Viral Video: ತುಮ್​ ಸೇ ಹಾಯ್​; ಮುಂಬೈನ ಭಾರೀ ಮಳೆಯಲ್ಲಿ ಜೋಡಿಯ ನೃತ್ಯ

Mumbai Rains : ಮಳೆ ಮತ್ತು ವಯಸ್ಸು ಯಾರಿಗೂ ನಿಲ್ಲುವುದಿಲ್ಲ, ಸಿಕ್ಕಲ್ಲಿ ಸೀರುಂಡೆ. ಮಜಾ ಮಾಡಿ! ಎಂದು ಈ ಜೋಡಿಯನ್ನು ಹುರಿದುಂಬಿಸುತ್ತಿದೆ ನೆಟ್​ಮಂದಿ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

Viral Video: ತುಮ್​ ಸೇ ಹಾಯ್​; ಮುಂಬೈನ ಭಾರೀ ಮಳೆಯಲ್ಲಿ ಜೋಡಿಯ ನೃತ್ಯ
ಮುಂಬೈ ಮಳೆಯಲ್ಲಿ ಫುಟ್​ಪಾತ್​ ಮೇಲೆ ಡ್ಯಾನ್ಸ್ ಮಾಡುತ್ತಿರುವ ಜೋಡಿ.

Updated on: Jul 10, 2023 | 12:40 PM

Rain : ಮುಂಬೈ ಮಳೆ ಎಂದರೆ ಕೇಳಬೇಕೆ? ಇಂಥ ಮಹಾಮಳೆಯಲ್ಲಿ, ಫುಟ್​ಪಾತ್​ ಮೇಲೆ ಈ ಜೋಡಿಯೊಂದು  ಶೃಂಗಾರಮಯ ಸಿನೆಮಾ ಹಾಡೊಂದಕ್ಕೆ ಹೆಜ್ಜೆಹಾಕಿದೆ. ಹಿಂದೆ ಕಾರು, ವಾಹನಗಳು ಓಡಾಡುತ್ತಿವೆ. ಮೇಲೆ ಧೋ ಮಳೆ. ಈ ಜೋಡಿ ಮಾತ್ರ ತನ್ನ ಲೋಕದಲ್ಲಿ. ಶಾಹೀದ್ ಕಪೂರ್ ಮತ್ತು ಕರೀನಾ ಕಪೂರ್​ ನಟಿಸಿದ ಜಬ್ ವಿ ಮೆಟ್ (Jab we met) ಸಿನೆಮಾದ ತುಮ್​ ಸೇ ಹಾಯ್​ (Tum Se Hi) ಹಾಡು ಇದಾಗಿದೆ. ಈ ರೊಮ್ಯಾಂಟಿಕ್​ ಹಾಡನ್ನು ಬರೆದವರು ಇರ್ಷಾದ್ ಕಾಮಿಲ್ ಮತ್ತು ಸಂಗೀತ ಸಂಯೋಜನೆ ಪ್ರೀತಮ್​, ಹಾಡಿದವರು ಮೋಹಿತ್ ಚೌಹಾನ್​.

ಈ ವಿಡಿಯೋ ಅನ್ನು ಮೂರು ದಿನಗಳ ಹಿಂದೆ ಟ್ವೀಟ್ ಮಾಡಲಾಗಿದೆ. ಈತನಕ 2.2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈತನಕ ಸುಮಾರು 4,000 ಜನರು ಇಷ್ಟಪಟ್ಟಿದ್ದಾರೆ. 500ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಆಹಾ ಈ ರೀತಿಯ ಪ್ರೀತಿ ಉಸಿರಾಡುತ್ತಿದೆಯಲ್ಲ! ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಇವರನ್ನು ನೋಡಿ ನನಗೂ ಹೀಗೆ ಮಳೆಯಲ್ಲಿ ನರ್ತಿಸಬೇಕೆನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಈ ಹಾಡು ಮತ್ತು ಈ ಮಳೆ ಯಾರ ಹೃದಯವನ್ನೂ ಬೆಚ್ಚಗಾಗಿಸುತ್ತದೆ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಲಿಸಾ; ಕುತೂಹಲ ಕೆರಳಿಸಿರುವ ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್

ನಾನು ನನ್ನ ಹುಡುಗಿಯೊಂದಿಗೆ ಈ ಹಾಡನ್ನು ಮರುಸೃಷ್ಟಿಬೇಕು ಎಂದುಕೊಳ್ಳುತ್ತಿದ್ದೇನೆ ಆಕೆ ಬಿಝಿ ಇದ್ಧಾಳೆ ಎಂದು ಇನ್ನೂ ಒಬ್ಬರು ಹೇಳಿದ್ಧಾರೆ. ನೀವು ಮುಂದೆ ಮದುವೆಯಾದ ನಂತರವೂ ಹೀಗೆಯೇ ಮಳೆಯಲ್ಲಿ ನರ್ತಿಸುತ್ತೀರಾ? ಎಂದು ಮತ್ತೊಬ್ಬರು ಕೇಳಿದ್ದಾರೆ. ಎರಡು ತಾಸಿನ ನಂತರ ಇವರಿಬ್ಬರೂ ಖಂಡಿತ ನೆಗಡಿ ಜ್ವರದಿಂದ ಬಳಲುತ್ತಾರೆ ನೋಡಿ ಬೇಕಿದ್ದರೆ! ಎಂದಿದ್ದಾರೆ ಮಗದೊಬ್ಬರು. ಅವರ ಖುಷಿ ಅವರ ನೋವು ಅವರದು. ನಿಮಗೇನು ಸಮಸ್ಯೆ? ಎಂದು ಮತ್ತೊಬ್ಬರು ಈ ಪ್ರತಿಕ್ರಿಯೆಗೆ ಪ್ರಶ್ನಿಸಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ