Viral Video: ಈ ಯುವತಿ ಬಳಿ ಯಮ ಒಂದು ಕ್ಷಣ ಬಂದು ಹೋದ, ನೆಟ್ಟಿಗರಿಗೆ ದೇವರಂತೆ ಕಂಡ ಕಂಡಕ್ಟರ್

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 25, 2024 | 3:22 PM

ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಒಂದು ಬಾರಿ ನೀವು ನೋಡಿದ್ರು ಬೆಚ್ಚಿಬೀಳುವುದು ಖಂಡಿತ, ಬಸ್ಸಿನಿಂದ ಆಯತಪ್ಪಿ ಕೆಳಗೆ ಬೀಳುತ್ತಿದ್ದಂತಹ ಯುವತಿಯನ್ನು ತನ್ನ ಸಮಯ ಪ್ರಜ್ಞೆಯಿಂದ ಕಂಡಕ್ಟರ್ ಸಾಹೇಬ್ರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಪಟ್ಟೆ ವೈರಲ್ ಆಗಿದ್ದು, ಇವರು ಕಣ್ರೀ ರಿಯಲ್ ಹೀರೋ ಅಂದ್ರೆ ಅಂತ ನೆಟ್ಟಿಗರು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. 

Viral Video: ಈ ಯುವತಿ ಬಳಿ ಯಮ ಒಂದು ಕ್ಷಣ ಬಂದು ಹೋದ, ನೆಟ್ಟಿಗರಿಗೆ ದೇವರಂತೆ ಕಂಡ ಕಂಡಕ್ಟರ್
Follow us on

ಸಾಮಾನ್ಯ ಜನರು ಕೂಡಾ  ಕೆಲವೊಮ್ಮೆ ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ಮತ್ತೊಬ್ಬರ ಜೀವ ರಕ್ಷಣೆ ಮಾಡುವ ರಿಯಲ್ ಹೀರೋಗಳಾಗುತ್ತಾರೆ. ಸಂಕಷ್ಟದ ಸಂದರ್ಭದಲ್ಲಿ ತಕ್ಷಣ ನೆರವಿಗೆ ಧಾವಿಸಿ ಜೀವ ಉಳಿಸಿ ಸಾಹಸ ಮೆರೆದ ಸಾಕಷ್ಟು ಹೃದಯವಂತರನ್ನು ನೀವು ನೋಡಿರಬಹುದು, ಅವರ ಬಗ್ಗೆ ಕೇಳಿರಬಹುದು. ಸಾಮಾಜಿಕ ಜಾಲತಾಣದಲ್ಲಿಯೂ ಇಂತಹ ಕೆಲವೊಂದು ದೃಶ್ಯಗಳು ಕಾಣಸಿಗುತ್ತವೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ವೇಗವಾಗಿ ಚಲಿಸುತ್ತಿದ್ದಂತಹ  ಬಸ್ಸಿನಿಂದ ಆಯತಪ್ಪಿ ಕೆಳ ಬಿದ್ದಂತಹ ಯುವತಿಯ  ಜೀವ ರಕ್ಷಣೆ ಮಾಡುವ ಮೂಲಕ ಆ ಬಸ್ಸಿನ ಕಂಡಕ್ಟರ್ ʼರಿಯಲ್ ಹೀರೋʼ ಆಗಿದ್ದಾರೆ.

ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ತಮಿಳುನಾಡಿನ ಈರೋಡ್ ನಿಂದ ಮೆಟ್ಟೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಮಹಿಳೆಯೊಬ್ಬರು ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ, ಅಲ್ಲೇ ಫುಟ್ಬೋರ್ಡ್ ಬಳಿ ನಿಂತಿದ್ದ ಕಂಡಕ್ಟರ್ ತನ್ನ ಸಮಯ ಪ್ರಜ್ಞೆಯಿಂದ ಆ ಮಹಿಳೆಯ ಜೀವವನ್ನು ರಕ್ಷಿಸಿದ್ದಾರೆ. ಈ ದೃಶ್ಯಾವಳಿ ಬಸ್ಸಿನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವೈರಲ್ ವಿಡಿಯೋವನ್ನು ಚಂದ್ರಶೇಖರನ್ (@tn36_ss_raider_chandru) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ʼರಿಯಲ್ ಹೀರೋ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಬಸ್ ಕಂಡಕ್ಟರ್ ತಮ್ಮ ಸಮಯ ಪ್ರಜ್ಞೆಯಿಂದ ಮಹಿಳೆಯೊಬ್ಬರ ಜೀವ ರಕ್ಷಿಸಿದಂತಹ ರೋಮಾಂಚನಕಾರಿ ದೃಶ್ಯವನ್ನು ಕಾಣಬಹುದು.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:


ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಇನ್ನೇನು ನನ್ನ ಸ್ಟಾಪ್ ಬಂತಲ್ವಾ ಎನ್ನುತ್ತಾ, ಸೀಟಿನಿಂದ ಎದ್ದು ಮುಂದೆ ಬರುತ್ತಾಳೆ, ಆದರೆ ಬಾಗಿಲಿನ ಬಳಿ ಬರುತ್ತಿದ್ದಂತೆ, ಆಕೆ ಆಯ ತಪ್ಪಿ ಕೆಳಗೆ ಬಿದ್ದುಬಿಡುತ್ತಾಳೆ, ಅಷ್ಟರಲ್ಲಿ ಅಲ್ಲೇ ಫುಟ್ಬೋರ್ಡ್ ಬಳಿ ನಿಂತಿದ್ದಂತಹ ಕಂಡಕ್ಟರ್ ತನ್ನ ಸಮಯ ಪ್ರಜ್ಞೆಯಿಂದ ಯುವತಿ ಕೆಳಗೆ ಬೀಳುತ್ತಿದ್ದಂತೆ ತಕ್ಷಣ ಆಕೆಯ ಕೂದಲನ್ನು ಹಿಡಿದು ಎಳೆಯುವ ಮೂಲಕ  ಯುವತಿಯ ಪ್ರಾಣವನ್ನು ರಕ್ಷಿಸುವಂತಹ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕೆಸರಿನಲ್ಲಿ ಸಿಲುಕಿಕೊಂಡು ಒದ್ದಾಡಿದ ಪುಟ್ಟ ಆನೆ, ಇವರ ಮಾನವೀಯತೆಗೆ ಒಂದು ಸಲಾಂ 

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 23.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2.4 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ಸ್ ಮಾಡುವ ಮೂಲಕ ಕಂಡಕ್ಟರ್ ಸಾಹೇಬ್ರ ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ʼಆ ಯುವತಿಯ ಜೀವ ಉಳಿಸಿದ ಕಂಡಕ್ಟರ್ ಸಾಹೇಬ್ರಿಗೆ ನನ್ನದೊಂದು ಸಲಾಂʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಡ್ಡಾಯವಾಗಿ ಚಲಿಸುತ್ತಿರುವ ಬಸ್ಸಿನ ಬಾಗಿಲುಗಳನ್ನು ಮುಚ್ಚಬೇಕು, ಇಲ್ಲದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆʼ ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.   ಮತ್ತೊಬ್ಬ  ಬಳಕೆದಾರರು ʼಇವರು ನಿಜವಾದ ಹಿರೋ ಅಂದ್ರೆʼ ಅಂತ ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ