CCTV Footage: ತಂದೆಯ ತೋಳಿನಲ್ಲಿದ್ದ ಮಗು, ಕೈ ಜಾರಿ ಮೂರನೇ ಮಹಡಿಯಿಂದ ಬಿದ್ದು ಸಾವು

ಮೂರನೇ ಮಹಡಿಯಿಂದ ಬಿದ್ದ ಮಗುವನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಸುಮಾರು 40 ಅಡಿಗಳಷ್ಟು ಆಳಕ್ಕೆ ಮಗು ಬಿದ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

CCTV Footage: ತಂದೆಯ ತೋಳಿನಲ್ಲಿದ್ದ ಮಗು, ಕೈ ಜಾರಿ ಮೂರನೇ ಮಹಡಿಯಿಂದ ಬಿದ್ದು ಸಾವು
ತಂದೆಯ ತೋಳಿನಲ್ಲಿದ್ದ ಮಗು, ಕೈ ಜಾರಿ ಮೂರನೇ ಮಹಡಿಯಿಂದ ಬಿದ್ದು ಸಾವು

Updated on: Mar 20, 2024 | 11:50 AM

ಛತ್ತೀಸ್‌ಗಢ: ಶಾಪಿಂಗ್ ಮಾಲ್‌ನ ಮೂರನೇ ಮಹಡಿಯಲ್ಲಿ ಲಿಫ್ಟ್​​​​​ ಹತ್ತುವಾಗ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ 40 ಅಡಿಗಳಷ್ಟು ಕೆಳಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ತಡರಾತ್ರಿ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಮಾಲ್‌ನಲ್ಲಿ ನಡೆದಿದೆ. ಸುಮಾರು 40 ಅಡಿಗಳಷ್ಟು ಆಳಕ್ಕೆ ಮಗು ಬಿದ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬರು ಒಂದು ಕೈಯಲ್ಲಿ 5ವರ್ಷದ ಮಗುವನ್ನು ಮತ್ತು ಮತ್ತೊಂದು ತೋಳಿನಲ್ಲಿ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಲಿಫ್ಟ್​​ ಬಳಿ ಬರುತ್ತಿರುವುದು ಸೆರೆಯಾಗಿದೆ. ಲಿಫ್ಟ್​​ ಹತ್ತುವ ವೇಳೆ 5ವರ್ಷದ ಮಗು ಕಷ್ಟಪಡುತ್ತಿದ್ದು, ಈ ವೇಳೆ ಅಪ್ಪ ಸಹಾಯಕ್ಕೆ ಮುಂದಾಗಿದ್ದು,ಆಕಸ್ಮಿಕವಾಗಿ ತೋಳಿನಲ್ಲಿದ್ದ ಒಂದು ವರ್ಷದ ಮಗು ಕೈಯಿಂದ ಜಾರಿ 40 ಅಡಿಗಳಷ್ಟು ಆಳಕ್ಕೆ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎದೆನಡುಕ ಹುಟ್ಟಿಸುವ ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ:

ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ

ಮೂರನೇ ಮಹಡಿಯಿಂದ ಬಿದ್ದ ಮಗುವನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ವರದಿಗಳು ತಿಳಿಸಿವೆ. ದೇವೇಂದ್ರ ನಗರ ಪೊಲೀಸರು ಪ್ರಸ್ತುತ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ಬಾಕಿ ಉಳಿದಿವೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ