Viral Video : ಎರಡನೇ ಕ್ಲಾಸಿನ ಮಕ್ಕಳ ‘ಭೇಲ್​ಪುರಿ’ಗೆ 10 ಮಿಲಿಯನ್​ ನೆಟ್ಟಿಗರು ಫಿದಾ

| Updated By: ಶ್ರೀದೇವಿ ಕಳಸದ

Updated on: Sep 27, 2022 | 3:29 PM

Bhelpuri : ದೊಡ್ಡ ಪಾತ್ರೆಗೆ ಒಬ್ಬರು ಚುರುಮುರಿ ಸುರಿಯುತ್ತಾರೆ. ಇನ್ನೊಬ್ಬರು ಈರುಳ್ಳಿ, ಮತ್ತೊಬ್ಬರು ಕೊತ್ತಂಬರಿ, ಮಗದೊಬ್ಬರು ಟೊಮ್ಯಾಟೋ, ಸೇವು, ಕಡಲೇಬೀಜ ಹೀಗೆ... ಬಾಯಲ್ಲಿ ನೀರು ಬಂತಾ? ಹಾಗಿದ್ದರೆ ಈ ವಿಡಿಯೋ ನೋಡಿ.

Viral Video : ಎರಡನೇ ಕ್ಲಾಸಿನ ಮಕ್ಕಳ ‘ಭೇಲ್​ಪುರಿ’ಗೆ 10 ಮಿಲಿಯನ್​ ನೆಟ್ಟಿಗರು ಫಿದಾ
ಒಬ್ಬೊಬ್ಬರು ಒಂದೊಂದು ಪದಾರ್ಥ ತಂದು ಪಾತ್ರೆಗೆ ಸುರಿಯುತ್ತಿರುವುದು
Follow us on

Viral Video : ಶಾಲೆಗಳಲ್ಲಿ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಪಾಠ ಮಾಡುವ ಕ್ರಮದಿಂದಾಗಿ ಅನೇಕ ಶಿಕ್ಷಕರು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಸೃಜನಶೀಲವಾಗಿ ಯೋಚಿಸಲಾರಂಭಿಸಿದ್ದಾರೆ. ಪ್ರತಿಯೊಂದು ಮಗುವು ಚಟುವಟಿಕೆಗಳ ಮೂಲಕ ಭಾಗವಹಿಸುವುದು, ರಚನಾತ್ಮಕವಾಗಿ ಯೋಚಿಸುವುದು ಮತ್ತು ತಂಡದ ಮಹತ್ವ, ಸಾಮರಸ್ಯದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ವಿಶೇಷವಾಗಿದೆ ಮತ್ತು ಕ್ರಿಯಾಶೀಲವಾಗಿದೆ. ಶಾಲೆಯಲ್ಲಿ ಎರಡನೇ ತರಗತಿಯ ಮಕ್ಕಳು ಭೇಲ್​ಪುರಿ ತಯಾರಿಸುವ ವಿಧಾನಕ್ಕೆ, ಶಿಸ್ತಿಗೆ ನೆಟ್ಟಿಗರು ವಾಹ್​ ಎಂದು ಬಾಯಲ್ಲಿ ನೀರೂರಿಸಿಕೊಂಡಿದ್ದಾರೆ.

ಮುಂಬೈನ ಲಾಲ್​ಜೀ ತ್ರಿಕಾಮ್‌ಜೀ ಎಂಪಿಎಸ್ ಆಂಗ್ಲ ಮಾಧ್ಯಮ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವಿಷಯವಾಗಿ ಅರಿವು ಮೂಡಿಸಲು ಕೊಟ್ಟಿರುವ ಚಟುವಟಿಕೆಯೇ ಭೇಲ್​ಪುರಿ ತಯಾರಿಕೆ. ಒಬ್ಬೊಬ್ಬರಾಗಿ ಬಂದು ಚುರಮುರಿ, ಸೇವು, ಈರುಳ್ಳಿ, ಕೊತ್ತಂಬರಿ, ಟೊಮ್ಯಾಟೋ, ಮಸಾಲೆ, ಕಡಲೆಬೀಜ, ನಿಂಬೆಹಣ್ಣು, ಉಪ್ಪು ಹೀಗೆ ಶಿಸ್ತಿನಿಂದ ಪಾತ್ರೆಗೆ ಸುರಿಯುವ ದೃಶ್ಯವೇ ಅದ್ಭುತ!

ಈ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಆದ ನಂತರ ಸುಮಾರು 10.2 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಆ ಉಪ್ಪು ಸುರಿಯುವ ಬಾಲಕನ ಸ್ಟೈಲ್​ ನೆಟ್ಟಿಗರಲ್ಲಿ ನಗು ತರಿಸಿದೆ.

ನಿಮಗೂ ಬಾಯಲ್ಲಿ ನೀರು ಬರುತ್ತಿದ್ದರೆ, ಹೀಗೆ ಮನೆಯ ಸದಸ್ಯರು ಒಬ್ಬೊಬ್ಬರೂ ಒಂದೊಂದು ಕೆಲಸ ವಹಿಸಿಕೊಂಡು ರುಚಿಕಟ್ಟಾದ ಭೇಲ್​ಪುರಿ ತಯಾರಿಸಿ ತಿನ್ನಬಹುದು. ಮನೆಯಷ್ಟೇ ಯಾಕೆ ಆಫೀಸಿನಲ್ಲೂ!

ಹೇಗಿದೆ ಐಡಿಯಾ! ಮಕ್ಕಳಿಂದ ಕಲಿಯುವುದು ಮುಗಿಯುವುದೇ ಇಲ್ಲವಲ್ಲ?

ಆದರೆ, ಈಗಿಗಲಂತೂ ಶಾಲಾಮಕ್ಕಳ ವಿಡಿಯೋಗಳು ಅನೇಕ ರೀತಿಯಿಂದ ಗಮನ ಸೆಳೆದು ವೈರಲ್ ಆಗುತ್ತಿವೆ. ಕೆಲವು ಸಹಜವಾಗಿರುತ್ತವೆ, ಇನ್ನೂ ಕೆಲವನ್ನು ವೈರಲ್ ಮಾಡಲೆಂದೇ ವಿಡಿಯೋ ಮಾಡಲಾಗಿರುತ್ತವೆ.  ಆದರೂ ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ದಾಖಲಾಗುತ್ತಿರುತ್ತದೆ ಎನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡರೆ ಒಳಿತು. ಮಕ್ಕಳು ಬೆಳೆದಂತೆ ನಾಳೆ ಅವರ ವಿಡಿಯೋ ಅವರೇ ನೋಡಿ ಮುಜುಗರಕ್ಕೆ ಒಳಗಾಗಬಾರದಲ್ಲ? ಮಕ್ಕಳ ಹಕ್ಕುಗಳ ಬಗ್ಗೆ ಒಮ್ಮೆ ಓದಿಕೊಂಡರೆ ಈ ವಿಷಯ ಮನದಟ್ಟಾಗುತ್ತದೆ.

ಆದರೆ ಈ ಭೇಲ್​ಪುರಿ ವಿಡಿಯೋ ಮಾತ್ರ ಸೂಪರ್!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:22 pm, Tue, 27 September 22