Viral Video : ಈ ಮಧ್ಯಾಹ್ನದ ಹೊತ್ತಿನಲ್ಲಿ ತೂಕಡಿಸುತ್ತ ಕೆಲಸ ಮಾಡುತ್ತಿದ್ದಲ್ಲಿ ಈ ವಿಡಿಯೋ ನಿಮ್ಮನ್ನು ಉಲ್ಲಸಿತರನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ. ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ, ಅಕ್ಕ, ತಂಗಿ, ತಮ್ಮ, ಅಣ್ಣನೊಂದಿಗೆ ಜಗಳಾಡುವಾಗ ಕೊನೆಯ ಹೊಡೆತ ನಿಮ್ಮದೇ ಆಗಬೇಕೆಂದು ಅದೆಷ್ಟು ಹಠದಿಂದ ಸಾಧಿಸಲು ಹೋಗುತ್ತೀರಿ. ಆದರೆ, ಆಕಡೆಯಿಂದ ಅವರೂ ಹಾಗೆಯೇ ಯೋಚಿದಾಗ ಆಗುವುದೇನು? ಕಾಳಗವೇ! ಇಲ್ಲಿ ಸಣ್ಣಗೆ ಕೋಳಿ ಮತ್ತು ಕೋತಿಯ ನಡುವೆ ಜಗಳ ಶುರುವಾಗುತ್ತದೆ. ಈ ಜಗಳ ಹೇಗೆ ಯುದ್ಧಕ್ಕೆ ತಿರಗುತ್ತದೆ ಎಂಬುದನ್ನು ನೋಡಿ.
ಎನಿಮಲ್ಸ್ ಇನ್ ದಿ ನೇಚರ್ ಟುಡೇ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ 1.60,000 ಕ್ಕಿಂತಲೂ ಹೆಚ್ಚು ವೀಕ್ಷಕರನ್ನು ಸೆಳೆದಿದೆ. ಇವುಗಳ ಜಗಳ ನಡೆಯುತ್ತಿರುವುದು ಒಂದು ಬೃಹತ್ತಾದ ದೇವರ ಮೂರ್ತಿಯ ಎದುರು. ಈ ಮೂರ್ತಿಯ ವಿನ್ಯಾಸ ಗಮನಿಸಿದರೆ ಇಲ್ಲೇ ಭಾರತದಲ್ಲಿಯೇ ಈ ‘ಮಹಾಕಾಳಗ’ ನಡೆದಿರಬಹುದು.
ದೇಹ ಸಣ್ಣದೇ ಇರಬಹುದು. ಶಕ್ತಿಯೂ ಎದುರಾಳಿಗಿಂತ ಕಡಿಮೆಯೇ ಇರಬಹುದು. ಆದರೆ ಕೋಪ!? ನೋಡಿ ಹೇಗೆ ಪಟ್ಟುಬಿಡದೆ ಹೊಡೆದಾಡಿದೆ ಈ ಕೋಳಿ. ಉಫ್ ಎಂದರೆ ಹಾರಿಹೋಗುತ್ತಿ, ನನ್ನ ಕಪಾಳಿಗೇ ಹೊಡೆಯುತ್ತೀಯಾ? ಎಂದು ಕೋತಿಯೂ ಕೋಳಿಗೆ ಹೊಡೆದೇ ಹೊಡೆದಿದೆ, ಕೋಳಿಯ ‘ದೊಡ್ಡ’ ಕಪಾಳಿಗೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ