Viral Video: ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ; ತನ್ನ ಮೊಟ್ಟೆಯನ್ನೇ ತಿಂದ ಕಾಗೆಯನ್ನು ಹೊಡೆದು ಸಾಯಿಸಿದ ಹಕ್ಕಿ   

ನಿತ್ಯ ಮೊಟ್ಟೆಗೆ ಕಾವು ಕೊಟ್ಟು ತನ್ನ ಮರಿಗಳು ಪ್ರಪಂಚವನ್ನು ನೋಡಬೇಕು ಎಂದು ಕಾತರದಿಂದ ಕಾಯುತ್ತಿದ್ದ ಡೇಗೆ ಹಕ್ಕಿ (Common Kestrel) ಯ ಮೊಟ್ಟೆಯನ್ನು ಕಾಗೆಯೊಂದು ತಿಂದು ಹಾಕುತ್ತದೆ. ತನ್ನ ಕಂದಮ್ಮನನ್ನೇ ಸಾಯಿಸಿಬಿಟ್ಟೆಯಲ್ಲಾ ಪಾಪಿ… ಎಂದು ಕೋಪಗೊಂಡ ತಾಯಿ ಹಕ್ಕಿ ರೋಷದಿಂದ ಕಾಗೆಯನ್ನು ಹೊಡೆದು ಸಾಯಿಸಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

Viral Video: ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ; ತನ್ನ ಮೊಟ್ಟೆಯನ್ನೇ ತಿಂದ ಕಾಗೆಯನ್ನು ಹೊಡೆದು ಸಾಯಿಸಿದ ಹಕ್ಕಿ   
Updated By: ಅಕ್ಷಯ್​ ಪಲ್ಲಮಜಲು​​

Updated on: May 21, 2024 | 2:55 PM

ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಯಾರೂ ಇಲ್ಲ ಎಂದು ಹೇಳುತ್ತಾರೆ. ಮನುಷ್ಯರೇ ಆಗಲಿ ಪ್ರಾಣಿ ಪಕ್ಷಿಗಳೇ ಆಗಲಿ,  ತನ್ನ  ಕಂದಮ್ಮನನ್ನು ರಕ್ಷಿಸಲು ತಾಯಿಯಾದವಳು ಪ್ರಾಣವನ್ನೇ ತ್ಯಾಗ ಮಾಡುತ್ತಾಳೆ. ಆಕೆ ತನ್ನ  ಹೆತ್ತ ಕರುಳಿಗೆ ಸ್ವಲ್ಪ ನೋವಾದರೂ ಸಹಿಸಲಾರಳು. ಇದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಇನ್ನೇನೂ ತನ್ನ ಕಂದಮ್ಮ ಈ ಪ್ರಪಂಚಕ್ಕೆ ಕಾಲಿಡುತ್ತೇ ಎಂದು ಸಂತೋಷದಿಂದ ಕಾದು ಕುಳಿದಿದ್ದತಹ  ಡೇಗೆ ಹಕ್ಕಿ (Common Kestrel) ಯ ಮೊಟ್ಟೆಯನ್ನು ಕಾಗೆಯೊಂದು ತಿಂದು ಹಾಕುತ್ತದೆ. ಇದರಿಂದ ಕೋಪಗೊಂಡ ತಾಯಿ ಹಕ್ಕಿ ಕಾಗೆಯನ್ನೇ ಹೊಡೆದು ಸಾಯಿಸಿದೆ.

ಈ ಕುರಿತ ವಿಡಿಯೋವನ್ನು @Alphafox78 ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಡೇಗೆ ಹಕ್ಕಿ (Common Kestrel) ಯೊಂದು ಮರದ ಪೊಟರೆಯಲ್ಲಿ ಮೊಟ್ಟೆಯನ್ನಿಟ್ಟು, ಆಹಾರವನ್ನರಸುತ್ತಾ ಆಚೆ ಕಡೆ ಹೋಗಿರುತ್ತೆ. ಇದೇ ಒಳ್ಳೆಯ ಸಮಯ ಎಂದು ಪೊಟರೆಯೊಳಗೆ ನುಗ್ಗಿದ ಕಾಗೆಯೊಂದು ಮೂರು ಮೊಟ್ಟೆಗಳಲ್ಲಿ ಒಂದು ಮೊಟ್ಟೆಯನ್ನು ತಿಂದು ಹಾಕುತ್ತದೆ. ಡೇಗೆ ಹಕ್ಕಿ ವಾಪಸ್ ಬಂದು ನೋಡಿದಾಗ ಒಂದು ಮೊಟ್ಟೆ ಒಡೆದು ಹೋಗಿರುತ್ತದೆ. ಯಾರೋ ನನ್ನ ಮೊಟ್ಟೆಯನ್ನು ತಿಂದು ಹಾಕಿದ್ದಾರೆ, ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಹೊಂಚು ಹಾಕಿ ಕುಳಿತಿದ್ದ ಈ ಹಕ್ಕಿ ಕಾಗೆ ಇನ್ನೊಂದು ಬಾರಿ ಪೊಟರೆಯೊಳಗೆ ಕಾಲಿಡುತ್ತಿದ್ದಂತೆ ಅದರ ಮೇಲೆ ದಾಳಿ ನಡೆಸಿ, ರೋಷದಿಂದ ಕಾಗೆಯನ್ನು ಹೊಡೆದು ಸಾಯಿಸುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮದುವೆ ಮಂಟಪಕ್ಕೆ ನುಗ್ಗಿ ವರನಿಗೆ ಹಿಗ್ಗಾಮುಗ್ಗಾ ಥಳಿಸಿದ ವಧುವಿನ ಮಾಜಿ ಪ್ರಿಯಕರ 

ವೈರಲ್​​ ವಿಡಿಯೋ ಇಲ್ಲಿದೆ

ಮೇ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದೃಶ್ಯ ನೋಡಲು ತುಂಬಾ ರೋಮಾಂಚನಕಾರಿಯಾಗಿತ್ತು ಎಂದು ನೋಡುಗರು ಕಾಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ