Cat Lover : ಬೆಕ್ಕುಗಳು ಎಷ್ಟೇ ಸೊಕ್ಕಿನ ಮುದ್ದೆ ಎನ್ನಿಸಿಕೊಂಡರೂ ತನ್ನನ್ನು ಸಾಕಿದವರ ಮನಸ್ಸನ್ನು ಮಾತ್ರ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಯುವತಿಯೊಬ್ಬಳು ದುಃಖದಲ್ಲಿದ್ದಾಳೆ. ನಿಧಾನಕ್ಕೆ ಅವಳ ಬಳಿ ಬಂದ ಬೆಕ್ಕು ಆಕೆಯ ಮೈದಡವಿ, ಮೈಯೇರಿ ಸಮಾಧಾನಿಸುತ್ತದೆ. ರೆಡ್ಡಿಟ್ನಲ್ಲಿ (Reddit) ಹಂಚಿಕೊಂಡ ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗುತ್ತಿದ್ದಾರೆ. ಮನುಷ್ಯ ಮತ್ತು ಬೆಕ್ಕುಗಳ ನಡುವಿನ ಪ್ರೀತಿಯನ್ನು ಅವರು ಕೊಂಡಾಡುತ್ತಿದ್ದಾರೆ. ನಮ್ಮ ಮನೆಯ ಬೆಕ್ಕುಗಳು ಕೂಡ ಹೀಗೆಯೇ ವರ್ತಿಸುತ್ತವೆ. ಮನುಷ್ಯಮನುಷ್ಯನಿಗಿಂತ ಸಾಕುಪ್ರಾಣಿಗಳಿಗೆ ಮನುಷ್ಯನ ಮನಸ್ಸು ಅರ್ಥವಾಗುತ್ತದೆ ಮತ್ತವು ಸೂಕ್ಷ್ಮವಾಗಿ ಸ್ಪಂದಿಸುತ್ತವೆ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್ ನೂರ್
20 ಗಂಟೆಗಳ ಹಿಂದೆ ಹಂಚಿಕೊಂಡ ಈ ವಿಡಿಯೋಗೆ 37,000 ಜನರು ಲೈಕ್ ಮಾಡಿದ್ದಾರೆ. ಪ್ರತಿಕ್ರಿಯಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಬಹಳ ಬುದ್ಧಿವಂತ, ಹೃದಯವಂತ ಮತ್ತು ಕಾಳಜಿಯುಳ್ಳ ಬೆಕ್ಕು, ಇದನ್ನು ಪಡೆದವರು ಅದೃಷ್ಟವಂತರು ಎನ್ನುತ್ತಿದ್ದಾರೆ. ನನಗೆ ಕುತ್ತಿಗೆಯ ಶಸ್ತ್ರಚಿಕಿತ್ಸೆಯಾದಾಗ ನಾನು ತುಂಬಾ ನೋವಿನಿಂದ ಬಳಲುತ್ತಿದ್ದೆ. ಹಾಸಿಗೆಯಲ್ಲಿದ್ದಷ್ಟು ದಿನಗಳ ಕಾಲ ಬೆಕ್ಕು ನನ್ನ ಭುಜಕ್ಕೆ ತಲೆ ಇಟ್ಟು ಮಲಗುತ್ತಿತ್ತು ಎಂದಿದ್ದಾರೆ ಮತ್ತೊಬ್ಬರು.
Cat comforts her crying owner
by u/sh0tgunben in AnimalsBeingBros
ನಿಜಕ್ಕೂ ಇದು ಒಳ್ಳೆಯ ಬೆಕ್ಕು, ಮನುಷ್ಯರ ಮೇಲೆ ನಂಬಿಕೆ ಕಳೆದುಕೊಂಡಾಗ ಪ್ರಾಣಿಗಳೇ ಮನುಷ್ಯರಿಗೆ ಸ್ನೇಹಿತರು ಎಂದಿದ್ದಾರೆ ಒಬ್ಬರು. ಕೊವಿಡ್ಗೆ ಒಳಗಾದಾಗ ನಾನು ನನ್ನ ಗಂಡ ಬೇರೆ ಬೇರೆ ಕೋಣೆಯಲ್ಲಿ ವಾಸಿಸುತ್ತಿದ್ದೆವು. ಆಗ ನನ್ನ ಮೊಲ ಹಗಲೂ ರಾತ್ರಿ ನನ್ನೊಂದಿಗಿದ್ದು ನಾನು ಚೇತರಿಸಿಕೊಳ್ಳುವಲ್ಲಿ ಸಹಾಯ ಮಾಡಿತು ಎಂದಿದ್ದಾರೆ ಇನ್ನೊಬ್ಬರು. ಬೆಡ್ರೂಮ್ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದವರು ಯಾರು ಈ ವಿಡಿಯೋದಲ್ಲಿ? ಎಂದು ಕೇಳಿದ್ಧಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಅಮಾಸೆಬೈಲು; ಕೆಸರಿನಲ್ಲಿ ಹೂತುಹೋಗಿದ್ದ ಆಕಳನ್ನು ರಕ್ಷಿಸಿದ ಬೈಕ್ ಸವಾರರು
ಕೆಲವರು, ಎಲ್ಲಾ ಸರಿ ಆದರೆ ಬೆಡ್ರೂಮ್ನಲ್ಲಿ ಕ್ಯಾಮೆರಾ ಇಟ್ಟಿರುವುದು ಏಕೆ? ರೆಕಾರ್ಡ್ ಮಾಡಿರುವ ಉದ್ದೇಶವೇನು ಎಂದು ಕೇಳಿದ್ದಾರೆ. ಇದೂ ರೀಲ್ ಮಾಡುವ ಉದ್ದೇಶಕ್ಕೇ ಮಾಡಿರಬೇಕು ಎಂದಿದ್ದಾರೆ ಒಂದಿಷ್ಟು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ