Viral: ಹೈಲಿ ಕ್ವಾಲಿಫೈಡ್‌ ಎಂದು ಇಂಟರ್ವ್ಯೂನಲ್ಲಿ ಯುವತಿಯನ್ನು ರಿಜೆಕ್ಟ್ ಮಾಡಿದ ಕಂಪನಿ, ಮುಂದೇನಾಯ್ತು ಗೊತ್ತಾ?

ಈಗಿನ ಕಾಲದಲ್ಲಿ ಕೆಲಸ ಸಿಗೋದು ಎಷ್ಟು ಕಷ್ಟವೋ ಸಂದರ್ಶನದಲ್ಲಿ ಪಾಸ್ ಆಗೋದು ಇನ್ನೂ ಕಷ್ಟ. ಇನ್ನು ಇಂಟರ್ವ್ಯೂ ನಲ್ಲಿ ಪಾಸ್ ಆಗಿ ಕೆಲಸ ಸಿಕ್ಕರೆ ಅದಕ್ಕಿಂತ ಸಂತೋಷ ಬೇರೇನಿಲ್ಲ. ಇಂಟರ್ವ್ಯೂ ನಲ್ಲಿ ಚೆನ್ನಾಗಿ ಪರ್ಫಾರ್ಮೆನ್ಸ್ ಕೊಟ್ಟು ಕೊನೆ ಕ್ಷಣದಲ್ಲಿ ಕೆಲಸ ಇಲ್ಲ ಎಂದು ಹೇಳಿದರೆ ಹೇಗಿರುತ್ತೆ. ಪ್ರೋಗ್ರಾಮ್ ಅಸಿಸ್ಟೆಂಟ್ ಹುದ್ದೆಗೆ ಸಂದರ್ಶನ ನೀಡಿದ್ದ ಯುವತಿಯೂ ಕಂಪನಿಯಿಂದ ಬಂದ ಮೇಲ್ ನೋಡಿ ಶಾಕ್ ಆಗಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಹೈಲಿ ಕ್ವಾಲಿಫೈಡ್‌ ಎಂದು ಇಂಟರ್ವ್ಯೂನಲ್ಲಿ ಯುವತಿಯನ್ನು ರಿಜೆಕ್ಟ್ ಮಾಡಿದ ಕಂಪನಿ, ಮುಂದೇನಾಯ್ತು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 18, 2025 | 4:30 PM

ಈಗಿನ ಕಾಲದಲ್ಲಿ ಕೆಲಸ (job) ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಒಳ್ಳೆಯ ಪ್ರತಿಭೆ, ಪರಿಶ್ರಮ, ಕೆಲಸದ ಆಸಕ್ತಿ ಎಲ್ಲವೂ ಇದ್ರು, ಸಂದರ್ಶನದ ಕೊನೆಗೆ ನೀವು ರಿಜಕ್ಟ್ ಎಂದಾಗ ಆಗೋ ಬೇಜಾರು ಅಷ್ಟಿಷ್ಟಲ್ಲ. ಇನ್ನೂ ಓದಿದವರೂ ತಮ್ಮ ಓದಿಕ್ಕಿಂತ ತಕ್ಕದಾದ ಕಡಿಮೆ ಸಂಬಳದ ಕೆಲಸ ಸಿಕ್ಕರೂ ಮಾಡೋಕೆ ರೆಡಿ ಇದ್ದಾರೆ. ಆದರೆ ಕಂಪನಿಯವರು ಅಧಿಕ ಅರ್ಹತೆ ಎಂದು ಸೆಲೆಕ್ಟ್ ಮಾಡೋದಿಲ್ಲ. ಇದೀಗ ಈ ಯುವತಿಯದ್ದು (Young women) ಅದೇ ಪರಿಸ್ಥಿತಿಯಾಗಿದೆ. ಪ್ರೋಗ್ರಾಮ್ ಅಸಿಸ್ಟೆಂಟ್ ಹುದ್ದೆಗೆ ಸಂದರ್ಶನ ನೀಡಿದ್ದ ಯುವತಿಯೂ ಬಹಳ ನೀರಿಕ್ಷೆಯಲ್ಲಿದ್ದು, ಆದರೆ ಕಂಪನಿಯೂ ಈಕೆಯನ್ನು ಸೆಲೆಕ್ಟ್ ಮಾಡದೇ ಈ ಕಾರಣವನ್ನು ನೀಡಿದೆ. ಕಂಪನಿಯ ಕಡೆಯಿಂದ ಬಂದ ಮೇಲ್ ನೋಡಿ ಶಾಕ್ ಆಗಿದ್ದು, ಆ ಬಳಿಕ ಏನಾಯ್ತು ಎಂದು ವಿವರಿಸಿದ್ದಾಳೆ.

r/ jobs ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಯುವತಿಯೂ ತಾನು ಸಂದರ್ಶನ ನೀಡಿದ್ದ ಹುದ್ದೆಯಿಂದ ಹೇಗೆ ತಿರಸ್ಕರಿಸಲ್ಪಟ್ಟೆ ಎಂದು ವಿವರಿಸಿದ್ದಾರೆ. ಕಂಪನಿಯು ತನ್ನ ಅರ್ಹತೆಗಳಿಗೆ ಹೆಚ್ಚು ಸೂಕ್ತವಾದ ಮತ್ತೊಂದು ಹುದ್ದೆಯ ಬಗ್ಗೆ ತಿಳಿಸುತ್ತಿದೆಯೇ ಅಥವಾ ತನಗೆ ಉದ್ಯೋಗವನ್ನು ನೀಡುತ್ತಿದೆಯೇ ಎಂದು ಗೊಂದಲಕ್ಕೆ ಒಳಗಾಗಿದ್ದಾಳೆ. ರೆಡ್ಡಿಟ್ ಖಾತೆಯಲ್ಲಿ ಯುವತಿಯೂ ನನಗೆ 26 ವರ್ಷ ವಯಸ್ಸು. ನಾನು ಪ್ರೋಗ್ರಾಂ ಅಸಿಸ್ಟೆಂಟ್‌ ಹುದ್ದೆಗೆ ಸಂದರ್ಶನ ನೀಡಿದ್ದೆ. ಸಂದರ್ಶನ ತುಂಬಾ ಚೆನ್ನಾಗಿಯೇ ನಡೆಯಿತು. ಮೇಲ್ ಕೂಡ ಬಂತು. ಮೊದಲಿಗೆ ಇದು ಒಂದು ಆಫರ್ ಎಂದು ನನಗೆ ಅನಿಸಿದ್ದರಿಂದ ನಾನು ಬಹಳ ಉತ್ಸುಕಳಾಗಿದ್ದೆ. ಆದರೆ ಮೇಲ್ ಓದಿದಾಗ ಅದರಲ್ಲಿ ನನ್ನನ್ನು ಹೈಲಿ ಕ್ವಾಲಿಫೈಡ್‌ ಎನ್ನುವ ಕಾರಣ ನೀಡಿ ರಿಜೆಕ್ಟ್ ಮಾಡಿದೆ. ಕಂಪನಿಯೊಳಗೆ ಬೇರೆ ಹುದ್ದೆಗೆ ನೀವು ಹೆಚ್ಚು ಸೂಕ್ತರಾಗಿದ್ದೀರಿ ಇಮೇಲ್‌ನಲ್ಲಿ ತಿಳಿಸಲಾಗಿದ್ದು, ಕಂಪನಿಯು ತನಗೆ ಉದ್ಯೋಗ ನೀಡಿರುವುದಾಗಿ ಯುವತಿ ಹೇಳಿದ್ದಾಳೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Does this sound like I got an offer or just a “check this out”!?
byu/libramorninggg injobs

ಇದನ್ನೂ ಓದಿ
ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳಿಲ್ಲ; ಕೆಲಸ ಬಿಡಲು ಕಾರಣ ತಿಳಿಸಿದ ಮಹಿಳೆ
ಪೈಲ್ಸ್​​​ ಆಗಿದೆ, ರಜೆ ಕೊಡಿ ಅಂದ್ರೆ ಮ್ಯಾನೇಜರ್ ಹೇಳಿದ್ದೇನು ಗೊತ್ತಾ?​​
ರಾತ್ರಿ ಒಂಬತ್ತಾದ್ರೂ ಮುಗಿಯದ ವರ್ಕ್, ಮಹಿಳೆಯ ಕೆಲಸ ನೋಡಿ ಅಚ್ಚರಿಪಟ್ಟ ವ್ಲಾ
ಭಾರತಕ್ಕೆ ಹೋಲಿಸಿದ್ರೆ ಯುರೋಪ್‌ನ ಉದ್ಯೋಗಿಗಳು ಎಷ್ಟು ಸೇಫ್ ನೋಡಿ

ಇದನ್ನೂ ಓದಿ:Viral: ತನ್ನ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳಿಲ್ಲ; ಉದ್ಯೋಗ ತೊರೆಯುವ ಹಿಂದಿನ ಕಾರಣ ತಿಳಿಸಿದ ಮಹಿಳೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ಈ ಕಂಪನಿಯು ಅಭ್ಯರ್ಥಿಗೆ ಉದ್ಯೋಗ ನೀಡುವ ಬದಲು ಬೇರೆ ಹುದ್ದೆಯ ಬಗ್ಗೆ ತಿಳಿಸುತ್ತಿದೆ. ಹೀಗಾಗಿ ನಿಮಗೆ ಯಾವ ಹುದ್ದೆಗೆ ಬೇಕು ಎಂದು ತಿಳಿಸಿ, ಅಲ್ಲಿ ಹುದ್ದೆ ಖಾಲಿಯಿದ್ದರೆ ನಿಗೆ ಜಾಬ್ ಸಿಗುತ್ತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಭಿನಂದನೆಗಳು! ಖಂಡಿತವಾಗಿಯೂ ಸ್ಪಷ್ಟ ಸಂವಹನವಿಲ್ಲ, ಆದರೆ ಅವರು ಬಹುಶಃ ಆತುರದಲ್ಲಿದ್ದರು ಎಂದು ಕಾಣಿಸುತ್ತದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಈ ತರಹ ಉದ್ಯೋಗ ಯಾರಿಗೂ ಸಿಗುತ್ತೆ. ನೀವು ಉದ್ಯೋಗ ಯಾವುದಾದ್ರೂ ಏನು ಅಂದುಕೊಂಡ್ರಿ. ಆದರೆ ಕಂಪನಿಯೂ ನಿಮ್ಮ ಅಧಿಕ ಅರ್ಹತೆ ಕಂಡುಕೊಂಡು ಉದ್ಯೋಗ ನೀಡಲು ಮುಂದಾಯಿತು, ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:22 pm, Sat, 18 October 25