Viral : ತುಂಬಾ ದಿನಗಳ ಮೇಲೆ ಮತ್ತೊಂದು ಭ್ರಮಾತ್ಮಕ ಚಿತ್ರದೊಂದಿಗೆ ಬಂದಿದ್ದೇವೆ. ಕ್ರಿಸ್ಮಸ್ ಸಂಭ್ರಮಿಸಿ ಹೊಸ ವರ್ಷದ ಹೊಸ್ತಿಲಲ್ಲಿರುವಾಗ ಈ ಕ್ರಿಸ್ಮಸ್ ಥೀಮ್ನ ಆಪ್ಟಿಕಲ್ ಇಲ್ಲ್ಯೂಷನ್ ನಿಮ್ಮಲ್ಲಿ ಮತ್ತಷ್ಟು ತಾಳ್ಮೆಯನ್ನೂ ಜೊತೆಗೆ ಕುತೂಹಲವನ್ನೂ ತುಂಬಬಹುದೆಂಬ ವಿಶ್ವಾಸ ನಮ್ಮದು. ಇಷ್ಟೊಂದು ಪುಟಾಣಿ ಸಾಂತಾಗಳ ನಡುವೆ ಮೂರು ಕ್ಯಾಂಡಿಕೇನ್ ಮತ್ತು ಪಕ್ಷಿಯೊಂದು ಅಡಗಿ ಕುಳಿತಿದೆ. ನಿಗದಿತ ಸಮಯದಲ್ಲೇ ಹುಡುಕಬೇಕು ಅಂತೇನಿಲ್ಲ.
ಈ ಪುಟಾಣಿ ಸಾಂತಾಗಳು ಎಲ್ಲವೂ ಏಕರೂಪವಾಗಿಯೇ ಇರುವಾಗ ಹೇಗೆ ಹುಡುಕುವುದು ಎಂಬ ಗೊಂದಲ ಸಹಜವೇ. ಆದರೂ ನೀವೆಲ್ಲ ಬಹಳೇ ಚುರುಕುಗಣ್ಣಿನವರು ಎನ್ನುವುದು ಈ ಹಿಂದೆ ಆಪ್ಟಿಕಲ್ ಇಲ್ಲ್ಯೂಷನ್ ಗಳ ಸವಾಲುಗಳಿಗೆ ಉತ್ತರ ಕಂಡುಕೊಂಡಾಗಲೇ ನಮಗೆ ತಿಳಿದಿದೆ.
ಮೊದಲ ಸಲ ಗೊತ್ತಾಗದಿದ್ದರೆ ಐದು ನಿಮಿಷ ಬಿಟ್ಟು ಮತ್ತೆ ನೋಡಿ. ಆಗಲೂ ಗೊತ್ತಾಗದಿದ್ದರೆ ಇನ್ನೂ ಐದು ನಿಮಿಷ ಬಿಟ್ಟು ನೋಡಿ ಒಟ್ಟಿನಲ್ಲಿ ಮೂರು ಕ್ಯಾಂಡಿಕೇನ್ ಮತ್ತು ಒಂದು ಪಕ್ಷಿಯನ್ನು ಗುರುತಿಸಬೇಕು.
ಸಾಧ್ಯವಾಗದಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ.
ಉತ್ತರ ಸುಲಭಕ್ಕೆ ಸಿಗದಿದ್ದರೂ ತೊಂದರೆ ಇಲ್ಲ. ಅಷ್ಟು ಹೊತ್ತು ನೀವು ಜಗತ್ತಿನ ಜಂಜಡ ಮತ್ತು ಮಾಡುವ ಕೆಲಸಗಳಿಂದ ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಿದ್ದಿರಲ್ಲವೆ? ಈಗ ನೀವು ಮತ್ತೆ ನಿಮ್ಮ ಕೆಲಸದಲ್ಲಿ ಮುಂದುವರಿಯಬಹುದು.
ಮತ್ತೊಂದು ಇಂಥದೇ ಭ್ರಮಾತ್ಮಕ ಚಿತ್ರವನ್ನು ನೋಡಲು ಕ್ಲಿಕ್ ಮಾಡಿ