಹುಡುಗನಿಗೆ ಅದು ಸಂಭವಿಸಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇಲ್ಲಿ ಹೇಳುವುದು ಸರಿಯೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನಿಮಗೆ ಏನಾದರೂ ಕೊನೆಯ ಆಸೆ ಇದೆಯೇ, ಹಾಗಿದ್ದಲ್ಲಿ, ಅದನ್ನು ನನಸಾಗಿಸಲು ನಾವು ನಿಮಗೆ ಏನಾದರೂ ಸಹಾಯ ಮಾಡಬಹುದೇ? ನಿಮಗಾಗಿ ಪ್ರಾರ್ಥನೆಗಳು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಶಕ್ತಿ. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:Viral: ನಾನು ಅಮ್ಮ ಎಂದು ಪಿಸುಗುಟ್ಟುತ್ತಿದ್ದೇನೆ; ಅಗಲಿದ ತಾಯಿಯನ್ನು ನೆನೆದು ಕಣ್ಣೀರಿಟ್ಟ ಮಹಿಳೆ

ಇನ್ನೊಬ್ಬರು ನಿಮ್ಮ ಈ ನಿಮ್ಮ ಪೋಸ್ಟ್ ಓದಿ ನನ್ನ ಕಣ್ಣು ಒದ್ದೆಯಾಯಿತು. ನಿಮ್ಮ ಪರಿಚಯ ಇಲ್ಲದಿದ್ದರೂ.. ಅದನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯುತ್ತಿಲ್ಲ.. ನಿಮ್ಮ ಪೋಸ್ಟ್‌ನಲ್ಲಿ ನಾನು ಅನುಭವಿಸಿದ ನೋವು. ಅದು ನಿಮಗೆ ಎಷ್ಟು ಕಠಿಣವಾಗಿರುತ್ತದೆ ಎಂದು ನನಗೆ ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:23 pm, Fri, 17 October 25