Viral Video: ಬೆಟ್ಟದ ಮೇಲೆ ಗಾಳಿಯಲ್ಲಿ  ತೇಲುತ್ತಾ ದಂಪತಿಗಳಿಬ್ಬರ ರೊಮ್ಯಾಂಟಿಕ್ ಡಿನ್ನರ್ ಡೇಟ್

ಪ್ರೇಮಿಗಳು, ದಂಪತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಸುಂದರ ಕ್ಷಣವನ್ನು ಜೊತೆಯಾಗಿ ಕಳೆಯಲು  ಆಗಾಗ್ಗೆ ರೊಮ್ಯಾಂಟಿಕ್ ಡಿನ್ನರ್ ಡೇಟ್ ಅಥವಾ ಔಟಿಂಗ್ ಹೋಗುತ್ತಿರುತ್ತಾರೆ. ಆದರೆ ಇಲ್ಲೊಂದು ದಂಪತಿ ಡಿನ್ನರ್ ಡೇಟ್ ಗಾಗಿ ರೆಸ್ಟೋರೆಂಟ್ ಗಳಿಗೆ ಹೋಗುವುದು ಕಾಮನ್,  ನಾವು ಸ್ವಲ್ಪ ಡಿರ್ಫೆಂಟ್ ಎನ್ನುತ್ತಾ ಬೆಟ್ಟದ ಮೇಲೆ  ಗಾಳಿಯಲ್ಲಿ ತೇಲಾಡುವ   ರೊಮ್ಯಾಂಟಿಕ್ ಡಿನ್ನರ್ ಡೇಟ್ ಅರೇಂಜ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಬಹುಶಃ ಇದೇ ಅವರ ಕೊನೆಯ ಡೇಟ್ ಆಗಿರಬೇಕು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.  

Viral Video: ಬೆಟ್ಟದ ಮೇಲೆ ಗಾಳಿಯಲ್ಲಿ  ತೇಲುತ್ತಾ ದಂಪತಿಗಳಿಬ್ಬರ ರೊಮ್ಯಾಂಟಿಕ್ ಡಿನ್ನರ್ ಡೇಟ್
ವೈರಲ್​​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2024 | 2:27 PM

ನವ ದಂಪತಿಗಳು ಅಥವಾ ಪ್ರೇಮಿಗಳು ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಬಯಸುವುದು ಸಹಜ. ಹೀಗೆ ಸಂಗಾತಿಗಳು ತಮ್ಮ ಬಿಡುವಿಲ್ಲದ ಸಮಯದಲ್ಲೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು, ಸಂಬಂಧವನ್ನು ಇನ್ನಷ್ಟು ಬಲಪಡಿಸಬೇಕೆಂದು ಆಗಾಗ್ಗೆ ಡಿನ್ನರ್ ಡೇಟ್, ಲಾಂಗ್ ರೈಡ್, ಔಟಿಂಗ್ ಅಂತ ಹೋಗುತ್ತಿರುತ್ತಾರೆ. ಸಾಮಾನ್ಯವಾಗಿ ಡಿನ್ನರ್ ಡೇಟ್ ಗಾಗಿ 5 ಸ್ಟಾರ್ ಹೋಟೆಲ್ ಇಲ್ಲವೇ ತಮ್ಮ ನೆಚ್ಚಿನ ಫುಡ್ ಸ್ಪಾಟ್ಗಳಿಗೆ ಹೋಗುತ್ತಾರೆ.   ಇಲ್ಲೊಂದು ದಂಪತಿಗಳು ನಾವು ಸ್ವಲ್ಪ ಡಿರ್ಫೆಂಟ್ ಎನ್ನುತ್ತಾ ಬೆಟ್ಟದ ಮೇಲೆ ಗಾಳಿಯಲ್ಲಿ ತೇಲಾಡುವ  ಡಿನ್ನರ್ ಡೇಟ್  ಅರೇಂಜ್ ಮಾಡಿದ್ದಾರೆ. ಈ ಕಸರತ್ತನ್ನು ಕಂಡು ಇದ್ಯಾವ ಬಗೆಯ ಡಿನ್ನರ್  ಡೇಟ್ ಎಂದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು @avioneta_divertida ಎಂಬ ಹೆಸರಿನ ಇನ್ಸ್ಟಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರೊಮ್ಯಾಂಟಿಕ್ ಡಿನ್ನರ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ:


ವೈರಲ್ ವಿಡಿಯೋದಲ್ಲಿ ದಂಪತಿಗಳಿಬ್ಬರು ಬೆಟ್ಟದ ಮೇಲೆ ತೇಲಾಡುವ ಡಿನ್ನರ್ ಡೇಟ್ ಅರೇಂಜ್ ಮಾಡಿರುವುದನ್ನು ಕಾಣಬಹುದು.  ಬೆಟ್ಟದ ತುತ್ತ ತುದಿಯಲ್ಲಿ  ರೋಪ್ ವೇ ಒಂದರಲ್ಲಿ ಟೇಬಲ್ ಸೆಟ್ಅಪ್ ಇಟ್ಟು ನಂತರ  ಟೇಬಲ್ ಮೇಲೆ ತರಹೇವಾರಿ ಫುಡ್ ಇಟ್ಟು,  ದಂಪತಿಗಳನ್ನು ಕೂರಿಸಲಾಗುತ್ತದೆ. ಅಲ್ಲಿದ್ದ ಇತರರರು ಜೋರಾಗಿ ಚಪ್ಪಾಳೆ ತಟ್ಟಿ, ನಂತರ ಮೆಲ್ಲಗೆ ಆ ರೋಪ್  ಅನ್ನು ತಳ್ಳುತ್ತಾರೆ. ಹೀಗೆ ಭಯದಲ್ಲಿಯೇ  ದಂಪತಿಗಳು ರೋಪ್ ವೇ ಯಲ್ಲಿ ರೊಮ್ಯಾಂಟಿಕ್ ಹಾಗೇನೇ ಭಯದ ಡಿನ್ನರ್ ಡೇಟ್ ಮಾಡಿದ್ದಾರೆ.

ಇದನ್ನೂ ಓದಿ: ಹೆಂಡತಿ ಗರ್ಭಿಣಿ ಅರ್ಜೆಂಟ್ 5,000 ರೂ ನೀಡಿ ಸರ್, ಸ್ವಿಗ್ಗಿ ಡೆಲಿವರಿ ಏಜೆಂಟ್​​​ನಿಂದ ಹೊಸ ಬಗೆಯ ಸ್ಕ್ಯಾಮ್  

ಮಾರ್ಚ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 60.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.5 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಕನಿಷ್ಟ ಪಕ್ಷ ಸುರಕ್ಷತೆಯ ದೃಷ್ಟಿಯಿಂದ ಅವರಿಬ್ಬರಿಗೆ ಸೇಫ್ಟಿ ಬೆಲ್ಟ್ ಹಾಕಬೇಕಿತ್ತುʼ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ಇದು ಅವರ ಕೊನೆಯ ಡಿನ್ನರ್ ಡೇಟ್ ಆಗಿರಬೇಕುʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸಂತೋಷದ ಜೊತೆಜೊತೆಗೆ ಒತ್ತಡದ ಡಿನ್ನರ್ ಡೇಟ್ʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಇವರ ಹುಚ್ಚುತನವನ್ನು ಕಂಡು ಶಾಕ್ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

Published On - 2:27 pm, Wed, 20 March 24