Viral : ಏನ್ ಎನರ್ಜಿ ಗುರು, ಶಾಲಾಕಾರ್ಯಕ್ರಮದಲ್ಲಿ ಪುಟಾಣಿ ಬಾಲಕನ ಎನರ್ಜಿಟಿಕ್ ಡಾನ್ಸ್ ಪರ್ಫಾರ್ಮೆನ್ಸ್, ವಿಡಿಯೋ ವೈರಲ್
ಈಗಿನ ಕಾಲದ ಮಕ್ಕಳು ಯಾವುದರಲ್ಲಿ ಕಡಿಮೆಯಿದ್ದಾರೆ ಹೇಳಿ ಅದರಲ್ಲಿ ಡಾನ್ಸ್ ನಲ್ಲಿ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ. ಮಕ್ಕಳ ಎನರ್ಜಿಟಿಕ್ ಡಾನ್ಸ್ ಗೆ ಸಂಬಂಧಿಸಿದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಶಾಲಾ ಕಾರ್ಯಕ್ರಮವೊಂದರಲ್ಲಿ ಪುಟ್ಟ ಹುಡುಗನೊಬ್ಬ ಎನರ್ಜಿಟಿಕ್ ಆಗಿ ಸ್ಟೆಪ್ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಈಗಿನ ಕಾಲದ ಪುಟಾಣಿಗಳಿಗೆ ಏನು ಗೊತ್ತಿಲ್ಲ ಹೇಳಿ. ಮಕ್ಕಳಂತೂ (childrens) ಎಲ್ಲರದರಲ್ಲಿಯೂ ಮುಂದು. ದೊಡ್ಡವರಿಗೆ ಗೊತ್ತಿರದ ಎಷ್ಟೋ ವಿಷಯಗಳು ಈ ಪುಟಾಣಿಗಳಿಗೆ ತಿಳಿದಿರುತ್ತದೆ. ಈ ಡಾನ್ಸ್ (dance) ವಿಷಯದಲ್ಲಿಯೂ ಕೇಳುವುದೇ ಬೇಡ. ಹಾಡಿಗೆ ತಕ್ಕಂತೆ ಸ್ಟೆಪ್ ಹಾಕುವ ಎಕ್ಸ್ಪ್ರೆಶನ್ (expression) ಕೊಡುವ ಪುಟ್ಟ ಮಕ್ಕಳ ನೃತ್ಯದ ದೃಶ್ಯವನ್ನು ನೋಡುವಾಗ ಆಗುವ ಖುಷಿಯೇ ಬೇರೆ. ಅದರಲ್ಲೂ ಕೆಲವು ಮಕ್ಕಳಂತು ಅದೆಷ್ಟು ಅದ್ಭುತವಾಗಿ ನೃತ್ಯ ಮಾಡುತ್ತಾರೆ ಎಂದರೆ ಹೇಳುವುದೇ ಪದಗಳೇ ಸಾಲುವುದಿಲ್ಲ. ಇದೀಗ ವೈರಲ್ (viral) ಆಗಿರುವ ವಿಡಿಯೋದಲ್ಲಿ ಶಾಲಾಕಾರ್ಯಕ್ರಮ ವೊಂದರಲ್ಲಿ ಪುಟ್ಟ ಬಾಲಕನೊಬ್ಬನು ತನ್ನ ಸಹಪಾಠಿಗಳು ನಡುವಲ್ಲಿ ಹೈಲೈಟ್ ಆಗಿದ್ದಾನೆ. ಹೌದು ಈತನ ಎನರ್ಜಿಟಿಕ್ ಡಾನ್ಸ್ ನೋಡುಗರ ಗಮನ ಸೆಳೆದಿದೆ.
Keerthana ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಪುಟ್ಟ ಬಾಲಕನ ಸಹೋದರಿ ಕೀತು ಹಂಚಿಕೊಂಡ ವಿಡಿಯೋದಲ್ಲಿ ಶಾಲೆಯೊಂದರ ವೇದಿಕೆಯಲ್ಲಿ ಎಲ್ಲಾ ಮಕ್ಕಳು ಕೂಡ ಡಾನ್ಸ್ ಮಾಡುತ್ತಿದ್ದಾರೆ. ಆದರೆ ಸಹಪಾಠಿಗಳ ನಡುವೆ ನೃತ್ಯ ಮಾಡುತ್ತಿದ್ದ ಪುಟ್ಟ ಹುಡುಗನು ಸಖತ್ ಎನರರ್ಜಿಟಿಕ್ ಆಗಿ ಸ್ಟೆಪ್ ಹಾಕಿದ್ದಾರೆ. ಉಳಿದ ಮಕ್ಕಳ ಡಾನ್ಸ್ ಈತನ ಎನರ್ಜಿಟಿಕ್ ಪ್ರದರ್ಶನದ ಮುಂದೆ ಸಪ್ಪೆ ಎನ್ನುವಂತಾಗಿದೆ. ಈ ಪುಟ್ಟ ಬಾಲಕನು ಹಾಡಿಗೆ ತಕ್ಕಂತೆ ಸ್ಟೆಪ್ ಹಾಕಿದ್ದು ಎಲ್ಲರ ಗಮನ ಈತನ ಮೇಲೆ ಸೆಳೆದಿರುವುದು ಕಾಣಬಹುದು.
ಇದನ್ನೂ ಓದಿ : ಭಾರತೀಯರು ಡೋಲೋ 650ಯನ್ನು ಕ್ಯಾಡ್ಬರಿ ಜೆಮ್ಸ್ ನಂತೆ ಸೇವಿಸುತ್ತಾರೆ! ವೈದ್ಯರ ಪೋಸ್ಟ್ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋವು ಇಪ್ಪತ್ತಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ, ‘ನೃತ್ಯವು ಈ ಬಾಲಕನ ರಕ್ತದಲ್ಲಿಯೇ ಬಂದಿರಬೇಕು’ ಎಂದಿದ್ದಾರೆ. ಮತ್ತೊಬ್ಬರು, ‘ಈತನ ಡಾನ್ಸನ್ನು ಯಾರಿಗೂ ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ಪ್ರತಿ ಸ್ಟೆಪ್ ನಲ್ಲಿ ಈ ಪುಟ್ಟ ಬಾಲಕನ ಎನರ್ಜಿ ಎಷ್ಟಿದೆ’ ಎಂದು ತೋರಿಸುತ್ತಿದೆ ಎಂದಿದ್ದಾರೆ. ಮತ್ತೊರ್ವ ಬಳಕೆದಾರರು, ‘ವೇದಿಕೆಯ ಮೇಲೆ ಈ ಪುಟಾಣಿ ಡಾನ್ಸ್ ಬೆಂಕಿ ಗುರು’ ಎಂದು ನೃತ್ಯವನ್ನು ಹಾಡಿ ಹೊಗಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ