Viral Video: ಕಂಡೀರಾ ಚೀನಾದ ಈ ಬಾಲಬಾಣಸಿಗನ; ಅಚ್ಚರಿಗೊಂಡ ನೆಟ್ಟಿಗರು

China: “ಅವನು ಹುಟ್ಟಿದ ಕೆಲವು ತಿಂಗಳುಗಳಲ್ಲೇ ಅಡಿಗೆಯ ಬಗ್ಗೆ ಆಸಕ್ತಿ ತೋರಿಸತೊಡಗಿದ. ತಾನು ಟಿವಿಯಲ್ಲಿ ನೋಡುತ್ತಿದ್ದ ಅಡಿಗೆ ಕಾರ್ಯಕ್ರಮಗಳ ಬಾಣಸಿಗರನ್ನು ನೋಡಿ ಅನುಕರಿಸಿ ಈ ರೀತಿಯ ತಂತ್ರಗಳನ್ನು ಕಲಿಯತೊಡಗಿದ್ದ,” ಎಂದು ಈ ಬಾಲಕನ ತಾಯಿ ಹೇಳಿದ್ದಾಳೆ. ಅಂತೂ ಈತನಿಗೆ ಬಲುಬೇಗ ರೆಸ್ಟೋರೆಂಟ್​ನಲ್ಲಿ ಉದ್ಯೋಗ ಸಿಗುವುದು ಎಂದಿದ್ದಾರೆ ನೆಟ್ಟಿಗರು.

Viral Video: ಕಂಡೀರಾ ಚೀನಾದ ಈ ಬಾಲಬಾಣಸಿಗನ; ಅಚ್ಚರಿಗೊಂಡ ನೆಟ್ಟಿಗರು
ಚೀನಾದ ಪುಟ್ಟ ಬಾಲಕ ಅಡುಗೆಯಲ್ಲಿ ನಿರತನಾಗಿರುವುದು

Updated on: Sep 23, 2023 | 12:42 PM

Cooking: ಅಡಿಗೆ ಎನ್ನುವುದು ಅನಿವಾರ್ಯ. ಊಟವಿದ್ದರೆ ಮುಂದಿನದೆಲ್ಲ. ಹಾಗೆಯೇ ಅಡುಗೆ (Cooking) ಎನ್ನುವುದು ಕಲೆ, ಕೌಶಲ ಕೂಡ. ಯಾರು ಬೇಕಾದರೂ ಆಸಕ್ತಿಯಿಂದ ಇದನ್ನು ಕಲಿಯಬಹುದು. ಆದರೆ  ರಸ್ತೆಯಲ್ಲಿ ಆಟವಾಡಿಕೊಂಡಿರುವ ಪುಟ್ಟ ಬಾಲಕನೊಬ್ಬ ವೃತ್ತಿಪರ ಬಾಣಸಿಗನಂತೆ ಸೌಟು ಹಿಡಿದು ನಿಂತರೆ? ಬರೀ ನಿಲ್ಲುವುದಲ್ಲ ಮಗ್ನನಾಗಿ ಅಡುಗೆಯಲ್ಲಿ ತೊಡಗಿಕೊಂಡರೆ? ಹೌದು, ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅತ್ಯಂತ ಸಹಜವೆಂಬಂತೆ ನುರಿತ ಬಾಣಸಿಗನಂತೆ ಕಡಾಯಿ ಸೌಟು ಬಳಸುವ ಈ ಬಾಲ ಬಾಣಸಿಗನ ವರಸೆ ನಿಮ್ಮನ್ನು ಅಚ್ಚರಿಗೆ ತಳ್ಳುತ್ತದೆ.

ಇದನ್ನೂ ಓದಿ : Viral Video: ಮುಂಬೈ ಲೋಕಲ್​ ರೈಲಿನಲ್ಲಿ ಬೆಡಗಿಯ ಬೆಲ್ಲಿ ಡ್ಯಾನ್ಸ್​; ನೆಟ್ಟಿಗರ ಆಕ್ರೋಶ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಿಂದಿನ ಕಾಲದಲ್ಲಿ, ಎಂದರೆ ಇಂಟರ್​ನೆಟ್​ ಸರ್ವವ್ಯಾಪಿಯಾಗುವ ಮುಂಚಿನ ಕರಾಳ ಯುಗದಲ್ಲಿ, ಯಾವುದೇ ವಿದ್ಯೆಯನ್ನು ಕಲಿಯಬೇಕೆಂದರೂ ಗುರುವನ್ನು ಹುಡುಕಿಕೊಂಡು ಹೋಗಬೇಕಿತ್ತು. ಗುರುವಿನ ಗುಲಾಮನಾಗಿ ಅವರು ಹೇಳಿದ ಕೆಲಸಗಳನ್ನೆಲ್ಲ ಮಾಡಿ, ಚಾಚೂತಪ್ಪಿದರೆ ಬೈಸಿಕೊಂಡು ಶಿಷ್ಯವೃತ್ತಿ ನೀಗಿಸಿಕೊಳ್ಳಬೇಕಿತ್ತು. ಆದರೆ ಈಗ? ಅಂತರ್ಜಾಲವೇ ವಿಶ್ವಗುರು. ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ರೀಲ್‌ಗಳನ್ನು ನೋಡುತ್ತಲೇ ಮನೆಯಲ್ಲೇ ಬ್ರೆಡ್ ತಯಾರಿಸುವುದು ಹೊಸಹೊಸ ರೆಸಿಪಿ ಕಲಿಯುವುದು ಸಾಮಾನ್ಯ.

ಈ ಬಾಲಬಾಣಸಿಗನನ್ನು ನೋಡಿ

ಹಾಗಿದ್ದೂ ಇಲ್ಲೊಂದು ವಿಶೇಷ ವಿಡಿಯೋ ಇದೆ. ಮೂರು ವರ್ಷದ ಚೈನೀಸ್ ಹುಡುಗನೊಬ್ಬ ಹಾಡು ಗುನುಗುತ್ತ ಕುಣಿಯುತ್ತ ಎಲ್ಲಿಲ್ಲದ ಚಳಕ ತೋರುತ್ತ ಅಡಿಗೆ ಮಾಡುತ್ತಿರುವುದು, ಅಥವಾ ಅಡಿಗೆ ಮಾಡುತ್ತಿರುವಂತೆ ನಟಿಸುತ್ತಿರುವುದು. ದೊಡ್ಡ ಕಡಾಯಿ (wok) ಒಂದರಲ್ಲಿ ಹೆಚ್ಚಿದ ತರಕಾರಿ ಹಾಕಿ ಅವನ್ನು ಸೌಟಿನಿಂದ ಆಡಿಸುತ್ತ, ಕಡಾಯಿ ಎತ್ತಿ ಹಾರಿಸುತ್ತ, ಅಷ್ಟೇ ಏಕೆ ತನ್ನ ಅಡಿಗೆಯ ಭರದಲ್ಲಿ ಕಡಾಯಿಯನ್ನೇ ಎತ್ತಿ ತನ್ನ ಮೈಸುತ್ತ ಪ್ರದಕ್ಷಿಣೆ ಹಾಕಿಸಿ… ಒಟ್ಟಾರೆ ಈ ಹುಡುಗ ಅಡಿಗೆ ಮಾಡುವ ರೀತಿಯೇ ರುಚಿಕಟ್ಟಾಗಿದೆ. ಇದನ್ನು ನೋಡಿದ ನೆಟ್ಟಿಗರು, “ಬಾಸ್!”, “ಲಿಟಲ್ ಶೆಫ್” “ಅದಮ್ಯ ಪ್ರತಿಭೆ ಮತ್ತು ತೀವ್ರತೆ” ಎಂದೆಲ್ಲ ಉದ್ಗರಿಸಿದಾರೆ.

ಇದನ್ನೂ ಓದಿ : Viral Video: ವೆಡ್ಡಿಂಗ್ ಕೇಕ್​ನಲ್ಲಿ ಪುಟ್ಟನಾಯಿ; ವರನನ್ನು ಅಚ್ಚರಿಗೊಳಿಸಿದ ವಧು

“ಅವನು ಹುಟ್ಟಿದ ಕೆಲವು ತಿಂಗಳುಗಳಲ್ಲೇ ಅಡಿಗೆಯ ಬಗ್ಗೆ ಆಸಕ್ತಿ ತೋರಿಸತೊಡಗಿದ. ತಾನು ಟಿವಿಯಲ್ಲಿ ನೋಡುತ್ತಿದ್ದ ಅಡಿಗೆ ಕಾರ್ಯಕ್ರಮಗಳ ಬಾಣಸಿಗರನ್ನು ನೋಡಿ ಅನುಕರಿಸಿ ಈ ರೀತಿಯ ತಂತ್ರಗಳನ್ನು ಕಲಿಯತೊಡಗಿದ್ದ,” ಎಂದು ಈ ಬಾಲಕನ ತಾಯಿ ಹೇಳಿದ್ದಾಳೆ. “ಇವನಿಗೆ ಬಲು ಬೇಗ ರೆಸ್ಟೋರೆಂಟುಗಳಿಂದ ಉದ್ಯೋಗಾವಕಾಶಗಳು ದಂಡಿಯಾಗಿ ದಕ್ಕಲಿವೆ,” ಎಂದು ಅನೇಕರು ಹಾರೈಸಿದ್ದಾರೆ. “ಇವನು ಅಡಿಗೆ ಸಲಕರಣೆಗಳನ್ನು ಆಡಿಸುವ ಕೌಶಲ ನೋಡಿ ನನಗೆ ಅಸೂಯೆಯಾಗುತ್ತಿದೆ,” ಎಂದೂ ಕೆಲವರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ