Viral: ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಜ್ಞೆ ತಪ್ಪಿ ಬಿದ್ದ ಬಾಲಕ, ಪ್ರಾಣ ಪಣಕ್ಕಿಟ್ಟು ಬಾಲಕನ ರಕ್ಷಣೆಗೆ ಧಾವಿಸಿದ ವ್ಯಕ್ತಿ, ವಿಡಿಯೋ ವೈರಲ್

ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಕೆಲಸ ಹಾಗೂ ಸಹಾಯವು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ನಿಂತಿದ್ದ ಮಳೆನೀರಿಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿಯೊಬ್ಬನು ರಸ್ತೆಯಲ್ಲಿದ್ದ ನೀರಿಗೆ ಬಿದ್ದಿದ್ದಾನೆ. ಆ ತಕ್ಷಣವೇ ವ್ಯಕ್ತಿಯೊಬ್ಬರು ಹಿಂದೆ ಮುಂದೆ ನೋಡದೆ ಆ ಬಾಲಕನನ್ನು ರಕ್ಷಿಸಿದ್ದಾರೆ. ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಕ್ತಿಯ ಈ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Viral: ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಜ್ಞೆ ತಪ್ಪಿ ಬಿದ್ದ ಬಾಲಕ, ಪ್ರಾಣ ಪಣಕ್ಕಿಟ್ಟು ಬಾಲಕನ ರಕ್ಷಣೆಗೆ ಧಾವಿಸಿದ ವ್ಯಕ್ತಿ, ವಿಡಿಯೋ ವೈರಲ್
Viral Video
Edited By:

Updated on: Apr 20, 2025 | 2:07 PM

ಚೆನ್ನೈ, ಏಪ್ರಿಲ್ 20: ನಮ್ಮ ಸುತ್ತಮುತ್ತಲಿನಲ್ಲಿರುವ ನಡೆಯುವ ಕೆಲವು ಘಟನೆ (incident) ಗಳನ್ನು ನೋಡಿದಾಗ ಎಷ್ಟೋ ಸಲ ಮಾನವೀಯತೆಯು ಸತ್ತು ಹೋಗಿದೆ ಎಂದೆನಿಸುತ್ತದೆ. ಬೇರೆಯವರಿಗೆ ಕಷ್ಟ ಎಂದರೆ ಅವರಿಗೆ ಸಹಾಯ ಮಾಡುವುದು ಬಿಡಿ ಅವರ ಕಷ್ಟವನ್ನು ಕೇಳುವ ಗೋಜಿಗೆ ಹೋಗುವುದಿಲ್ಲ. ಕೆಲವರಂತೂ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ ನಮಗ್ಯಾಕೆ ಎಂದು ನೋಡಿಯೂ ನೋಡದಂತೆ ರಕ್ಷಿಸುವ ಹೋಗುತ್ತಾರೆ. ಇಂತಹ ಮಾನವೀಯತೆ ಇಲ್ಲದ ವ್ಯಕ್ತಿಗಳ ನಡುವೆ ಸಹಾಯಕ್ಕೆ ನಿಂತ ಅದೆಷ್ಟೋ ಸಹೃದಯಿ ವ್ಯಕ್ತಿಗಳಿಗೆ ಸಂಬಂಧ ಪಟ್ಟ ವಿಡಿಯೋ ಗಳು ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿದ್ದ ವಿದ್ಯುತ್ ತಂತಿ (Electric wire) ಸ್ಪರ್ಶಿಸಿ ಬಾಲಕನು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬೈಕ್ ನಲ್ಲಿ ಅದೇ ಮಾರ್ಗವಾಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ಬಾಲಕನನ್ನು ರಕ್ಷಿಸಿದ್ದಾರೆ. ಈ ಘಟನೆಯು ಚೆನ್ನೈ (chennai) ನ ಅರುಂಬಕ್ಕಂ ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video mems ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ರಸ್ತೆ ತುಂಬೆಲ್ಲಾ ಮಳೆ ನೀರು ನಿಂತಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ಶಾಲೆ ಮುಗಿಸಿ ಮನೆಗೆ ಹೋಗುತ್ತಿರುವ ಬಾಲಕನಿಗೆ ರಸ್ತೆಯಲ್ಲಿ ನಿಂತ ಮಳೆನೀರಿನಲ್ಲಿ ವಿದ್ಯುತ್ ತಂತಿ ಇರುವುದು ಗೊತ್ತಿರಲಿಲ್ಲ. ಇದರ ಅರಿವಿಲ್ಲದೇ ಈ ಬಾಲಕನು ಮಳೆನೀರಿನಲ್ಲಿ ನಡೆದುಕೊಂಡು ಹೋಗಿದ್ದು ವಿದ್ಯುತ್ ಸ್ಪರ್ಶಿಸಿ ನೆಲಕ್ಕೆ ಬಿದ್ದಿದ್ದಾನೆ. ಆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಯೊಬ್ಬನು ಹಿಂದೆ ಮುಂದೆ ನೋಡದೆ ಬಾಲಕನು ಕೈ ಹಿಡಿದು ಎಳೆದಿದ್ದಾನೆ. ಆ ಬಳಿಕ ಎತ್ತಿಕೊಂಡು ನೆಲೆಯ ಮೇಲೆ ಮಲಗಿಸಿದ್ದು ಅಲ್ಲೇ ಇದ್ದ ಸ್ಥಳೀಯರು ಅಲ್ಲಿಗೆ ಧಾವಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ :Viral : ಏನ್ ಎನರ್ಜಿ ಗುರು, ಶಾಲಾಕಾರ್ಯಕ್ರಮದಲ್ಲಿ ಪುಟಾಣಿ ಬಾಲಕನ ಎನರ್ಜಿಟಿಕ್ ಡಾನ್ಸ್ ಪರ್ಫಾರ್ಮೆನ್ಸ್, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಆ ತಕ್ಷಣವೇ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,, ತದನಂತರದಲ್ಲಿ ಬಾಲಕನ ತಂದೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನು ಎರಡು ದಿನಗಳ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾನೆ. ಈ ಹುಡುಗನು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಲಕನ ಪ್ರಾಣ ಉಳಿಸಿದ ವ್ಯಕ್ತಿಯನ್ನು ಕಣ್ಣನ್ ಎಂದು ಗುರುತಿಸಲಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರು, ‘ಈ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಇಂತಹ ವ್ಯಕ್ತಿಗಳು ಇರುವುದರಿಂದ ಕಾಲಕಾಲಕ್ಕೆ ಮಳೆ ಬೆಳೆ ಚೆನ್ನಾಗಿ ಆಗುತ್ತಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈ ವ್ಯಕ್ತಿಯು ತನ್ನ ಪ್ರಾಣವನ್ನು ಪಣಕಿಟ್ಟು ಬಾಲಕನ ಜೀವ ಉಳಿಸಿದ್ದಾನೆ. ಈತನಿಗೆ ನನ್ನದೊಂದು ಸೆಲ್ಯೂಟ್’ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ