AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಯುದ್ದಕ್ಕೂ ಲಿಪ್ ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ; ವಿಡಿಯೋ ವೈರಲ್​​​​

ವಿಡಿಯೋದಲ್ಲಿ ಯುವಕನೊರ್ವ ಬೈಕ್​ ಓಡಿಸುತ್ತಿದ್ದು, ಆತನ ಹಿಂಭಾಗದಲ್ಲಿ ಜೋಡಿಯೊಂದು ಕುಳಿತಿರುವುದನ್ನು ಕಾಣಬಹುದು. ಹಿಂದೆ ಇದ್ದ ಜೋಡಿ ಪರಸ್ಪರ ತುಟಿಗೆ ಮುತ್ತಿಡುತ್ತಾ ರೈಡ್​​ ಎಂಜಾಯ್​​ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವೈರಲ್​​ ವಿಡಿಯೋ ಇಲ್ಲಿದೆ ನೋಡಿ.

ರಸ್ತೆಯುದ್ದಕ್ಕೂ ಲಿಪ್ ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ; ವಿಡಿಯೋ ವೈರಲ್​​​​
ಲಿಪ್ ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ
ಅಕ್ಷತಾ ವರ್ಕಾಡಿ
|

Updated on: Aug 03, 2024 | 4:26 PM

Share

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳು ರೊಮ್ಯಾನ್ಸ್ ನಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಪರಸ್ಪರ ಚುಂಬಿಸುತ್ತಾ ಸುತ್ತ ಮುತ್ತಲು ಜನರಿರುವುದನ್ನೇ ಮರೆತು ಬಿಡುತ್ತಾರೆ. ಇದಲ್ಲದೇ ಕೆಲವೊಂದಿಷ್ಟು ಜೋಡಿಗಳು ಚಲಿಸುತ್ತಿರುವ ಬೈಕ್​​​​, ಕಾರುಗಳಲ್ಲಿಯೂ ಅಸಭ್ಯವಾಗಿ ವರ್ತಿಸಿ, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಪಜೀತಿಗೆ ಸಿಕ್ಕಿಕೊಂಡಿರುವ ಘಟನೆಗಳೂ ಇವೆ. ಇದೀಗಾ ಅಂತದ್ದೇ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಜೊತೆಗೆ ಅಸಭ್ಯ ನಡೆಯ ಎಲ್ಲಾ ಪ್ರಕರಣ ದಾಖಲಿಸಿ ಈ ಜೋಡಿಗೆ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

raja_i_n_s_t_5464 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಯುವಕನೊರ್ವ ಬೈಕ್​ ಓಡಿಸುತ್ತಿದ್ದು, ಆತನ ಹಿಂಭಾಗದಲ್ಲಿ ಜೋಡಿಯೊಂದು ಕುಳಿತಿರುವುದನ್ನು ಕಾಣಬಹುದು. ಹಿಂದೆ ಇದ್ದ ಜೋಡಿ ಪರಸ್ಪರ ತುಟಿಗೆ ಮುತ್ತಿಡುತ್ತಾ ರೈಡ್​​ ಎಂಜಾಯ್​​ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಕಾರಿನಲ್ಲಿ ಸ್ಟಂಟ್ ಮಾಡಿಕೊಂಡು ಹೋಗಿ ಸ್ಕೂಟರ್‌ ಡಿಕ್ಕಿ ಹೊಡೆದ ಯುವಕರು; ಮಹಿಳೆ ಸಾವು, ಮಗು ಸ್ಥಿತಿ ಗಂಭೀರ

ವಿಡಿಯೋ ಹಂಚಿಕೊಂಡ ಒಂದೇ ವಾರದಲ್ಲಿ 28 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಜೋಡಿಯದ್ದು ಅಸಭ್ಯ ವರ್ತನೆ ಇದೇ ಮೊದಲೇನಲ್ಲಾ. ಸೋಶಿಯಲ್​​ ಮೀಡಿಯಾಗಳಲ್ಲಿ ಫೇಮಸ್​​ ಆಗಲು ಈ ಜೋಡಿ ಸಾಕಷ್ಟು ಭಾರೀ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ವಿವಿಧ ವಿಡಿಯೋಗಳಲ್ಲಿ ಕಾಣಬಹುದು. ಸದ್ಯ ವಿಡಿಯೋ ಎಲ್ಲೆಡೆ ವೈರಲ್​​​ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು