ಕೊರೋನಾ, ಲಾಕ್ಡೌನ್ ಬಳಿಕ ಜಿಮ್ಗಳಿಗೆ ಹೋಗಿ ವರ್ಕೌಟ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ದೇಹಕ್ಕೆ ಆಲಸ್ಯ ಹೊಕ್ಕಿಜಿಮ್ ಗೆ ಹೋಗಿ ದೇಹವನ್ನು ದಂಡಿಸುವವರು ವಿರಳವಾಗಿದ್ದಾರೆ. ನೀವು ಏನಾದರೂ ಜಿಮ್ ಗೆ ಹೋಗಲು ಆಲಸ್ಯ ಹೊಂದಿದವರಾಗಿದ್ದರೆ ಈ ಸ್ಟೋರಿ ಓದಿದ ಬಳಿಕ ಸ್ಪೂರ್ತಿ ಸಿಗಬಹುದು. ಹೌದು, ಸಾಮಾಜಿಕ ಜಾಲತಾಣದಲ್ಲಿ ಬೆಕ್ಕೊಂದು ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್ ಅಗಿದೆ. ಈ ವಿಡಿಯೋದಲ್ಲಿರುವ ಬೆಕ್ಕು ಹೊಟ್ಟೆಯನ್ನು ಕರಗಿಸಲು ಮಾಡುವ ಸಿಟ್–ಅಪ್ ಮಾಡುತ್ತಿದೆ. ಸದ್ಯ ವಿಡಿಯೋ ನೋಡಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಕನಸಿನಲ್ಲಿ ಇದೇ ರೀತಿ ವರ್ಕೌಟ್ ಮಾಡುತ್ತೇನೆ ಎಂದು ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಡೈಲಿ ಮೇಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಬೀಜಿಂಗ್ನಲ್ಲಿ ನಡೆದ ತಮಾಷೆಯ ಘಟನೆ ಎಂದು ವರದಿಯಾಗಿದೆ. ವೀಡಿಯೋ 2 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಬೆಕ್ಕಿನ ಕ್ರಂಚಸ್ ಮತ್ತು ಸಿಟ್–ಅಪ್ ವರ್ಕೌಟ್ ನೋಡಿ, ನೆಟ್ಟಿಗರು ನಗುವಿನ ಎಮೋಜಿಯ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಆಗಾಗ ಬೆಕ್ಕಿನ ತುಟಾಂಟದ ವಿಡಿಯೋಗಳು ನಟ್ಟಿಗರನ್ನು ಸೆಳೆದು, ವೈರಲ್ ಆಗುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಬೆಕ್ಕೊಂದು ಅಡುಗೆ ಮನೆಯಲ್ಲಿ ಕಳ್ಳನಂತೆ ಓಡಾಡುವಾಗ ಬ್ರೆಡ್ ಹಾರಿದ್ದನ್ನು ನೋಡಿ ಹೆದರಿ ನೆಲಕ್ಕೆ ಬಿದ್ದ ವೀಡಿಯೊ ವೈರಲ್ ಆಗಿತ್ತು. ಈಗ ಬೆಕ್ಕಿನ ವರ್ಕೌಟ್ ವೀಡಿಯೋ ಎಲ್ಲರ ಗಮನ ಸೆಳೆದಿದೆ. ಬೆಕ್ಕಿನ ಕಸರತ್ತು ನೋಡಿ ಮನೆಯಲ್ಲಿ ಕುಳಿತವರಿಗೂ ಜಿಮ್ಗೆ ಹೋಗಿ ವ್ಯಾಯಾಮ ಮಾಡಬೇಕು ಎನಿಸಿದರೂ ಆಶ್ಚರ್ಯವಿಲ್ಲ.
Me in my dreams ? pic.twitter.com/B7p17Bztt8
— jass? (@anu2181) December 8, 2021
ಇದನ್ನೂ ಓದಿ:
viral video: ಬಾಯಿ ಚಪ್ಪರಿಸಿಕೊಂಡು ಚಿಕನ್ ತುಂಡುಗಳನ್ನು ತಿಂದ 11 ತಿಂಗಳ ಮಗು: ವೀಡಿಯೋ ವೈರಲ್
Viral Video: ಮೊಸರು ತರಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕ ಅಮಾನತು!