Viral Video : ಈಗ ಯಾರಿಗೂ ಸಮಯವಿಲ್ಲ. ಎಲ್ಲವೂ ಪಟಪಟನೆ ಆಗಬೇಕು. ಹಾಗಿದ್ದರೆ ಏನು ಮಾಡಬೇಕು? ಇಂಥ ಸುಲಭ ವಿಧಾನವನ್ನು ಅನುಸರಿಸಬೇಕು. ನಿತ್ಯಜೀವನಕ್ಕೆ ಉಪಯೋಗವಾಗುವಂಥ ಸಾಕಷ್ಟು ಇಂಥ ವಿಡಿಯೋಗಳು ಇಂದು ಬೇಡಿಕೆಯಲ್ಲಿವೆ. ಇವುಗಳ ಪಟ್ಟಿಗೆ ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಕೂಡ ಸೇರಿಕೊಂಡಿದೆ. ಚೆಫ್ ವಿಕಾಸ್ ಖನ್ನಾ, ಒಂದೇ ನಿಮಿಷದಲ್ಲಿ ತೆಂಗಿನಕಾಯಿಯನ್ನು ಚಿಪ್ಪಿನಿಂದ ಬೇರ್ಪಡಿಸುವ ತಂತ್ರವನ್ನು ತೋರಿಸಿಕೊಟ್ಟಿದ್ದಾರೆ.
ತೆಂಗಿನಕಾಯಿಯನ್ನು ಒಡೆಯುವುದು, ಕತ್ತರಿಸುವುದು ಜೊತೆಗೆ ಕೈನೋವು ಮಾಡಿಕೊಳ್ಳುವುದು ಈ ಎಲ್ಲದಕ್ಕೂ ಮತ್ತದರದೇ ಆದ ಸಮಯವನ್ನೂ ತೆಗೆದುಕೊಳ್ಳುವುದು… ಎಲ್ಲವೂ ತಲೆನೋವಿನ ಕೆಲಸ. ಆದರೆ ಒಂದೇ ಬಾರಿಗೆ ಹೀಗೆ ತೆಂಗಿನಾಯಿಯನ್ನು ಚಿಪ್ಪಿನಿಂದ ಬೇರ್ಪಡಿಸುವುದು ಒಳ್ಳೆಯ ಐಡಿಯಾ ಅಲ್ಲವೆ?
ವಿಕಾಸ್, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದ್ದಾಗ ಮಹಿಳೆಯೊಬ್ಬರು ಈ ತಂತ್ರವನ್ನು ಅನುಸರಿಸಿದರಂತೆ. ಆನಂತರ ತಮಗೂ ಹೀಗೆ ಮಾಡಬೇಕು ಅನ್ನಿಸಿತಂತೆ. ಈ ತನಕ 50,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಓಹ್ ಎಂಥ ಸರಳವಿದು. ನಾವು ಚಾಕು, ಸುತ್ತಿಗೆ, ಚಮಚ ಇನ್ನೂ ಏನೇನೋ ತೆಗೆದುಕೊಂಡು ಕಸರತ್ತು ಮಾಡುತ್ತಿರುತ್ತೇವೆ ಎಂದಿದ್ದಾರೆ ಒಬ್ಬರು. ಇಂಥ ಮಾಹಿತಿಗಾಗಿ ಬಹಳ ಧನ್ಯವಾದ. ಇಂಥ ಸಾವಿರ ವಿಡಿಯೋ ಮಾಡಿ ಹಾಕಿದರೂ ಸರಿಯೇ ಎಂದಿದ್ದಾರೆ ಮತ್ತೊಬ್ಬರು. ಅಬ್ಬಾ ಇದು ನನ್ನ ನಿತ್ಯ ಜೀವನವನ್ನು ಸುಲಭವೂ ಸುಗಮವೂಗೊಳಿಸುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು. ನಾನು ಖಂಡಿತವಾಗಿಯೂ ಇದನ್ನು ಪ್ರಯತ್ನಿಸುತ್ತೇನೆ ಎಂದಿದ್ದಾರೆ ಮಗದೊಬ್ಬರು.
ನಿಮಗೀಗಾಗಲೇ ಈ ತಂತ್ರ ಗೊತ್ತಿತ್ತಾ? ಇಲ್ಲವಾದರೆ ಪ್ರಯತ್ನಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ