ಐಸ್ಲ್ಯಾಂಡ್ನ ನೆಲದೊಳಗೆ ಬ್ರೆಡ್ ಬೇಯುತ್ತದೆ, ಹೇಗೆಂದು ನೋಡಿ ಈ ವಿಡಿಯೋದಲ್ಲಿ
Iceland: ಇಲ್ಲಿಯ ಜನ ನೆಲದಲ್ಲಿ ಬ್ರೆಡ್ ಬೇಯಿಸುತ್ತಾರೆ. ಮೊಟ್ಟೆ ಬೇಯಿಸುತ್ತಾರೆ. ಕೇಕ್ ಕೂಡ. ಅಚ್ಚರಿಯಾಗ್ತಿದೆಯಾ? ಈ ವಿಡಿಯೋ ಮೂಲಕ ಐಸ್ಲ್ಯಾಂಡಿಗೆ ಬನ್ನಿ ಹಾಗಿದ್ದರೆ...
Viral Video : ಐಸ್ಲ್ಯಾಂಡ್ನ ಈ ನದೀತಟದಲ್ಲಿ ನೆಲದೊಳಗೆ ಬ್ರೆಡ್ ಬೇಯಿಸಲಾಗುತ್ತದೆ. ಅಚ್ಚರಿಯಾಗುತ್ತಿದೆಯಾ? ಬೇಕರಿಯ ಓವನ್ನುಗಳಲ್ಲಿ ಬ್ರೆಡ್ ಬೇಯುವುದು ಗೊತ್ತು. ಆದರೆ ನೆಲದಲ್ಲಿ? ಹೌದು. ಇಲ್ಲಿ ಕಾಣುವ ನದೀ ತಟದಲ್ಲಿರುವ ಮಣ್ಣನ್ನು ಅಗೆದು ಗುಂಡಿ ತೋಡಲಾಗುತ್ತದೆ. ಪಾತ್ರೆಯೊಳಗೆ ಬ್ರೆಡ್ನ ಹಿಟ್ಟನ್ನು ಹಾಕಿ ಆ ಗುಂಡಿಯೊಳಗೆ ಹೂತಿಡಲಾಗುತ್ತದೆ. ಹೇಗೆಂದು ತಿಳಿದುಕೊಳ್ಳಬೇಕಾ? ಈ ವಿಡಿಯೋ ನೋಡಿ.
ಇಲ್ಲಿ ಕ್ಲಿಕ್ ಮಾಡಿ ಬ್ರೆಡ್ ಹೇಗೆ ಬೇಯಿಸಲಾಗುತ್ತದೆ ಎಂದು ತಿಳಿದುಕೊಳ್ಳಲು
ಬಿಸಿನೀರಿನ ಬುಗ್ಗೆಗಳಿಂದಾಗಿ ಸಹಜವಾದ ಶಾಖವು ಇಲ್ಲಿ ಉತ್ಪತ್ತಿಯಾಗುತ್ತದೆ. ಐಸ್ಲ್ಯಾಂಡ್ನ ಜನರು ಈ ಶಾಖದಲ್ಲಿ ಬ್ರೆಡ್, ಕೇಕ್ ಮತ್ತು ಮೊಟ್ಟೆಗಳನ್ನು ಬೇಯಿಸುತ್ತಾರೆ. ಟ್ರಾವೆಲ್ ಬ್ಲಾಗರ್ ಕಯಾನಾ ಸ್ಯೂ ಪವರ್ಸ್ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಐಸ್ಲ್ಯಾಂಡ್ನ ಲೌಗರ್ವಾಟ್ನ್ ಫೌಂಟಾನಾ ಎಂಬ ಬೇಕರಿಯಲ್ಲಿ ನೆಲದಲ್ಲಿ ಮಾಡಿದ ತಾಜಾ ಬ್ರೆಡ್ನ ರುಚಿಯನ್ನು ನೋಡಿದ್ದಾರೆ.
ಈ ವಿಡಿಯೋದಲ್ಲಿ ಬ್ರೆಡ್ ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ. ಸ್ಥಳೀಯರು ಬೇಕಾದ ಆಹಾರಗಳನ್ನು ಹೀಗೆ ಬೇಯಿಸಿಕೊಂಡು ಹೋಗುತ್ತಾರೆ. ಕಳೆದ ತಿಂಗಳು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಈತನಕ ಸಾವಿರಾರು ಜನರು ಮೆಚ್ಚಿದ್ದಾರೆ. ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇದು ಅದ್ಭುತವಾಗಿದೆ. ಎಲ್ಲ ಊರುಗಳಲ್ಲಿಯೂ ಇಂಥ ಬಿಸಿನೀರಿನ ಬುಗ್ಗೆಗಳಿರಬಾರದಾ? ಎಂದಿದ್ದಾರೆ ನೆಟ್ಟಿಗರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:50 pm, Wed, 16 November 22