TikTok Star: ಕ್ರೇನ್​​ನಲ್ಲಿ ನಿಂತು ಲೈವ್​ ವಿಡಿಯೋ ಮಾಡಲು ಹೋಗಿ ದುರಂತ ಅಂತ್ಯ ಕಂಡ ಟಿಕ್​ಟಾಕ್ ಸ್ಟಾರ್​; ಭಯಾನಕ ವಿಡಿಯೋ ವೈರಲ್​

| Updated By: Lakshmi Hegde

Updated on: Jul 27, 2021 | 6:27 PM

Crane Operator: ವೃತ್ತಿಯಲ್ಲಿ ಕ್ರೇನ್​ ಚಾಲಕಿಯಾಗಿರುವ ಕ್ಸಿಯಾವೋ ಅವರಿಗೆ ಇನ್ನೂ 23ವರ್ಷ. ಇಬ್ಬರು ಮಕ್ಕಳ ತಾಯಿಯೂ ಹೌದು. ಪ್ರತಿ ದಿನ ಒಂದಲ್ಲ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದರು.

TikTok Star: ಕ್ರೇನ್​​ನಲ್ಲಿ ನಿಂತು ಲೈವ್​ ವಿಡಿಯೋ ಮಾಡಲು ಹೋಗಿ ದುರಂತ ಅಂತ್ಯ ಕಂಡ ಟಿಕ್​ಟಾಕ್ ಸ್ಟಾರ್​; ಭಯಾನಕ ವಿಡಿಯೋ ವೈರಲ್​
ಕ್ರೇನ್​ನಿಂದ ಬಿದ್ದು ಸಾವನ್ನಪ್ಪಿದ ಟಿಕ್​ಟಾಕ್​ ಸ್ಟಾರ್​
Follow us on

ಸೆಲ್ಫೀ ತೆಗೆದುಕೊಳ್ಳಲು ಹೋಗಿ ಅವಘಡ ಮಾಡಿಕೊಂಡು ಪ್ರಾಣಬಿಟ್ಟವರ ಬಗ್ಗೆ ಅದೆಷ್ಟೋ ಸುದ್ದಿಗಳನ್ನು ಓದಿದ್ದೇವೆ. ಹಾಗೇ, ಈಗ ಇಲ್ಲೊಬ್ಬಳು ಟಿಕ್​ಟಾಕ್​ ಸ್ಟಾರ್ (TikTok Star)​, ಲೈವ್​ ವಿಡಿಯೋ(Live Video)ವೊಂದನ್ನು ಮಾಡಲು ಹೋಗಿ ಕ್ರೇನ್​ನಿಂದ 160 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಅಂದಹಾಗೆ ಈ ದುರ್ಘಟನೆ ನಡೆದದ್ದು ಚೀನಾದಲ್ಲಿ. ಟಿಕ್​ಟಾಕ್​ ವಿಡಿಯೋಗಳ ಮೂಲಕವೇ ಖ್ಯಾತಳಾಗಿದ್ದ, ಟಿಕ್​ಟಾಕ್ ಸ್ಟಾರ್​ ಎನ್ನಿಸಿಕೊಂಡಿದ್ದ 23 ವರ್ಷ ಕ್ಸಿಯಾವೋ ಕ್ಯುಮಿ ವಿಡಿಯೋ ಮಾಡುತ್ತಿದ್ದಾಗಲೇ ಬಿದ್ದು ಮೃತಪಟ್ಟಿದ್ದಾಳೆ.

ಕ್ಸಿಯಾವೋ ವೃತ್ತಿಯಲ್ಲಿ ಕ್ರೇನ್ ಚಾಲಕಿ. ಅದರಲ್ಲೇ ಕುಳಿತು ಟಿಕ್​ಟಾಕ್​ ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದಳು. ಕ್ರೇನ್​ ಚಾಲಕಿಯಾಗಿದ್ದ ಈಕೆ ತನ್ನ ವೃತ್ತಿಯ ಬಗ್ಗೆ ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ಪದೇಪದೆ ಏನಾದರೂ ಪೋಸ್ಟ್ ಹಾಕುತ್ತಿದ್ದಳು. ಆದರೆ ಈ ಬಾರಿ ದುರದೃಷ್ಟವಶಾತ್​ 160 ಅಡಿ ಆಳಕ್ಕೆ ಬಿದ್ದಿದ್ದಾಳೆ. ಆಕೆ ಲೈವ್​​ನಲ್ಲಿ ಮಾತನಾಡುತ್ತಿದ್ದಂತೇ ಜಾರಿದ್ದಾಳೆ. ಅಷ್ಟರಲ್ಲಿ ಕ್ಯಾಮರಾ ಆಫ್​ ಆಗಿದೆ..ಮಾತು ನಿಂತಿದೆ ಎಂದು ಸನ್​ ಮಾಧ್ಯಮ ವರದಿ ಮಾಡಿದೆ.

ಈಕೆಗೆ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಚೀನಾದ ಖ್ಯಾತ ಕಂಟೆಂಟ್​ ಕ್ರಿಯೇಟರ್​ ಮತ್ತು ಟಿಕ್​ಟಾಕ್​ ಆರ್ಟಿಸ್ಟ್​ಗಳಲ್ಲಿ ಒಬ್ಬರಾಗಿದ್ದರು. ಇವರು @Xiaoquimei ಎಂಬ ಹೆಸರಿನಲ್ಲಿ ಟಿಕ್​ಟಾಕ್ ಅಕೌಂಟ್ ಹೊಂದಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿಡಿಯೋವನ್ನು ಪೋಸ್ಟ್​ ಮಾಡಿ, ಜನಮೆಚ್ಚುಗೆ ಗಳಿಸಿದ್ದರು. ಅನೇಕ ಅಭಿಮಾನಿಗಳೂ ಇದ್ದರು. ಇದೀಗ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Nokia XR20: ಮತ್ತೆರಡು ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನಿದರ ವಿಶೇಷ, ಬೆಲೆ ಎಷ್ಟು?

Published On - 6:27 pm, Tue, 27 July 21