ಏನೂ ಅರಿಯದ ಪುಟ್ಟ ಮಗುವೊಂದು ಉಸಿರುಗಟ್ಟಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿತ್ತು. ಮನೆಯವರಿಗೆ ಏನೂ ಮಾಡಲಾಗದ ಸಂಕಟ. ಆ ಭಯಂಕರ ಸನ್ನಿವೇಶದಲ್ಲಿ ಪೊಲೀಸ್ ಸಿಬ್ಬಂದಿಯೋರ್ವರು ದೃತಿಗೆಡದೇ ಗಟ್ಟಿ ಮನಸ್ಸಿನಿಂದ ಮಗುವನ್ನು ರಕ್ಷಿಸಿದ್ದಾರೆ. ಏನೂ ಅರಿಯದ ಆ ಪುಟ್ಟ ಮಗು ಬಳಲುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ ಎಂದು ನೆಟ್ಟಿಗರೋರ್ವರು ಹೇಳಿದ್ದಾರೆ. ಮಗು ಪ್ರಾಣಕ್ಕೆ ಅಪಾಯವಾಗದಂತೆ ರಕ್ಷಿಸಿದ ಅಧಿಕಾರಿ ಕೋಡಿ ಅವರಿಗೆ ಶ್ಲಾಘನೆ ವ್ಯಕ್ತವಾಗಿದೆ.
ಮೇ 29ನೇ ತಾರೀಕಿನಂದು ಮಗುವಿಗೆ ಔಷಧ ಹಾಕಲಾಗಿತ್ತು. ಗಂಟಲಲ್ಲಿ ಸಿಲುಕಿಕೊಂಡಿದ್ದ ಔಷಧದಿಂದ ಮಗುವಿಕೆ ಉಸಿರಾಟದ ಸಮಸ್ಯೆ ಉಂಟಾಗತೊಡಗಿತು. ಕೆಲಸ ಗಂಟೆಗಳಲ್ಲಿ ಮಗುವಿನ ಮುಖ ನೇರಳ ಬಣ್ಣಕ್ಕೆ ತಿರುಗಲು ಆರಂಭಿಸಿತು. ಹೀಗಿರುವಾಗ ಮನೆಯವರಿಗೆ ಆತಂಕ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಮನೆಗೆ ಬಂದಿದ್ದ 23 ವರ್ಷದ ಕೋಡಿ ಎಂಬ ಪೊಲೀಸ್ ಅಧಿಕಾರಿ ಮಗುವನ್ನು ರಕ್ಷಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಪಾಟ್ಸ್ವಿಲ್ಲೆ ಅರ್ಕಾನ್ಸಾಸ್ ಪೊಲೀಸ್ ಇಲಾಖೆ, ಅಧಿಕಾರಿ ಕೋಡಿಯವರು ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೋಡಿ ಅವರು ಮಗುವನ್ನು ತಲೆಗೆಳಗಾಗಿ ತಿರುಗಿಸಿ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಔಷಧ ಹೊರಬರುವಂತೆ ಮಾಡಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಮಗುವಿನ ಬಾಯಿಯಿಂದ ಸಿಲುಕಿಕೊಂಡಿದ್ದ ಎಲ್ಲಾ ಔಷಧಿ ಹೊರ ಬಂದಿದೆ. ಇದರಿಂದ ಮಗು ಮೊದಲು ಅಳಲು ಪ್ರಾರಂಭಿಸಿತು. ಆ ಬಳಿಕ ಉಸಿರುಗಟ್ಟುವಿಕೆಯಿಂದ ಹೊರಬಂದಿದೆ. ಬಳಿಕ ಮಗು ಮೊದಲಿನಂತೆಯೇ ನಗುತ್ತಾ ಇರುವುದನ್ನು ಕಂಡ ಪೋಷಕರು ಸಂತೋಷಗೊಂಡಿದ್ದಾರೆ.
ಈ ಹಿಂದೆ ಕೋಡಿ ಅವರು ಇದೇ ರೀತಿಯ ಘಟನೆಯೊಂದನ್ನು ಎದುರಿಸಿದ್ದರು. ಅವರ ಸ್ವಂತ ಮಗಳಿಗೆ ಗಂಟಲಲ್ಲಿ ಉಸಿರುಗಟ್ಟಿದ್ದ ಸಂದರ್ಭದಲ್ಲಿ ಈ ರೀತಿ ಮಾಡಿ ಯಶಸ್ವಿಯಾಗಿದ್ದರು.
‘ನನಗೆ ಒಂದು ಕ್ಷಣ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಕೈ ಕಾಲುಗಳೆಲ್ಲ ನಡುಗುತ್ತಿತ್ತು. ಒಂದು ಕಡೆ ಅಳು ಇನ್ನೊಂದು ಕಡೆ ಸಂಕಟ ಈ ಎರಡರ ಮಧ್ಯೆ ಬೇರೆ ಯೋಚನೆಗಳೇ ಬರುತ್ತಿರಲಿಲ್ಲ. ಮುಗು ಮೊದಲಿನಂತೆಯೇ ಆಗಿದ್ದನ್ನು ಕಂಡು ಬಹಳ ಸಂತೋಷ ವಾಯಿತು. ನನ್ನ ಜೀವವೇ ಹೋದಷ್ಟು ಸಂಕಟದಲ್ಲಿದ್ದ ನನಗೆ ಸಂತೋಷದ ಕಣ್ಣೀರು ಬಂತು. ಕೋಡಿ ಅವರಿಗೆ ನಾವು ಎಂದೂ ಕೃತಜ್ಞರಾಗಿರುತ್ತೇವೆ ಎಂದು ಪೋಷಕರು ಸ್ಥಳೀಯ ಸುದ್ದಿ ಸಂಸ್ಥೆಯೊಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ನೋಡನೋಡುತ್ತಿದ್ದಂತೆ ಬಾಯ್ಬಿಟ್ಟ ಭೂಮಿ; ಪಾತಾಳಕ್ಕೆ ಬಿದ್ದ ಮೂರು ಕಾರುಗಳು, ಭಯಾನಕ ದೃಶ್ಯ ಸೆರೆ
Viral Video: ಸಮವಸ್ತ್ರದಲ್ಲೇ ಹಿಂದಿ ಹಾಡಿಗೆ ಆ್ಯಕ್ಟಿಂಗ್; ಜವಾಬ್ದಾರಿ ಮರೆತ ಪೊಲೀಸರಿಗೆ ಶೋಕಾಸ್ ನೋಟಿಸ್