ಸಾಮಾನ್ಯವಾಗಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಚಿಲ್ಲರೆ ಹಣದ ವಿಷಯವಾಗಿ ಆಗಾಗ್ಗೆ ಜಗಳಗಳು ನಡೆಯುತ್ತಿರುತ್ತವೆ. ಹೆಚ್ಚಾಗಿ ಕಂಡಕ್ಟರ್ ಗಳು ಚಿಲ್ಲರೆ ಕೊಟ್ಟು ಸಹಕರಿಸಿ ಎಂದು ಕೇಳಿಕೊಳ್ಳುತ್ತಾರೆ. ಏನಾದ್ರೂ ಬಸ್ ಟಿಕೆಟ್ 19 ರೂ. ಇದ್ದರೆ ಕೆಲವೊಂದು ಕಂಡಕ್ಟರ್ 1 ರೂಪಾಯಿ ಚಿಲ್ಲರೆ ಹಣವನ್ನು ಮತ್ತೆ ಕೊಡುತ್ತೇನೆ ಎಂದು ಪ್ರಯಾಣಿಕರಿಗೆ ವಾಪಸ್ ಹಿಂದಿರುಗಿಸೋದೇ ಇಲ್ಲ. ಇದೀಗ ಅದೇ ರೀತಿಯ ಘಟನೆಯೊಂದು ಬೆಂಗಳೂರಿನ ಬಿ.ಎಂ.ಟಿ.ಸಿ ಬಸ್ ಒಂದರಲ್ಲಿ ನಡೆದಿದ್ದು, ಕಂಡಕ್ಟರ್ 5 ರೂಪಾಯಿ ಚಿಲ್ಲರೆ ಹಣ ವಾಪಸ್ ಕೊಟ್ಟಿಲ್ಲ ಎಂದು ಆ ಪ್ರಯಾಣಿಕ ತನ್ನ ಅಸಮಾಧಾನವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾನೆ. ಈ ಕುರಿತ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.
ಈ ಪೋಸ್ಟ್ನ್ನು ನಿತೀನ್ ಕೃಷ್ಣ (N_4_NITHIN) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕಂಡಕ್ಟರ್ ಬಳಿ 1 ರೂಪಾಯಿ ಚೇಂಜ್ ಕೂಡಾ ಇಲ್ಲವೇ? ನಾನು ನನ್ನ 5 ರೂಪಾಯಿ ಹಣವನ್ನು ಕಳೆದುಕೊಂಡೆ, ಇದಕ್ಕೆ ಏನಾದರೂ ಪರಿಹಾರ ಇದೆಯೇ?” ಎಂದು ಬಿ.ಎಂ.ಟಿ.ಸಿಯ ಅಧೀಕೃತ ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
I lost my 5 rs as this conductor didnt had even 1 rupee change (?) to return. Is there any solution to this? @BMTC_BENGALURU pic.twitter.com/2KFCCN5EOW
— Nithin Krishna (@N_4_NITHIN) April 14, 2024
ನಿತೀನ್ ಅವರು ಬಿ.ಎಂ.ಟಿ.ಸಿ ಬಸ್ಸಿನಲ್ಲಿ ರಾಗಿಗುಡ್ಡ ದೇವಸ್ಥಾನದಿಂದ ಹೆಚ್.ಎಸ್.ಆರ್ ಡಿಪೋದ ಕಡೆ ಹೋಗುತ್ತಾರೆ. ಟಿಕೆಟ್ ಬೆಲೆ ರೂಪಾಯಿ 15 ಆಗಿದ್ದರಿಂದ ನಿತೀನ್ 20 ರೂಪಾಯಿ ನೋಟನ್ನು ಕಂಡಕ್ಟರ್ ಗೆ ನೀಡುತ್ತಾರೆ. ಆದರೆ ಆ ಕಂಡಕ್ಟರ್ ವಾಪಸ್ 5 ರೂಪಾಯಿ ಚಿಲ್ಲರೆ ಹಣವನ್ನು ನೀಡಲೇ ಇಲ್ಲ. ಹೀಗೆ ಕಂಡಕ್ಟರ್ ಚಿಲ್ಲರೆ ಹಣವನ್ನು ವಾಪಸ್ ನೀಡಿಲ್ಲ ಎಂಬ ವಿಚಾರವನ್ನು ನಿತೀನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಸಂಗಾತಿಯೊಂದಿಗೆ ಸ್ನಾನ ಮಾಡಿ ನೀರು ಉಳಿಸಿ; ಸರ್ಕಾರ ಘೋಷಣೆ
ಏಪ್ರಿಲ್ 14 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 72 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ರೀತಿ ಸಮಸ್ಯೆಯಾಗಬಾರದೆಂದರೆ UPI ಮೂಲಕ ಟಿಕೆಟ್ ಹಣ ನೀಡಬೇಕು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Wed, 17 April 24