Viral Video: ಜೆಸಿಬಿಯಲ್ಲಿ ಕುಳಿತು ಆರತಕ್ಷತೆಗೆ ಬಂದ ನವ ಜೋಡಿ; ಕೆಲವೇ ಕ್ಷಣದಲ್ಲಿ ಎಲ್ಲವೂ ಹೇಗೆ ಬದಲಾಯ್ತು ಗೊತ್ತಾ?

ಪಾರ್ಟಿಯಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಕೈ ಬೀಸುತ್ತಾ ಮುನ್ನೆಡೆಯುವಾಗ ಏಕಾಏಕಿ ಜೆಸಿಬಿಯಲ್ಲಿ ದಂಪತಿ ಕುಳಿತ ಜಾಗ ಕೆಳಗಿನ ಕಡೆ ವಾಲಿದೆ ಇದರಿಂದಾಗಿ ಪಾರ್ಟಿಯಲ್ಲಿನ ಟೇಬಲ್ ಮೇಲೆ ಇಬ್ಬರು ಒಂದೇ ಸಮನೆ ಬಿದ್ದಿದ್ದಾರೆ. ಮಹಾ ಪತನ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಕಮೆಂಟ್​ ಮಾಡಿದ್ದಾರೆ.

Viral Video: ಜೆಸಿಬಿಯಲ್ಲಿ ಕುಳಿತು ಆರತಕ್ಷತೆಗೆ ಬಂದ ನವ ಜೋಡಿ; ಕೆಲವೇ ಕ್ಷಣದಲ್ಲಿ ಎಲ್ಲವೂ ಹೇಗೆ ಬದಲಾಯ್ತು ಗೊತ್ತಾ?
ಮೇಲಿನಿಂದ ಕೆಳಕ್ಕೆ ಬಿದ್ದ ನವ ಜೋಡಿ
Edited By:

Updated on: Dec 01, 2021 | 11:29 AM

ಇತ್ತಿಚೇಗೆ ಮದುವೆ ಆಗುವುದು ಎಂದರೆ ಹೊಸತನವನ್ನು ನಮ್ಮ ಮದುವೆಯಲ್ಲಿ ನಾವು ಕಾಣಬೇಕು. ಯಾರು ಕೂಡ ಆಗದ ಹಾಗೆ ಮದುವೆಯಲ್ಲಿ ಅಲಂಕಾರಗಳಾಗಬೇಕು, ಎಲ್ಲಾ ವಿಷಯದಲ್ಲೂ ಹೊಸತನ ಇರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿಯೇ ಏನೇನೋ ಕಸರತ್ತು ನಡೆಸುತ್ತಾರೆ. ಆದರೆ ಕೆಲವೊಮ್ಮೆ ನಾವು ಏನು ಮಾಡಬೇಕು ಎಂದು ಸಿದ್ಧರಾಗಿರುತ್ತೆವೆಯೋ ಅದು ನಮಗೆ ಉಲ್ಟಾ ಆಗುವ ಸಾಧ್ಯತೆ ಇರುತ್ತದೆ. ಅಂತಹದ್ದೆ ಒಂದು ಸಂಗತಿ ಈಗ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Social media) ಆಗಿದೆ. ಆರತಕ್ಷತೆಗೆ ನವ ಜೋಡಿಯೊಂದು ಜೆಸಿಬಿಯಲ್ಲಿ ಬಂದಿದೆ. ಈ ಪಾರ್ಟಿಗೆ ಆಗಮಿಸುವ ವೇಳೆ ಜೆಸಿಬಿಯಲ್ಲಿ ಅಗೆಯಲು ಬಳಸುವ ಯಂತ್ರದಲ್ಲಿ ಕುಳಿತಿರುವುದು ಅವಾಂತರಕ್ಕೆ ಕಾರಣವಾಗಿದ್ದು, ಮೇಲಿನಿಂದ ಇಬ್ಬರೂ ಕೆಳಕ್ಕೆ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.

ಪಾರ್ಟಿಯಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಕೈ ಬೀಸುತ್ತಾ ಮುನ್ನೆಡೆಯುವಾಗ ಏಕಾಏಕಿ ಜೆಸಿಬಿಯಲ್ಲಿ ದಂಪತಿ ಕುಳಿತ ಜಾಗ ಕೆಳಗಿನ ಕಡೆ ವಾಲಿದೆ ಇದರಿಂದಾಗಿ ಪಾರ್ಟಿಯಲ್ಲಿನ ಟೇಬಲ್ ಮೇಲೆ ಇಬ್ಬರು ಒಂದೇ ಸಮನೆ ಬಿದ್ದಿದ್ದಾರೆ. ಮಹಾ ಪತನ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಕಮೆಂಟ್​ ಮಾಡಿದ್ದಾರೆ.

ಬಿಳಿ ಗೌನ್ ಧರಿಸಿದ ವಧು ಮತ್ತು ಕಪ್ಪು ಸೂಟ್ ಧರಿಸಿದ ವರ ಜೆಸಿಬಿಯ ಅಗೆಯುವ ಯಂತ್ರದಲ್ಲಿ ಕುಳಿತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ದಂಪತಿಗಳು ವೇದಿಕೆಯಲ್ಲಿದ್ದಾರೆಂದು ಹೆಚ್ಚಿನವರು ಊಹಿಸಬಹುದಾದರೂ, ಈ ಜೋಡಿ ಮಾತ್ರ ಜೆಸಿಬಿ ಬಾಕ್ಸ್​ನಲ್ಲಿ ಮೇಲೆ ಕುಳಿತಿದ್ದರು. ಆದರೆ ಇದ್ದಕ್ಕಿದಂತೆ ಜೆಸಿಬಿ ಚಾಲಕ ದಂಪತಿ ಕುಳಿತ ಯಂತ್ರವನ್ನು ಕೆಳಕ್ಕೆ ತಿರುಗಿಸಿದ್ದಾನೆ.

ಜೆಸಿಬಿ ಚಾಲಕ ಮದುವೆಯ ಬಾಡಿಗೆ ಎಂದು ಮರೆತಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಕಂಡ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಮದುವೆಗೆ ಒಂದು ವಿಶಿಷ್ಟ ಅಂಶವಾಗಿ ಅಗೆಯುವ ಯಂತ್ರವನ್ನು ಕಾಯ್ದಿರಿಸುವುದು ಉಲ್ಲಾಸದಾಯಕವೆಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮೇಲಿನಿಂದ ಬಿದ್ದ ಜೋಡಿಗೆ ಪಾಪಾ ಎಷ್ಟು ನೋವಾಗಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:
Viral Video: ಕಲಾವಿದನ ಕೈಚಳಕದಿಂದ ಮೂಡಿದ ಕಣ್ಣಿನ ಚಿತ್ರ; ವಿಡಿಯೊ ವೈರಲ್​

Viral Video: ರಾತ್ರಿ ಹೊತ್ತು ರಸ್ತೆಯಲ್ಲಿ ಕಾರು ನಿಲ್ಲಿಸಿದ ಮಹಿಳೆಯರು ಕದ್ದಿದ್ದೇನು ಗೊತ್ತಾ? ತಮಾಷೆಯ ವಿಡಿಯೊ ಫುಲ್​ ವೈರಲ್​