Viral Video: ಮೊಸಳೆಗಳು ತುಂಬಿರುವ ನದಿಯಲ್ಲಿ ಮುಳುಗುತ್ತಿದ್ದ ಬಾಲಕ, ಮುಂದೇನಾಯಿತು ನೋಡಿ ವಿಡಿಯೋ

Rescue : ತುಂಬಿ ಹರಿಯುವ ನದಿ. ಸುತ್ತುವರಿದ ಮೊಸಳೆಗಳು. ಇದು ಸಿನೆಮಾ ದೃಶ್ಯದಂತೆ ಇದೆ ಎಂದಿದ್ದಾರೆ ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್.

Viral Video: ಮೊಸಳೆಗಳು ತುಂಬಿರುವ ನದಿಯಲ್ಲಿ ಮುಳುಗುತ್ತಿದ್ದ ಬಾಲಕ, ಮುಂದೇನಾಯಿತು ನೋಡಿ ವಿಡಿಯೋ
ಮುಳುಗೇಳುತ್ತಿರುವ ಬಾಲಕ
Edited By:

Updated on: Aug 27, 2022 | 2:49 PM

Viral Video : ಮೊಸಳೆಗಳು ತುಂಬಿರುವ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ಎಸ್‌ಡಿಆರ್‌ಎಫ್ ತಂಡವು  ಪ್ರಾಣಾಪಾಯದಿಂದ ಕಾಪಾಡಿದ ವಿಡಿಯೋ ವೈರಲ್ ಆಗಿದೆ. ನೋಡಿದ ಯಾರಿಗೂ ಕೈಕಾಲು ಥಣ್ಣಗಾಗುವಂಥ ವಿಡಿಯೋ ಇದು. ತುಂಬಿ ಹರಿಯುತ್ತಿರುವ ನದಿ. ಅವನ ಸುತ್ತಲೂ ಮೊಸಳೆಗಳು ಸುತ್ತುವರಿದಿವೆ. ಭಯದಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಬಾಲಕ. ಅವನನ್ನು ರಕ್ಷಿಸಲು ರಕ್ಷಣಾ ತಂಡದ ದೋಣಿ ಬರುತ್ತದೆ. ಸದ್ಯ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವು ಮೊಸಳೆಗಳಿಗೆ ಬಲಿಯಾಗುತ್ತಿದ್ದ ಬಾಲಕನನ್ನು ತುರ್ತಾಗಿ ದೋಣಿಗೆ ಎಳೆದು ರಕ್ಷಿಸಿದ್ದಾರೆ.  ತ್ವರಿತವಾಗಿ ದೋಣಿಗೆ ಎಳೆದುಕೊಂಡು ರಕ್ಷಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಇದು ಚಂಬಲ್​ ನದಿ ಎಂದು ಕೆಲವರು ಹೇಳುತ್ತಿದ್ದಾರಾದರೂ ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದಿದ್ದಾರೆ ಈ ವಿಡಿಯೋ ಹಂಚಿಕೊಂಡ ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್.

‘ಇದು ಚಲನಚಿತ್ರದ ದೃಶ್ಯದಂತೆಯ ಇದೆ ಈ ನೈಜ ದೃಶ್ಯ. ಈ ಮಗು ಚಂಬಲ್ ನದಿಯಲ್ಲಿ ಮುಳುಗುತ್ತಿದ್ಧಾಗ, ಮೊಸಳೆಗಳು ಸುತ್ತುವರಿದಾಗ ರಕ್ಷಣಾ ತಂಡ ಸರಿಯಾದ ಸಮಯಕ್ಕೆ ತಲುಪಿ ಬಾಲಕನನ್ನು ರಕ್ಷಿಸಿವೆ. ಸೆಲ್ಯೂಟ್​!’ ಎಂದಿದ್ದಾರೆ ಅಧಿಕಾರಿ ಸಚಿನ್.

ನೆಟ್ಟಿಗರು ಈ ಸಾಹಸ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಮತ್ತಷ್ಟು ವೈರಲ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:33 pm, Sat, 27 August 22