Viral Video : ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಈ ಅಹಿತಕರ ಘಟನೆ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಆಟೋ ಚಾಲಕ ಕಿರುಕುಳ ಕೊಡಲು ಯತ್ನಿಸಿದಾಗ, ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಬಾಲಕಿ ರಸ್ತೆಗೆ ಜಿಗಿದಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಅಡಕವಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಚಾಲಕನನ್ನು ಶಪಿಸುತ್ತಿದ್ದಾರೆ.
#WATCH #CCTV #Crime #BREAKING#Maharashtra In #Aurangabad auto driver #molested girl in moving auto,minor girl jumped from moving auto,#girlinjured
ಇದನ್ನೂ ಓದಿAfter molesting the girl jumped from speeding #auto which was caught on CCTV #ACCIDENT pic.twitter.com/udGvgMgbry
— Harish Deshmukh (@DeshmukhHarish9) November 16, 2022
ಬಾಲಕಿ ಹೀಗೆ ರಸ್ತೆಗೆ ಜಿಗಿದು ಬೀಳುತ್ತಿದ್ದಂತೆ ಇತರೇ ವಾಹನ ಸವಾರರು ಅವಳನ್ನು ತಕ್ಷಣವೇ ರಕ್ಷಿಸಿದ್ದಾರೆ. ಆಟೋ ಚಾಲಕ ಕೊಡುತ್ತಿದ್ದ ಕಿರುಕುಳದಿಂದ ತಪ್ಪಿಸಿಕೊಳ್ಳಲೆಂದೇ ಈಕೆ ಹೀಗೆ ಜಿಗಿದಿದ್ದಾಳೆ. ಆ ಜಿಗಿತದ ಪರಿಣಾಮ ಏನಾಗಬಹುದು ಎಂಬ ಅಂದಾಜು ಆಕೆಗೆ ಗೊತ್ತಾಗಿಲ್ಲ. ತಲೆಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅದೃಷ್ಟವಶಾತ್ ಬದುಕುಳಿದಿದ್ದಾಳೆ.
ಆಟೋ ಚಾಲಕ ಸಯ್ಯದ್ ಅಕ್ಬರ್ ಹಮೀದ್ನನ್ನು ಬಂಧಿಸಿದ ಔರಂಗಾಬಾದ್ನ ಕ್ರಾಂತಿ ಚೌಕ್ ಪೊಲೀಸ್ ಠಾಣೆಯ ಪೊಲೀಸರು ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣಾ ಕಾಯ್ದೆ (Pocso) ಅಡಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಗಣಪತ್ ದಾರಾಡೆ, ‘ಈ ಅಪ್ರಾಪ್ತ ಬಾಲಕಿಯು ಉಸ್ಮಾನ್ಪುರದಿಂದ ತನ್ನ ಮನೆಗೆ ಆಟೋದಲ್ಲಿ ಹೊರಟಿದ್ದಾಗ ಆಟೋಚಾಲಕ ಅಶ್ಲೀಲವಾದ ಮಾತುಗಳನ್ನಾಡಿ ಕಿರುಕುಳ ನೀಡಿದ್ದಾನೆ. ನಂತರ ಬಾಲಕಿಗೆ ಅವನ ಈ ನಡೆ ತಪ್ಪು ಎಂದು ಅರ್ಥವಾಗಿದೆ. ಅಷ್ಟೊತ್ತಿಗೆ ಆಟೊ ಖಾನಾ ಕಾಂಪ್ಲೆಕ್ಸ್ ಬಳಿ ಬಂದಿದೆ. ಹಿಂದೆಮುಂದೆ ಯೋಚಿಸದೆ ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಸಂಚಾರದಟ್ಟಣೆ ಲೆಕ್ಕಿಸದೆ ಜಿಗಿದುಬಿಟ್ಟಿದ್ದಾಳೆ.’ ಎಂದು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:09 pm, Wed, 16 November 22