ಅಮೆರಿಕದಲ್ಲಿ 10,000 ಮಿಂಕ್ಗಳು ಫಾರ್ಮ್ಹೌಸ್ನಿಂದ ಕಾಣೆ
Minks : ಮಾಲೀಕರ ಪ್ರಕಾರ ಸುಮಾರು 25,000ದಿಂದ 40,000 ಮಿಂಕ್ಗಳನ್ನು ಪಂಜರದಿಂದ ಬಿಡುಗಡೆಗೊಳಿಸಲಾಗಿದೆ. ಈ ಕೃತ್ಯವನ್ನು ಯಾವ ಕಾರಣಕ್ಕಾಗಿ ಯಾರು ಎಸಗಿದ್ದಾರೆ ಎನ್ನುವುದು ತಿಳಿದುಬಂದಿಲ್ಲ
Viral : ಸುಮಾರು 10,000 ದಷ್ಟು ಮಿಂಕ್ಗಳು ಅಮೆರಿಕದ ಓಹಿಯೋ ಫಾರ್ಮ್ಹೌಸ್ನಿಂದ ಕಾಣೆಯಾಗಿವೆ. ಈ ಫಾರ್ಮ್ಹೌಸ್ನ ಮಾಲೀಕರು ಅಂದಾಜಿಸಿದಂತೆ 25,000 ದಿಂದ 40,000 ಮಿಂಕ್ಗಳನ್ನು ಅವುಗಳ ಪಂಜರದಿಂದ ಹೊರಬಿಡಲಾಗಿದೆ. ರಸ್ತೆಯನ್ನು ದಾಟುತ್ತಿರುವಾಗ ಸಾಕಷ್ಟು ಮಿಂಕ್ಗಳು ಅಪಘಾತಕ್ಕೆ ಬಲಿಯಾಗಿವೆ. ಮಂಗಳವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದೆ.
ಅಮೆರಿಕದ ವ್ಯಾನ್ವರ್ಟ್ ಕೌಂಟಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ಕೌಂಟಿಯ ಶೆರಿಫ್ ಥಾಮಸ್, ‘ಮಾಲೀಕರ ಪ್ರಕಾರ ಸುಮಾರು 25,000ದಿಂದ 40,000 ಮಿಂಕ್ಗಳನ್ನು ಪಂಜರದಿಂದ ಬಿಡುಗಡೆಗೊಳಿಸಲಾಗಿದೆ. ಈ ಕೃತ್ಯವನ್ನು ಯಾವ ಕಾರಣಕ್ಕಾಗಿ ಯಾರು ಎಸಗಿದ್ದಾರೆ ಎನ್ನುವುದು ತಿಳಿದುಬಂದಿಲ್ಲ’ ಎಂದಿದ್ದಾರೆ.
ಮಿಂಕ್ಗಳು ಪಂಜರಗಳಿಂದ ಚೆದುರಿ ಹೋಗುತ್ತಿದ್ದಂತೆ ಶೆರಿಫ್ ಕಚೇರಿಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಯಿತು. ಸಣ್ಣಸಣ್ಣ ಸಾಕುಪ್ರಾಣಿಗಳು, ಕೋಳಿಗಳ ಬಗ್ಗೆ ಜಾಗ್ರತೆಯಿಂದ ಇರಲು ಸೂಚಿಸಲಾಯಿತು.
ತನಿಖೆಯ ನಂತರವಷ್ಟೇ ಕಾರಣ ತಿಳಿಯಲಿದೆ. ಆದರೆ ಈ ಹಿಂದೆ ಎನಿಮಲ್ ಲಿಬರೇಶನ್ ಫ್ರಂಟ್ ಎಂಬ ಸಂಸ್ಥೆಯು ಕೆಲ ವರ್ಷಗಳ ಹಿಂದೆ ಮತ್ತೊಂದು ಫಾರ್ಮ್ನಲ್ಲಿ ಮಿಂಕ್ಗಳನ್ನು ಪಂಜರದಿಂದ ತೆರವುಗೊಳಿಸಿತ್ತು. ಆದರೆ ಅವು ಕಡಿಮೆಪ್ರಮಾಣದಲ್ಲಿದ್ದವು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:16 pm, Wed, 16 November 22