Viral Video : ಈ ಪಕ್ಷಿಗಳೂ ಈ ಬೆಕ್ಕುಗಳೂ, ಹೀಗೊಂದು ಕಾಳಗ

Fighting : ಸಹಜೀವಿಗಳೊಂದಿಗೆ ಹೀಗೆ ಜಗಳಕ್ಕಿಳಿಯುವುದು ಜೀವಜಗತ್ತಿನಲ್ಲಿ ಸಹಜ. ಆಗಾಗ ಇಂಥ ವಿಡಿಯೋಗಳನ್ನು ನೋಡುತ್ತಿರುತ್ತೀರಿ. ಈ ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸುವಂಥದ್ದು ಏನಿದೆ? ನೀವೇ ನೋಡಿ.

Viral Video : ಈ ಪಕ್ಷಿಗಳೂ ಈ ಬೆಕ್ಕುಗಳೂ, ಹೀಗೊಂದು ಕಾಳಗ
ಬೆಕ್ಕು ಪಕ್ಷಿಗಳ ಮಧ್ಯೆ ನಡೆಯುತ್ತಿರುವ ಯುದ್ಧ
Edited By:

Updated on: Sep 09, 2022 | 4:16 PM

Viral Video : ಬೆಕ್ಕು ಪಕ್ಷಿಗಳನ್ನು ಹಿಡಿದು ಬೇಟೆಯಾಡುವ ಅನೇಕ ವಿಡಿಯೋಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೀರಿ. ಆದರೆ ಇಲ್ಲಿ ಪಕ್ಷಿಯೊಂದನ್ನು ಅಟ್ಯಾಕ್​ ಮಾಡಿದ್ದಕ್ಕೆ ಬೇಟೆಗಾರ ಬೆಕ್ಕನ್ನು ಎಲ್ಲ ಪಕ್ಷಿಗಳೂ ಸೇರಿ ಅಟ್ಯಾಕ್​ ಮಾಡುತ್ತವೆ. ಇದು ಬೆಕ್ಕುಗಳು ಮತ್ತು ಹಕ್ಕಿಗಳ ಮಧ್ಯೆ ನಡೆದ ಯುದ್ಧ! ಈ ವಿಡಿಯೋ ಅನ್ನು ನೀವು ವಾಲ್ಯೂಮ್ ಕೊಟ್ಟೇ ನೋಡಬೇಕು. ಜೇಮ್ಸ್​ ಬಾಂಡ್​ ಸಿನೆಮಾದ ಫೈಟಿಂಗ್​ ಸೀನ್ ಮತ್ತದಕ್ಕೆ ಇದ್ದ ಬಿಜಿಎಮ್​  ನೆನಪಿದ್ದಲ್ಲಿ ಈ ಬಗ್ಗೆ ಮುಂದೆ ವಿವರಿಸಬೇಕಿಲ್ಲ. ಈ ವಿಡಿಯೋ ಬೆಕ್ಕೊಂದು ಹಾರಿ ಬಂದು ಪಕ್ಷಿಯನ್ನು ಹಿಡಿಯುವ ದೃಶ್ಯದೊಂದಿಗೆ ತೆರೆದುಕೊಳ್ಳುತ್ತದೆ. ಜೊತೆಗೆ ಮತ್ತಷ್ಟು ಬೆಕ್ಕುಗಳು ಸೇರಿಕೊಳ್ಳುತ್ತವೆ.

ಜಾತಿ ಜಾತಿಗಳ ನಡುವಿನ ಯುದ್ಧದಂತೆಯೇ ಇದು ಎರಡು ಭಿನ್ನ ಗುಂಪಿನ ಪ್ರಾಣಿ ಪಕ್ಷಿಗಳ ನಡುವಿನ ಯುದ್ಧ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎಂಥ ಕೆಟ್ಟ ಜಗತ್ತಿದು ಪ್ರಾಣಿ ಪಕ್ಷಿಗಳು ಹೀಗೆ ಜಗಳಾಡುತ್ತಿವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರಾಣಿ ಪಕ್ಷಿಗಳಲ್ಲೂ ಸಿಟ್ಟು ಸೇಡು ಇರುತ್ತದೆ. ಎಲ್ಲ ಜೀವಿಗಳಲ್ಲೂ ಇದು ಸಹಜ. ಬೇಟೆ ಮೂಲದ ಪ್ರವೃತ್ತಿಯಿಂದ ಬಂದವಲ್ಲವೆ? ಅಷ್ಟೇ ಏಕೆ ಮನುಷ್ಯನೂ ಇದೇ ಗುಂಪಿಗೆ ಸೇರುವವನೇ. ಬೇಟೆ ಎಂದಮೇಲೆ ಕೇಳಬೇಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:08 pm, Fri, 9 September 22