Viral Video: ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಪಾಕಿಸ್ತಾನಿ ಮಹಿಳೆ
ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಫರಾಹ್ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ಏಪ್ರಿಲ್ 24 ರಂದು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಅತಿ ವೇಗದ ಚಾಲನೆಯಿಂದಾಗಿ ಮಹಿಳೆಯೊಬ್ಬಳನ್ನು ಪೊಲೀಸರು ಅಡ್ಡಗಟ್ಟಿದ್ದು, ಸಿಟ್ಟಿಗೆದ್ದ ಮಹಿಳೆ ಅವಾಚ್ಯ ಶಬ್ದಗಳಿಂದ ಬೈದು ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಘಟನೆ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಫರಾಹ್ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ಏಪ್ರಿಲ್ 24 ರಂದು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯು ಜನವರಿ 1, 2024 ರಂದು ಸಂಭವಿಸಿದೆ ಎಂದು ಇಸ್ಲಾಮಾಬಾದ್ ಟ್ರಾಫಿಕ್ ಪೊಲೀಸರು ದೃಢಪಡಿಸಿದ್ದಾರೆ ಮತ್ತು ಆರೋಪಿ ಚಾಲಕಿಯ ಮೇಲೆ ಈಗಾಗಲೇ ಕೇಸು ದಾಖಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಜನವರಿ 2 ರಂದು ನಸೀರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಬಂಧನವನ್ನು ತಪ್ಪಿಸಲು ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ರಾವಲ್ಪಿಂಡಿ ಪೊಲೀಸರು ತಿಳಿಸಿದ್ದರು.
با اثر خاتون نے اوور سپیڈنگ پر روکنے اور چالان کرنے پر ٹریفک وارڈن پر گاڑی چڑھا دی۔ pic.twitter.com/ZSceOWSntT
— Rubab Hayat (@shuglisam) April 22, 2024
ಇದನ್ನೂ ಓದಿ: ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
ಎಸ್‌ಎಸ್‌ಪಿ ಕಾರ್ಯಾಚರಣೆಯ ನೇತೃತ್ವದ ಆರ್‌ಪಿಒ ರಾವಲ್ಪಿಂಡಿ ಬಾಬರ್ ಸರ್ಫ್ರಾಜ್ ಅಲ್ಪಾ ಅವರು ಆರೋಪಿಯನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಿದ್ದರು. ನಸೀರಾಬಾದ್ ಪೊಲೀಸರು ಆಧುನಿಕ ತಂತ್ರಜ್ಞಾನ ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
راولپنڈی پولیس کی کاروائی، موٹروے پولیس کے اہلکار کو گاڑی سے کچلنے والی خاتون گرفتار،
گرفتار ملزمہ کی شناخت فرح کےنام سے ہوئی، ملزمہ نے کارسرکار میں مزاحمت کی اور روکنےکے باوجودپٹرولنگ آفییسر محمدصابر کوگاڑی سےہٹ کیا اور فرار ہو گئی تھی، واقعہ کا مقدمہ موٹروے پولیس کی مدعیت 1/4 pic.twitter.com/KQ6mUHex1v
— Rawalpindi Police (@RwpPolice) April 24, 2024
“ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾವಲ್ಪಿಂಡಿ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ