Viral: ವಿದೇಶಿ ಆವಕಾಡೊ ಹಣ್ಣನ್ನು ದೇವರಿಗೆ ಅರ್ಪಿಸಿದ ಬೆಂಗಳೂರಿನ ವ್ಯಕ್ತಿ, ನೆಟ್ಟಿಗರು ಶಾಕ್
ದೇವರ ಪೂಜೆಗೆ ಬಾಳೆಹಣ್ಣು, ಸೇಬು ಹಾಗೂ ದಾಳಿಂಬೆ ಸೇರಿದಂತೆ ಇನ್ನಿತ್ತರ ಹಣ್ಣುಗಳನ್ನು ಇಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ದುಬಾರಿಯಾಗಿರುವ ಆವಕಾಡೊ ಹಣ್ಣನ್ನು ದೇವರಿಗೆ ಅರ್ಪಿಸಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಹಿಂದೂ ಧರ್ಮವೆಂದರೆ ಅದು ಶಾಶ್ವತವಾದ ಸನಾತನ ಧರ್ಮವಾಗಿದೆ. ಈ ಹಿಂದೂಗಳ ಹಬ್ಬ, ಹರಿದಿನಗಳು, ಆಚರಣೆ, ವಿಚಾರಗಳಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಗಳಿಗೆ ಹೋಲಿಸಿದರೆ ವ್ಯತ್ಯಾಸವನ್ನು ಕಾಣಬಹುದು. ಸಾಮಾನ್ಯವಾಗಿ ಈ ಹಿಂದೂ ಧರ್ಮದಲ್ಲಿ ಪೂಜೆಯ ವೇಳೆಯಲ್ಲಿ ದೇವರಿಗೆ ಅಕ್ಕಿ, ತೆಂಗಿನಕಾಯಿ, ಹಣ್ಣುಗಳು, ಹೂವುಗಳು ಹಾಗೂ ಸಿಹಿತಿಂಡಿಗಳನ್ನು ಅರ್ಪಿಸಲಾಗುತ್ತದೆ. ಆದರೆ ಇಲ್ಲೊಬ್ಬರು ತಮ್ಮ ಮನೆಯಲ್ಲಿ ದೇವರ ಪೂಜೆಗೆ ಆವಕಾಡೊ ಹಣ್ಣನ್ನು ಅರ್ಪಿಸಿರುವ ಫೋಟೋವೊಂದು ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಹೌದು, ಬೆಂಗಳೂರು ಮೂಲದ ವ್ಯಕ್ತಿಯಾಗಿರುವ ಧರ್ಮೇಶ್ ಬಾ ಅವರು, ತಮ್ಮ ಈ ಹೆಸರಿನ ಎಕ್ಸ್ ಖಾತೆಯಲ್ಲಿ ಈ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ದಲ್ಲಿ ಮನೆಯ ದೇವರ ಫೋಟೋದ ಮುಂದೆ ಅವರ ಕುಟುಂಬವು ದೇವರಿಗೆ ಅರ್ಪಿಸಿದ ಎರಡು ಆವಕಾಡೊಗಳ ಚಿತ್ರವನ್ನು ಕಾಣಬಹುದು.
Parents are in town and their offerings to God have been upgraded to avocado from bananas. pic.twitter.com/vSgnsjFYor
— Dharmesh Ba (@dharmeshba) July 30, 2024
ಈ ಫೋಟೋದೊಂದಿಗೆ ‘ನಮ್ಮ ಪಾಲಕರು ಊರಿನಲ್ಲಿದ್ದಾರೆ ಮತ್ತು ಅವರು ದೇವರಿಗೆ ಅರ್ಪಿಸುವುದನ್ನು ಬಾಳೆಹಣ್ಣಿನಿಂದ ಆವಕಾಡೊಗೆ ಅಪ್ಗ್ರೇಡ್ ಮಾಡಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರ ಪೋಸ್ಟ್ ಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಜತೆಗೆ UPSC ಪರೀಕ್ಷೆ ಬರೆದು ಐಎಎಸ್-ಐಪಿಎಸ್ ಅಧಿಕಾರಿಗಳಾದ ಮೂವರು ಪ್ರಾಣ ಸ್ನೇಹಿತರು
ಈ ಫೋಟೋವೊಂದು ಐದು ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗರೊಬ್ಬರು, ‘ಅನವಶ್ಯಕ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಹಳೆಯ ಆಚರಣೆಗೆ ನಿರುಪಯುಕ್ತ ಮತ್ತು ಇದೊಂದು ಮನರಂಜನಾ ‘ಅಪ್ಗ್ರೇಡ್’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ಆವಕಾಡೊ ಅರ್ಪಿಸುವ ಮೂಲಕ ಭಕ್ತಿಯ ಮಟ್ಟ ಮೇಲಕ್ಕೆ ಹೋಗಿದೆ’ ಎಂದು ವ್ಯಂಗ್ಯವಾಗಿ ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ