AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಲಕನ ಕಿರುಕುಳ ತಪ್ಪಿಸಿಕೊಳ್ಳಲು ಚಲಿಸುತ್ತಿರುವ ಆಟೋದಿಂದ ಜಿಗಿದ ಬಾಲಕಿಯ ವಿಡಿಯೋ ವೈರಲ್

To Escape Molestation : ಅಶ್ಲೀಲ ಮಾತುಗಳಿಂದ ಆಟೋಚಾಲಕ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಬಾಲಕಿ ಹಿಂದೆಮುಂದೆ ನೋಡದೆ ಸಂಚಾರದಟ್ಟಣೆಯಿದ್ದ ರಸ್ತೆಗೆ ಜಿಗಿದುಬಿಟ್ಟಿದ್ದಾಳೆ. ಈ ಘಟನೆ ಔರಂಗಾಬಾದ್​ನಲ್ಲಿ ನಡೆದಿದೆ.

ಚಾಲಕನ ಕಿರುಕುಳ ತಪ್ಪಿಸಿಕೊಳ್ಳಲು ಚಲಿಸುತ್ತಿರುವ ಆಟೋದಿಂದ ಜಿಗಿದ ಬಾಲಕಿಯ ವಿಡಿಯೋ ವೈರಲ್
Caught On Camera Girl Jumps Off Speeding Autorickshaw To Escape Molestation Bid In Aurangabad
TV9 Web
| Edited By: ಶ್ರೀದೇವಿ ಕಳಸದ|

Updated on:Nov 16, 2022 | 1:11 PM

Share

Viral Video : ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಈ ಅಹಿತಕರ ಘಟನೆ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಆಟೋ ಚಾಲಕ ಕಿರುಕುಳ ಕೊಡಲು ಯತ್ನಿಸಿದಾಗ, ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಬಾಲಕಿ ರಸ್ತೆಗೆ ಜಿಗಿದಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಅಡಕವಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಚಾಲಕನನ್ನು ಶಪಿಸುತ್ತಿದ್ದಾರೆ.

ಬಾಲಕಿ ಹೀಗೆ ರಸ್ತೆಗೆ ಜಿಗಿದು ಬೀಳುತ್ತಿದ್ದಂತೆ ಇತರೇ ವಾಹನ ಸವಾರರು ಅವಳನ್ನು ತಕ್ಷಣವೇ ರಕ್ಷಿಸಿದ್ದಾರೆ. ಆಟೋ ಚಾಲಕ ಕೊಡುತ್ತಿದ್ದ ಕಿರುಕುಳದಿಂದ ತಪ್ಪಿಸಿಕೊಳ್ಳಲೆಂದೇ ಈಕೆ ಹೀಗೆ ಜಿಗಿದಿದ್ದಾಳೆ. ಆ ಜಿಗಿತದ ಪರಿಣಾಮ ಏನಾಗಬಹುದು ಎಂಬ ಅಂದಾಜು ಆಕೆಗೆ ಗೊತ್ತಾಗಿಲ್ಲ. ತಲೆಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅದೃಷ್ಟವಶಾತ್​ ಬದುಕುಳಿದಿದ್ದಾಳೆ.

ಆಟೋ ಚಾಲಕ ಸಯ್ಯದ್ ಅಕ್ಬರ್ ಹಮೀದ್​ನನ್ನು ಬಂಧಿಸಿದ ಔರಂಗಾಬಾದ್​ನ ಕ್ರಾಂತಿ ಚೌಕ್​ ಪೊಲೀಸ್​ ಠಾಣೆಯ ಪೊಲೀಸರು ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣಾ ಕಾಯ್ದೆ (Pocso) ಅಡಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್​ ಇನ್ಸ್​ಪೆಕ್ಟರ್​ ಗಣಪತ್ ದಾರಾಡೆ, ‘ಈ ಅಪ್ರಾಪ್ತ ಬಾಲಕಿಯು ಉಸ್ಮಾನ್​ಪುರದಿಂದ ತನ್ನ ಮನೆಗೆ ಆಟೋದಲ್ಲಿ ಹೊರಟಿದ್ದಾಗ ಆಟೋಚಾಲಕ ಅಶ್ಲೀಲವಾದ ಮಾತುಗಳನ್ನಾಡಿ ಕಿರುಕುಳ ನೀಡಿದ್ದಾನೆ. ನಂತರ ಬಾಲಕಿಗೆ ಅವನ ಈ ನಡೆ ತಪ್ಪು ಎಂದು ಅರ್ಥವಾಗಿದೆ. ಅಷ್ಟೊತ್ತಿಗೆ ಆಟೊ ಖಾನಾ ಕಾಂಪ್ಲೆಕ್ಸ್​ ಬಳಿ ಬಂದಿದೆ. ಹಿಂದೆಮುಂದೆ ಯೋಚಿಸದೆ ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಸಂಚಾರದಟ್ಟಣೆ ಲೆಕ್ಕಿಸದೆ ಜಿಗಿದುಬಿಟ್ಟಿದ್ದಾಳೆ.’ ಎಂದು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:09 pm, Wed, 16 November 22

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ