Viral Video: ಫೋನ್​ ಕಸಿದುಕೊಂಡ ಶಿಕ್ಷಕಿಯ ಜಡೆ ಹಿಡಿದು ಚಪ್ಪಲಿಯಲ್ಲಿ ಬಾರಿಸಿದ ವಿದ್ಯಾರ್ಥಿನಿ

ಆಂಧ್ರಪ್ರದೇಶದ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ತನ್ನ ಪ್ರಾಧ್ಯಾಪಕಿಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ವೈರಲ್ ಆಗಿದೆ. ಕ್ಲಾಸ್‌ನಲ್ಲಿ ಫೋನ್ ಬಳಸಿದ್ದಕ್ಕೆ ಪ್ರಾಧ್ಯಾಪಕಿ ಫೋನ್ ವಶಪಡಿಸಿಕೊಂಡಿದ್ದು, ಇದರಿಂದ ಕೋಪಗೊಂಡ ಯುವತಿ ನೇರವಾಗಿ ಶಿಕ್ಷಕಿಯ ಮೇಲೆ ಕೈ ಮಾಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ಬೆನ್ನಲ್ಲೇ ಇದೀಗ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಅಮಾನತುಗೊಳಿಸಿದೆ.

Viral Video: ಫೋನ್​ ಕಸಿದುಕೊಂಡ ಶಿಕ್ಷಕಿಯ ಜಡೆ ಹಿಡಿದು ಚಪ್ಪಲಿಯಲ್ಲಿ ಬಾರಿಸಿದ ವಿದ್ಯಾರ್ಥಿನಿ
College Student Attacks Teacher With Slipper

Updated on: Apr 26, 2025 | 12:26 PM

ಆಂಧ್ರಪ್ರದೇಶ: ಮಕ್ಕಳಿಗೆ ವಿದ್ಯೆ ಕಲಿಸಿ, ಬದುಕಿನ ಮಾರ್ಗ ತೋರಿಸುವ ಶಿಕ್ಷಕನ್ನು ದೇವರೆಂದು ಗೌರವಿಸಲಾಗುತ್ತದೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ತನ್ನ ಚಪ್ಪಲಿಯಲ್ಲೇ ತನ್ನ ಗುರುವಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ವಿದ್ಯಾರ್ಥಿನಿ ತರಗತಿಯಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಕಂಡ ಶಿಕ್ಷಕಿ ಆಕೆಯಿಂದ ಫೋನ್​​ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ನೇರವಾಗಿ ತನ್ನ ಶಿಕ್ಷಕಿಯ ಮೇಲೆಯೇ ಕೈ ಮಾಡಿದ್ದಾಳೆ.

ಕಾಲೇಜಿನ ಕ್ಯಾಂಪಸ್​​​ನಲ್ಲೇ ನೂರಾರು ವಿದ್ಯಾರ್ಥಿಗಳ ಮುಂದೆ ಶಿಕ್ಷಕಿಗೆ ಚಪ್ಪಲಿಯಲ್ಲಿ ಹೊಡೆದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಇದಲ್ಲದೇ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ಶಬ್ದಗಳಿಂದ ಬೈಯುತ್ತಿರುವುದನ್ನು ಕಾಣಬಹುದು. @DrSrinubabu ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: Viral : ಮದುವೆ ಮೆರವಣಿಗೆ ನಿಲ್ಲಿಸಿ, ಟ್ರಾಫಿಕ್ ಕ್ಲಿಯರ್ ಮಾಡಿ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟ ಮದುಮಗ

ಅಲ್ಲೇ ಇದ್ದ ವಿದ್ಯಾರ್ಥಿಯೊಬ್ಬರು ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅಷ್ಟೇ ಅಲ್ಲ, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಘು ಕಾಲೇಜು ಆಡಳಿತ ಮಂಡಳಿ ವಿಚಾರಣೆ ನಡೆಸಿದ್ದು,ವಿದ್ಯಾರ್ಥಿನಿ ಕೋಪಗೊಂಡು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾಳೆಂದು ತಿಳಿದುಬಂದಿದೆ. ಶಿಕ್ಷಕಿಯ ಮೇಲೆ ಕೈ ಮಾಡಿದ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ