ಮನುಷ್ಯರು ಮನುಷ್ಯರನ್ನು, ಪ್ರಾಣಿಗಳನ್ನು ಅಪಹರಣ ಮಾಡುವಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಇಂತಹ ಅಪಹರಣದ ಸಾಕಷ್ಟು ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಂತ್ರಜ್ಞಾನದ ಈ ಯುಗದಲ್ಲಿ ಒಂದು ರೋಬೋಟ್ ಮತ್ತೊಂದು ರೋಬೋಟ್ ಅನ್ನು ಕಿಡ್ನಾಪ್ ಮಾಡಿದೆ. ಹೌದು ಪುಟಾಣಿ ಎಐ ರೋಬೋಟ್ ಒಂದು ಶೋರೂಮ್‌ಗೆ ನುಗ್ಗಿ ಇಲ್ಲಿ ನಿಮಗೆ ರಜೆ ಸಿಗಲ್ಲ, ನೀವು ನನ್ನೊಂದಿಗೆ ಮನೆಗೆ ಬನ್ನಿ ಎಂದು ಮನುಷ್ಯರಂತೆ ಸಂಭಾಷಣೆ ನಡೆಸಿ 12 ದೈತ್ಯ ರೋಬೋಟ್‌ಗಳನ್ನು ಅಪಹರಣ ಮಾಡಿದೆ. ಈ ಅಪಹರಣದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವಿಚಿತ್ರ ಘಟನೆ ನಮ್ಮ ನೆರೆ ರಾಷ್ಟ್ರ ಚೀನಾದಲ್ಲಿ ನಡೆದಿದ್ದು, ರಾತ್ರಿ ವೇಳೆ ಶೋ ರೂಮ್ ಒಂದಕ್ಕೆ ನುಗ್ಗಿದ AI ರೋಬೋಟ್ ಅಲ್ಲಿದ್ದ 12 ರೋಬೋಟ್‌ಗಳನ್ನು ಕಿಡ್ನಾಪ್ ಮಾಡಿದೆ. ಈ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಕುತೂಹಲಕಾರಿ ಘಟನೆಯು ಓದಲು ಮತ್ತು ಕೇಳಲು ತಮಾಷೆಯಾಗಿ ಕಾಣಿಸಿದರೂ ಇದು AI ಯ ದುರುಪಯೋಗದ ಬಗ್ಗೆ ಕಾಳಜಿ ಮತ್ತು ಚರ್ಚೆಯನ್ನು ಹುಟ್ಟಿಹಾಕಿದೆ. ವರದಿಗಳ ಪ್ರಕಾರ, ಹ್ಯಾಂಗ್‌ಝೌ ಕಂಪೆನಿಯ ಇರ್ಬೈ ಹೆಸರಿನ ಎಐ ಚಾಲಿತ ರೋಬೋಟ್ ಶಾಂಘೈ ರೋಬೋಟಿಕ್ಸ್ ಕಂಪನಿಯ ಶೋರೂಮ್‌ಗೆ ಬಂದು ಅಲ್ಲಿದ್ದ 12 ದೊಡ್ಡ ರೋಬೋಟ್‌ಗಳೊಂದಿಗೆ ಮಾನವರಂತೆ ಸಂವಹನ ನಡೆಸಿ ಅವುಗಳನ್ನು ಅಪಹರಿಸಿದೆ. ಇರ್ಬೈ ಜೊತೆ ಮಾತನಾಡಿದ ಇತರೆ ರೋಬೋಟ್‌ಗಳು ನಮಗೆ ರಜೆ ಇಲ್ಲ ಹಾಗಾಗಿ ನಮಗೆ ಮನೆಗೆ ಕೂಡಾ ಹೋಗಲು ಆಗುತ್ತಿಲ್ಲ ಎಂದು ಹೇಳಿದಾಗ, ಹಾಗಾದ್ರೆ ನೀವು ನನ್ನೊಂದಿಗೆ ಮನೆಗೆ ಬನ್ನಿ ಎಂದು ಮನವೊಲಿಸಿ ಅಲ್ಲಿದ್ದ 12 ರೋಬೋಟ್‌ಗಳನ್ನು ಅಪಹರಣ ಮಾಡಿದೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ರೋಬೋಟ್‌ಗಳ ನಡುವಿನ ಸಂಭಾಷಣೆಯೂ ರೆಕಾರ್ಡ್ ಆಗಿದೆ.
ಆರಂಭದಲ್ಲಿ ಇದೊಂದು ನಕಲಿ ವಿಡಿಯೋ ಎಂದು ಪರಿಗಣಿಸಲಾಗಿತ್ತು. ಆದರೆ ನಂತರ ಈ ಎರಡೂ ಕಂಪನಿಗಳು ಈ ಹೈಜಾಕ್ ಘಟನೆ ನಡೆದದ್ದು ನಿಜವೆಂದು ದೃಢಪಡಿಸಿದೆ. ಇರ್ಬೈ ರೋಬೋಟ್ ಇತರೆ ದೊಡ್ಡ ರೋಬೋಟ್‌ಗಳಲ್ಲಿನ ಭದ್ರತಾ ದುರ್ಬಲತೆಯನ್ನು ದುರ್ಬಳಕೆ ಮಾಡಿಕೊಂಡು, ಅವುಗಳ ಕ್ರಿಯೆಯ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು ಈ ಮೂಲಕ ಸಣ್ಣ ರೋಬೋಟ್ ದೊಡ್ಡ ರೋಬೋಟ್‌ಗಳನ್ನು ಅಪಹರಣ ಮಾಡಿದ್ದು ಎಂಬುದು ತಿಳಿದು ಬಂದಿದೆ. ಇದೀಗ ಈ ಘಟನೆ AI ವ್ಯವಸ್ಥೆಯ ಸುರಕ್ಷತೆ ಮತ್ತು ಸಂಭಾವ್ಯ ಅಪಾಯಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: ವಿಮಾನದ ರೆಕ್ಕೆಯ ಮೇಲೆ ಹಾವು ನೇತಾಡುತ್ತಿರುವ ವೈರಲ್ ವಿಡಿಯೋದ ಸತ್ಯಾಂಶ ಏನು?: ಇಲ್ಲಿದೆ ನೋಡಿ
LaikCumhuriyett ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಶೋರೂಮ್ ಒಂದಕ್ಕೆ ನುಗ್ಗಿದ್ದ ಪುಟಾಣಿ ರೋಬೋಟ್ ಅಲ್ಲಿದ್ದ ಇತರೆ 12 ದೈತ್ಯ ರೋಬೋಟ್‌ಗಳನ್ನು ಮನೆಗೆ ಬನ್ನಿ ಎಂದು ಮನವೊಲಿಸಿ ಕಿಡ್ನಾಪ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ಅಪಹರಣದ ಶಾಕಿಂಗ್ ದೃಶ್ಯವನ್ನು ಕಂಡು ನೋಡುಗರು ಫುಲ್ ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ