
ಆಭರಣ (gold) ವೆಂದರೆ ಮಹಿಳೆಯರಿಗೆ ಅಚ್ಚು ಮೆಚ್ಚು. ಆದರೆ ಇದೀಗ ಚಿನ್ನದ ಬೆಲೆಯೂ ಗಗನಕ್ಕೇರುತ್ತಿದ್ದು ಖರೀದಿ ಮಾಡುವುದು ಬಿಡಿ, ತಮ್ಮಲ್ಲಿರುವ ಅಷ್ಟೋ ಇಷ್ಟೋ ಇರುವ ಆಭರಣಗಳನ್ನು ನೋಡಿಯೇ ಖುಷಿ ಪಡುವ ಕಾಲಕ್ಕೇ ಬಂದು ತಲುಪಿದ್ದೇವೆ. ಕಷ್ಟ ಕಾಲಕ್ಕೆ ಉಪಯೋಗಕ್ಕೇ ಬರುವ ಈ ಒಡವೆಗಳನ್ನು ಬ್ಯಾಂಕ್ ನಲ್ಲಿ ಗಿರವಿ ಹಣವನ್ನು ಪಡೆದುಕೊಳ್ಳುತ್ತೇವೆ. ಆದರೆ ಚೀನಾದಲ್ಲಿ ಬ್ಯಾಂಕ್ ಗೆಂದು ಅಲೆಯಬೇಕಿಲ್ಲ. ಬದಲಾಗಿ ಚಿನ್ನವನ್ನು ಈ ಮೆಷಿನ್ ನಲ್ಲಿ ಇಟ್ಟರೆ ಕ್ಷಣಾರ್ಧದಲ್ಲಿ ಹಣವು ನಿಮ್ಮ ಕೈ ಸೇರುತ್ತದೆ. ಚೀನಾದ ಶಾಂಘೈ (Shanghai of China) ನಲ್ಲಿ ಈ ಗೋಲ್ಡ್ ಎಟಿಎಂ ಮೆಷಿನ್ (gold atm mechine) ಬಂದಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದೆ.
Tansu Yegen ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಎಟಿಎಂ ನಂತೆಯೇ ಇರುವ ಯಂತ್ರವನ್ನು ಕಾಣಬಹುದು. ಮಹಿಳೆಯೊಬ್ಬರು ಈ ಮೆಷಿನ್ ಯೊಳಗೆ ತಮ್ಮ ಬಳಿಯಿದ್ದ ಚಿನ್ನವನ್ನು ಇಟ್ಟು ಹಣ ಪಡೆದುಕೊಳ್ಳುವುದನ್ನು ಕಾಣಬಹುದು. ಮಹಿಳೆಯೊಬ್ಬರು ಮೆಷಿನ್ ಯೊಳಗೆ ಚಿನ್ನವನ್ನು ಇಟ್ಟಿದ್ದು, ಆ ಚಿನ್ನದ ತೂಕ ಎಷ್ಟಿದೆ ಎಂದು ಅಳೆದಿದ್ದು, ಅದನ್ನು ಸ್ಕ್ರೀನ್ ಮೇಲೆ ಕಾಣಿಸುತ್ತಿದೆ. ಆ ಬಳಿಕ ಚಿನ್ನವು ಎಷ್ಟು ಬೆಲೆ ಬಾಳುತ್ತದೆಯೋ ಅಷ್ಟೇ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿರುವುದನ್ನು ನೀವಿಲ್ಲಿ ನೋಡಬಹುದು.
A gold ATM in Shanghai, China
It melts the gold and transfers the amount corresponding to its weight to your bank account.
— Tansu Yegen (@TansuYegen) April 19, 2025
>
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಗಾಗಲೇ 1.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಚಿನ್ನ ಮೆಷಿನ್ ಒಳಗೆ ಇಟ್ಟು ಹಣ ಪಡೆಯುವ ಈ ಹೊಸ ಟೆಕ್ನಾಲಜಿಗೆ ಎಲ್ಲರೂ ಫಿದಾ ಆಗಿದ್ದಾರೆ. ಬಳಕೆದಾರರೊಬ್ಬರು, ‘ಇದು ಬೆಸ್ಟ್ ಆವಿಷ್ಕಾರಗಳಲ್ಲಿ ಒಂದು. ಇದರಿಂದ ವ್ಯಕ್ತಿಯ ಸಮಯವು ಉಳಿಯುತ್ತದೆ, ತುರ್ತು ಪರಿಸ್ಥಿತಿಯಲ್ಲಿ ಹಣವು ಕೈ ಸೇರುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ : ಇರುವೆಗಳು ದಿನಕ್ಕೆ ಎಷ್ಟು ಗಂಟೆಗಳ ಕಾಲ ನಿದ್ರಿಸುತ್ತವೆ? ಇಲ್ಲಿದೆ ಮಾಹಿತಿ
ಮತ್ತೊಬ್ಬ ಬಳಕೆದಾರರು, ‘ನಿಜಕ್ಕೂ ಅದ್ಭುತ, ನಿಮ್ಮ ಚಿನ್ನವನ್ನು ಕರಗಿಸಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಚಿನ್ನದ ಎಟಿಎಂ. ಚೀನಾವು ತಂತ್ರಜ್ಞಾನದಲ್ಲಿ ಎಷ್ಟು ವೇಗ ಹಾಗೂ ಶಕ್ತಿಶಾಲಿಯಾಗಿದೆ ಎಂದು ಇದರಲ್ಲಿ ತಿಳಿಯುತ್ತದೆ. ಹಳೆಯ ಮೌಲ್ಯಯುತ ಸಂಪತ್ತನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆರೆಸಲು ಹೊಸ ಮಾರ್ಗಗಳನ್ನು ಕಂಡುಕೊಂಡಿರುವುದು ಅತ್ಯದ್ಭುತವಾಗಿದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ವಾವ್, ಭಾರತದಲ್ಲಿ ಶೀಘ್ರದಲ್ಲೇ ಚಿನ್ನ ಕರಗಿಸಿ ಹಣ ನೀಡುವ ಚಿನ್ನದ ಎಟಿಎಂ ನೋಡುತ್ತೇವೆ ಎಂದು ಭಾವಿಸುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ