AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹೆಂಡತಿ ಗರ್ಭಿಣಿ ಅರ್ಜೆಂಟ್ 5,000 ರೂ ನೀಡಿ ಸರ್, ಸ್ವಿಗ್ಗಿ ಡೆಲಿವರಿ ಏಜೆಂಟ್​​​ನಿಂದ ಹೊಸ ಬಗೆಯ ಸ್ಕ್ಯಾಮ್  

ಕೆಲವೊಬ್ಬರು ಜನರಿಂದ ಹಣ ದೋಚಲು ಹಲವಾರು ರೀತಿಯ ಸ್ಕ್ಯಾಮ್ ಗಳನ್ನು ನಡೆಸುತ್ತಿರುತ್ತಾರೆ. ಇದೀಗ ಅದೇ ರೀತಿ ಸ್ವಿಗ್ಗಿ ಏಜೆಂಟ್ ಒಬ್ಬಾತನ  ಸ್ಕ್ಯಾಮ್ ಕುರಿತ ಸುದ್ದಿಯೊಂದು ಹರಿದಾಡುತ್ತಿದ್ದು, ಆತ ತನ್ನ ಪತ್ನಿ ತುಂಬು ಗರ್ಭಿಣಿ ಆಕೆಯ  ಆಪರೇಷನ್ ಗಾಗಿ 5,000 ರೂ ಹಣವನ್ನು ನೀಡಿ ಎಂದು ಎಮೋಷನಲ್ ಬ್ಲ್ಯಾಕ್ಮೇಲ್ ಮಾಡಿ ಗ್ರಾಹಕರೊಬ್ಬರ ಕೈಯಿಂದ  ಹಣ ಪೀಕಲು ಯತ್ನಿಸಿದ್ದಾನೆ. 

Viral: ಹೆಂಡತಿ ಗರ್ಭಿಣಿ ಅರ್ಜೆಂಟ್ 5,000 ರೂ ನೀಡಿ ಸರ್, ಸ್ವಿಗ್ಗಿ ಡೆಲಿವರಿ ಏಜೆಂಟ್​​​ನಿಂದ ಹೊಸ ಬಗೆಯ ಸ್ಕ್ಯಾಮ್  
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Mar 20, 2024 | 12:14 PM

Share

ಪತ್ರಿನಿತ್ಯ ಒಂದಲ್ಲಾ ಒಂದು ಬಗೆಯ ಸ್ಕ್ಯಾಮ್ ಗಳು ನಡೆಯುತ್ತಲೇ ಇರುತ್ತವೆ. ಆನ್ಲೈನ್ ಸ್ಕ್ಯಾಮ್ ಗಳು ಒಂದೆಡೆಯಾದರೆ,  ಕೆಲವರಂತೂ ಸುಳ್ಳು ಕಥೆಗಳನ್ನು ಹೇಳಿಕೊಂಡು ಜನರನ್ನು ಮಂಗ ಮಾಡಿ ಹಣವನ್ನು ಪೀಕುತ್ತಿರುತ್ತಾರೆ. ಈ ಬಗ್ಗೆ ಸಾರ್ವಜನಿಕರು ಎಷ್ಟು ಜಾಗೃತರಾಗಿದ್ದರೂ ಕಮ್ಮಿಯೇ.  ಈ ಹಿಂದೆ ಕ್ಯಾಬ್  ಡ್ರೈವರ್ ಒಬ್ಬಾತ ಆತ್ಮಹತ್ಯೆ ನಾಟಕವನ್ನಾಡಿ ಹಣ ಪೀಕಲು ಯತ್ನಿಸಿದ ಬಗ್ಗೆಖ್ಯಾತ ಯೂಟ್ಯೂಬರ್ ಅನೀಶಾ ದೀಕ್ಷಿತ್ ಹಂಚಿಕೊಂಡಿದ್ದರು. ಇದೀಗ ಮತ್ತೊಂದು ಅಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸ್ವಿಗ್ಗಿ ಡೆಲಿವರಿ ಏಜೆಂಟ್ ಸುಳ್ಳು ಕಥೆ ಹೇಳಿ ಗ್ರಾಹಕರೊಬ್ಬರ ಕೈಯಿಂದ ಹಣ ಪೀಕಲು ಯತ್ನಿಸಿದ್ದಾನೆ. ಈ ಕುರಿತ ಸ್ಟೋರಿಯನ್ನು ಅವರು ಆನ್ಲೈನ್ ಫ್ಲಾಟ್ಫಾರ್ಮ್ ರೆಡ್ಡಿಡ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಗ್ರಾಹಕರೊಬ್ಬರ ಮನೆಗೆ ಫುಡ್ ಡೆಲಿವರಿ ಮಾಡಲೆಂದು ಬಂದಿದ್ದ ಸ್ವಿಗ್ಗಿ ಡೆಲಿವರಿ ಏಜೆಂಟ್ ನನ್ನ ಹೆಂಡತಿ ಗರ್ಭಿಣಿ, ಆಕೆಯ ಆಪರೇಷನ್ ಗೆ  ಅರ್ಜೆಂಟ್ ಆಗಿ 5,000 ರೂ. ಹಣ ಬೇಕೆಂದು ಸುಳ್ಳು ಕಥೆಯನ್ನು ಹೇಳುತ್ತಾ ಎಮೋಷನ್ ಬ್ಲ್ಯಾಕ್ಮೇಲ್ ಮಾಡಿ ಹಣ ಪೀಕಲು ಯತ್ನಿಸಿದ್ದಾನೆ. ಈ ಆಘಾತಕಾರಿ ಘಟನೆಯ ಸ್ಟೋರಿಯನ್ನು  ಆ ಗ್ರಾಹಕ ರೆಡ್ಡಿಡ್ ನಲ್ಲಿ ಹಂಚಿಕೊಂಡಿದ್ದಾರೆ.

ಗುರುಗ್ರಾಮದ  ಸ್ವಿಗ್ಗಿ ಏಜೆಂಟ್ ಸುಳ್ಳು ಕಥೆ ಹೇಳುವ ಮೂಲಕ ವಂಚನೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ವ್ಯಕ್ತಿಯೊಬ್ಬರು ಆನ್ಲೈನ್ ಅಲ್ಲಿ ಬರೆದುಕೊಂಡಿದ್ದಾರೆ.  ಅವರು ಹೇಳುತ್ತಾರೆ,  ಗುರುಗ್ರಾಮದಲ್ಲಿ ಇಂತಹ ಸ್ಕ್ಯಾಮ್ ನಡಿತಿದೆ. ಬೇರೆಡೆಯೂ ಇದೇ ರೀತಿಯ ಸ್ಕ್ಯಾಮ್ ಗಳು ನಡೆಯುತ್ತಿದೆಯೇ ಎಂಬುದರ  ಬಗ್ಗೆ ಗೊತ್ತಿಲ್ಲ. ನಾನು ನನ್ನ ಆರ್ಡರ್ ಅನ್ನು ತೆಗೆದುಕೊಳ್ಳಲು ಬಂದಾಗ ಸ್ವಿಗ್ಗಿ ಏಜೆಂಟ್ ಅಸಹಾಯಕನಾಗಿ ಬೆವರುತ್ತಾ ಬಾಗಿಲ ಬಳಿ ನಿಂತಿದ್ದನು. ನಾನು ಬಾಗಿಲು ತೆರೆದ ತಕ್ಷಣ, ಆತ ನನ್ನ ಹೆಂಡತಿ ತುಂಬು ಗರ್ಭಿಣಿ, ಆಕೆ ಆಸ್ಪತ್ರೆಯಲ್ಲಿದ್ದಾಳೆ. ಆಪರೇಷನ್ ಗೆ 5000 ರೂಪಾಯಿ ಬೇಕು ಎಂದು ಭಿಕ್ಷೆ ಬೇಡಲು ಪ್ರಾರಂಭಿಸಿದನು. ಜೊತೆಗೆ ಈ ಹಣವನ್ನು ನಾಳೆ ನನಗೆ ಸಂಬಳ ಬಂದ ಮೇಲೆ ನೀಡುವುದಾಗಿ ಕೂಡಾ ಹೇಳಿದನು. ಅಷ್ಟೇ ಅಲ್ಲದೇ ಆತನ ಬೈಕ್ ಕೀಯನ್ನು ಒತ್ತಾಯ ಪೂರ್ವಕವಾಗಿ ನನ್ನ ಕೈಯಲ್ಲಿಟ್ಟು ದಯವಿಟ್ಟು ಹಣ ಕೊಡಿ ಎಂದು ಕೇಳಿಕೊಂಡನು.

ಇದನ್ನೂ ಓದಿ: ತಂದೆಯ ತೋಳಿನಲ್ಲಿದ್ದ ಮಗು, ಕೈ ಜಾರಿ ಮೂರನೇ ಮಹಡಿಯಿಂದ ಬಿದ್ದು ಸಾವು

ಪಾಪ ಹಣದ ಅಗತ್ಯ ತುಂಬಾನೇ ಇರಬೇಕೆಂದು ನಾನು ಆನ್ಲೈನ್ ಪೇಮೆಂಟ್ ಮಾಡಲು ಆತನ ಬಳಿ ಫೋನ್ ನಂಬರ್ ಕೇಳಿದೆ. ಆ ಸಂದರ್ಭದಲ್ಲಿ ಆತ ಫೋನ್ ನಂಬರ್ ನೀಡದೆ ಒಂದು ನಿರ್ಧಿಷ್ಟ ಕ್ಯೂಆರ್ ಕೋಡ್ ನೀಡಿ ಇದಕ್ಕೆ ಪಾವತಿ ಮಾಡಿ ಎಂದು ಕೇಳಿಕೊಂಡ. ಆಗ ಅವನ ಮುಖದ ಹಾವಭಾವ ಗಮನಿಸಿ ಈತ ಸುಳ್ಳು ಹೇಳುತ್ತಿದ್ದಾನೆ ಎಂದು ಗೊತ್ತಾಗಿ ಸ್ಕ್ಯಾನರ್ ಫೋಟೋ ತೆಗೆದು ಮತ್ತೆ ಹಣ ಪಾವತಿ ಮಾಡುತ್ತೇನೆ ಎಂದು ಡೋರ್ ಕ್ಲೋಸ್ ಮಾಡಿದೆ.  ಸ್ವಲ್ಪ ಹೊತ್ತಿನ ಬಳಿಕ ಆತ ಜೋರಾಗಿ ಬಾಗಿಲು ಬಡಿದು ಹಣ ಕೊಡಿ ಎಂದು ಕೇಳಿದ. ಇವನು ಪಕ್ಕಾ ಸ್ಕ್ಯಾಮ್ ಮಾಡುತ್ತಿದ್ದಾನೆ ಎಂದು ಗೊತ್ತಾಗಿ ಸೆಕ್ಯುರಿಟಿ ಗಾರ್ಡ್ ಗೆ ಕರೆ ಮಾಡಿ ಆತನನ್ನು ಹೊರ ಕಳಿಸುವಂತೆ ಹೇಳಿದೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಆಘಾತಕಾರಿ ಘಟನೆಯ ಕುರಿತು ಸ್ವಿಗ್ಗಿಗೆ ದೂರು ನೀಡಿದ್ದು,  ಅವರು ಈ ಬಗ್ಗೆ ಸೂಕ್ತ ಕ್ರಮ  ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಆ ವ್ಯಕ್ತಿ  ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ